ದೇಶ & ವಿದೇಶ

ಸುಶಾಂತ್ ಸಿಂಗ್ ರಾಜಪೂತ್ ಸಾವು‌ ಪ್ರಕರಣ- ಗೋವಾ ಹೋಟೆಲ್ ಉದ್ಯಮಿಗೆ ಇಂದು ಇಡಿ ಡ್ರಿಲ್- ಉದ್ಯಮಿ‌ ಜತಗೆ ರಾಜ್ಯ ಶಾಸಕನಿಗೆ ನಂಟು?

ಮುಂಬೈ :- ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ತನಿಖೆಗೆ ಸಂಬಂಧಪಟ್ಟಂತೆ ಗೋವಾದ ಉದ್ಯಮಿ ಹಾಗೂ ದಿ ಟ್ಯಾಮರಿಂಡ್ ಹೋಟೆಲ್ ಮಾಲೀಕ ಗೌರವ್ ಆರ್ಯಾಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ. ಸುಶಾಂತ್ ಸಿಂಗ್ ಬ್ಯಾಂಕ್ ಖಾತೆಯಿಂದ ಅಕ್ರಮ ಹಣ ವರ್ಗಾವಣೆ ಆಗಿದೆ ಎಂದು ಆರೋಪವಿದ್ದು, ನಟಿ ರಿಯಾ ಚಕ್ರವರ್ತಿ ಸೇರಿದಂತೆ ಏಳು ಜನರ ವಿರುದ್ಧ ಮನಿ ಲಾಂಡರಿಂಗ್ ಕೇಸ್ ದಾಖಲಾಗಿದೆ. ಈ ಕೇಸ್‌ಗೆ ಸಂಬಂಧಿಸಿದಂತೆ ಗೌರವ್ ಆರ್ಯಾಗೆ ಇಡಿ ಇಲಾಖೆ ನೋಟಿಸ್ ಜಾರಿ ಮಾಡಿದ್ದು,

ಆ.31 ಸೋಮವಾರ ಮುಂಬೈನ ಇಡಿ ಕಛೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಹೇಳಿದೆ. ಇನ್ನೂ ಸುಶಾಂತ ಸಾವಿನ ಪ್ರಕರಣದಲ್ಲಿ ಡ್ರಗ್ಸ್ ಕೂಡ ಪ್ರಮುಖ ವಿಷಯವಾಗಿ ಚರ್ಚೆಯಾಗ್ತಿದ್ದು, ಈ ವೇಳೆ ಗೌರವ್ ಆರ್ಯಾ ಹೆಸರು ಕೂಡ ಬೆಳಕಿಗೆ ಬಂದಿದೆ. ಇದರಿಂದ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ (ಎನ್‌ಡಿಪಿಎಸ್) ಕಾಯ್ದೆ, 1985ರ ಅಡಿಯಲ್ಲಿ ಗೌರವ್ ಆರ್ಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಇನ್ನು ಗೌರವ್ ಆರ್ಯಾ ನಡೆಸುತ್ತಿರುವ ಟ್ಯಾಮರಿಂಡ್ ಹೊಟೇಲ್‌ನಲ್ಲಿ ಗೋವಾದ ಬಿಜೆಪಿ‌ ಮುಖಂಡ ಚಂದ್ರಕಾಂತ್ ಭೋಜೆ ಪಾಟೀಲ್ ಹಾಗೂ ಕರ್ನಾಟಕದ ಶಾಸಕರೊಬ್ಬರು ಪಾಲುದಾರರಾಗಿದ್ದಾರೆ ಎಂದು ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೇ ದುಬೈನಲ್ಲೂ ಈ ಮೂವರ ಪಾಲುದಾರಿಕೆಯಲ್ಲಿ ಕೆಲ ಉದ್ದಿಮೆಗಳನ್ನು ನಡೆಸುತ್ತಿರುವ ಬಗ್ಗೆ ಕೂಡ ತಿಳಿದು ಬಂದಿದೆ.

ಆದ್ರೆ ಸದ್ಯ ಗೌರವ್ ಆರ್ಯಾಗೆ ಮಾತ್ರ ಇಡಿ ನೋಟಿಸ್ ಜಾರಿ ಮಾಡಿದ್ದು ಮುಂದಿನ‌ ದಿನಗಳಲ್ಲಿ ಆ ಕರ್ನಾಟಕದ ಶಾಸಕನಿಗೂ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಕರೆಯಬಹುದು.ಇನ್ನು ಡ್ರಗ್ಸ್ ಡೀಲರ್‌ಗಳ ಜೊತೆ ರಿಯಾ ಚಕ್ರವರ್ತಿ ಸಂಪರ್ಕ ಹೊಂದಿದ್ದರು. ಮತ್ತು ಸುಶಾಂತ್‌ಗೂ ಡ್ರಗ್ಸ್ ನೀಡುತ್ತಿದ್ದರು ಎಂಬ ಆರೋಪ ಇದೆ. ಡ್ರಗ್ಸ್ ಡೀಲರ್ ಜೊತೆ ರಿಯಾ ವಾಟ್ಸಾಪ್ ಸಂಭಾಷಣೆ ಬಹಿರಂಗವಾಗಿದೆ.

Show More

Related Articles

Leave a Reply

Your email address will not be published. Required fields are marked *

Back to top button
error: Content is protected !!