ಕರ್ನಾಟಕಜಿಲ್ಲಾ

ಹೆತ್ತ ಮಗುವನ್ನೇ ಮಾರಿದ ಪೋಷಕರು ಅಮಾನವೀಯ ಘಟನೆಗೆ ಸಾಕ್ಷಿಯಾದ ತಿನಕಲ್ಲು ಗ್ರಾಮ.

ಚಿಕ್ಕಬಳ್ಳಾಪುರ :- ಹೆತ್ತ ಮಗುವನ್ನು ಮಾರಿದ ಅಮಾನವೀಯ ಘಟನೆಯೊಂದು ಚಿಂತಾಮಣಿ ತಾಲೂಕಿನ ತಿನಕಲ್ಲು ಗ್ರಾಮದಲ್ಲಿ ನೆಡೆದಿದೆ. ಗ್ರಾಮದ ನರಸಿಂಹಮೂರ್ತಿ ಮತ್ತು ಮಹಾಲಕ್ಷ್ಮಿ ದಂಪತಿಯು ತಮ್ಮ ನಾಲ್ಕು ತಿಂಗಳ ಹೆಣ್ಣು ಮಗುವನ್ನು ಮಾರಾಟ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ‌.

ಮಗು ಕಾಣದೇ ಇದ್ದಾಗ ಅನುಮಾನಗೊಂಡ ಗ್ರಾಮಸ್ಥರು ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ಮಾಹಿತು ನೀಡಿದ್ದು, ನಂತರ ಸ್ಥಳಕ್ಕೆ ಭೇಟಿ ನೀಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ಮುಂದೆ ದಂಪತಿ ಹೆಣ್ಣು ಮಗುವನ್ನು ಅಪರಿಚಿತ ವ್ಯಕ್ತಿಗೆ ಒಂದು ಲಕ್ಷ ರೂಪಾಯಿಗೆ ಮಾರಿರುವುದಾಗಿ ಹೇಳಿದ್ದಾರೆ.

ಇನ್ನೂ ತಂದೆ ನರಸಿಂಹಮೂರ್ತಿಗೆ ಅತಿಯಾದ ಕುಡಿತದ ಚಟದ ದಾಸನಾಗಿದ್ದು ಬಡತನವೇ ಮಗು ಮಾರಾಟ ಮಾಡಲು ಮೂಲ ಕಾರಣ ಎಂದು ತಿಳಿದು ಬಂದಿದೆ. ಇನ್ನೂ ಹೆಚ್ಚಿನ ವಿಚಾರಣೆಗೆಂದು ಪೋಷಕರನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

Show More

Related Articles

Leave a Reply

Your email address will not be published. Required fields are marked *

Back to top button
error: Content is protected !!