ಪ್ರವಾಸ/ಕಾಲೇಜ್ ಕ್ಯಾಂಪಸ್

ಮ್ಯೂಸಿಯಂನಂತೆ ಮಿಂಚುತ್ತಿರುವ ಕಲಬುರ್ಗಿಯ ಕನ್ನಡ ಅದ್ಯಯನ ಪೀಠ..

ಕಲಬುರ್ಗಿ :- ಇದಾವುದೋ ಮ್ಯೂಸಿಯಂ ಅನ್ಕೊಂಡ್ರಾ ಖಂಡಿತ ನಿಮ್ಮ ಊಹೆ ತಪ್ಪು. ಇದು ಕಲಬುರಗಿ ವಿಶ್ವವಿದ್ಯಾಲಯದ ಕನ್ನಡ ಸಾಹಿತ್ಯ ಅಧ್ಯಯನ ಸಂಸ್ಥೆ. ಸದಾ ಹೊಸತನಕ್ಕೆ ಮತ್ತು ಸೃಜನಶೀಲ ಓದಿಗೆ ಅಣಿಯಾಗಿರುವ ಕನ್ನಡ ಸಾಹಿತ್ಯ ಅಧ್ಯಯನ ಸಂಸ್ಥೆಯು ತನ್ನ ಇಡೀ ಕಟ್ಟಡದ ತುಂಬೆಲ್ಲಾ ಹೊಸತನದ ಐಕ್ಯತೆಗೆ ದಾರಿ ಮಾಡಿದೆ. ಅಲ್ಲೆಲ್ಲೊ ಗಾಂಧಿ ತದೇಕದಿಂದ ಧ್ಯಾನಸ್ಥನಾಗಿ.. ಕುವೆಂಪು ಮತ್ತು ಕನ್ನಡದ ತಲೆಬರಹದ ರಾರಾಜಿಸುವ ರೀತಿಯಲ್ಲಿ ಇಡೀ ಅಧ್ಯಯನ ಸಂಸ್ಥೆ ಸಾಂಕೇತಿಕವಾಗಿ ಹೊಸ ಛಾಪನ್ನು ತನ್ನ ಹೆಗಲಿಗೆ ಏರಿಸಿದೆ. ಇದರ ಹಿಂದಿನ ಸಂಕಲ್ಪತನದ ರೂವಾರಿ ಕನ್ನಡ ಸಾಹಿತ್ಯ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಪ್ರೋ.ಎಚ್.ಟಿ.ಪೋತೆ ಅವರು. ಕೆಲಕಾಲ ಇಲ್ಲಿ ಸಂಚರಿಸಿದರೆ ಮನಸ್ಸು ಹಸಿರಾಗುವುದಂತು ಸತ್ಯ. ನಿವೊಮ್ಮೆ ಕಲಬುರಗಿಗೆ ಬಂದಾಗ ಈ ಕಡೆ ಭೇಟಿ ನೀಡಿ..

ವಿಜಯಭಾಸ್ಕರ.ಕಲಬುರಗಿ.

Show More

Leave a Reply

Your email address will not be published. Required fields are marked *

Back to top button
error: Content is protected !!