
ಗದಗ :- ಮಂಗಗಳು ಆಂದ್ರೆ ಅವು ಹಿಂದೂಗಳಿಗೆ ಆಂಜನೇಯನ ಸ್ಥಾನದಲ್ಲಿ ಇಟ್ಟು ಪೂಜಿಸ್ತಾರೆ. ಈ ಮಂಗಗಳಿಂದ ಅಕಸ್ಮಾತ್ ಆಗುವ ಕೆಲ ಘಟನೆಗಳು ಚಮತ್ಕಾರಕ್ಕೆ, ವಿಸ್ಮಯಕ್ಕೆ ಸಾಕ್ಷಿಯಾಗುತ್ತವೆ.
ಅದರಲ್ಲೂ ಮೊಹರಮ್ ಅಂದ್ರೆ ಅದು ಹಿಂದೂ ಮತ್ತು ಮುಸ್ಲಿಂ ಸಮುದಾಯದವರಿಗೆ ಭಾವೈಕ್ಯತೆಯ ಹಬ್ಬ. ಈ ನಡುವೆ ಒಂದು ಗ್ರಾಮದಲ್ಲಿ ಮೊಹರಮ್ ವೇಳೆ ಮಸೀದಿಯೊಳಗೆ ಹೊಕ್ಕು ವಿಶಿಷ್ಟ ಧಾರ್ಮಿಕ ಭಾವನೆಗೆ ಸಾಕ್ಷಿಯಾಗಿವೆ. ಮೊಹರಮ್ ಆಚರಣೆ ವೇಳೆ ಜುಮ್ಮಾ ಮಸೀದಿಯೊಳಗೆ ಬಂದು ದೇವರಿಗೆ ತಮ್ಮದೆ ದಾಟಿಯಲ್ಲಿ ನಮಸ್ಕರಿಸಿ ಭಕ್ತಿ ಮೆರೆದಿವೆ.
ಅಂದಹಾಗೆ ಈ ಘಟನೆ ನಡೆದಿರುವುದು ಗದಗ ಜಿಲ್ಲೆಯ ಸೊರಟೂರ ಗ್ರಾಮದಲ್ಲಿ. ಮಸೀದಿಯಲ್ಲಿ ಮೌಲಾನಾ ದೇವರ ಪೂಜೆ ವೇಳೆ ಹಲವು ಮಂಗಗಳು ಬಂದವು. ಆ ವೇಳೆ ಮಸೀದಿಯಲ್ಲಿರುವ ಜನರು ಭಯಭೀತಗೊಂಡಿದ್ದರು. ಸಾಕಷ್ಟು ಜನಸಂದಣಿ ಇದ್ದರೂ ಯಾರ ಭಯವಿಲ್ಲದೇ ಕಪಿಗಳು ಅಲ್ಲಾಹನ ದರ್ಶನ ಪಡೆದವು. ನೆರೆದವರು ಈ ಕೋತಿಗಳನ್ನು ಓಡಿಸಲು ಎಷ್ಟೇ ಪ್ರಯತ್ನ ಮಾಡಿದರೂ ಸಹ ಪ್ರಯೋಜನವಾಗಲಿಲ್ಲ. ನಂತರ ಊದು, ಲೋಬಾನದ ಹೊಗೆ ಹಾಕಿ ಮಂತ್ರ ಪಠಿಸಿ ಆಝಾ ಕೂಗಿ ದೇವರಿಗೆ ನಮಸ್ಕರಿಸಿದ ನಂತರ ಅಲ್ಲಿಂದ ಕಾಲ್ಕಿತ್ತವು. ಆಂಜನೇಯ ಸ್ವರೂಪದ ಕಪಿಗಳು ಮೊಹರಮ್ ವೇಳೆ ಅಲ್ಲಾಹನ ಬಳಿ ಬಂದಿರುವುದು ಕಾಕತಾಳೀಯವಾದರೂ ಅವುಗಳು ದೇವರ ಸ್ವರೂಪ ಅಂತ ಭಕ್ತರು ಮಾತನಾಡಿಕೊಳ್ತಿದ್ರು.
ಸೊರಟೂರ ಗ್ರಾಮದ ಹಿಂದೂ-ಮುಸ್ಲಿಂ ಸಾಮರಸ್ಯ ಸಾರಲು ಮಸೀದಿಯಲ್ಲಿ ಮಂಗಗಳು ಪ್ರವೇಶಿಸಿ ಭಾವೈಕ್ಯತೆಗೆ ಸಾಕ್ಷಿಯಾದವು.