ದೇಶ & ವಿದೇಶ

ಪ್ರಧಾನಿ ಮನ್ ಕೀ ಬಾತ್ ಗೆ ಕಡಿಮೆಯಾದ ಜನಪ್ರಿಯತೆ?

ದೆಹಲಿ :- 2014 ನೇ ಅಕ್ಟೋಬರ್ 3 ರಂದು ಮನ್ ಕೀ ಬಾತ್ ಎಂಬ ವಿನೂತನ ಕಾರ್ಯಕ್ರಮದೊಂದಿಗೆ ಪ್ರಧಾನಿ ನರೇಂದ್ರ ಮೋದಿ ದೇಶದ ಪ್ರಮುಖ ವಿದ್ಯಮಾನಗಳ ಕುರಿತು ಮಾತನಾಡುತ್ತಿದ್ದರು.

ಕಾಲ‌ ಕಳೆದಂತೆ ಅಳಿಯ ಕೂಡ ಹಳಬ ಎಂಬ ಗಾದೆಯಂತೆ ದೇಶದ ಜನತೆ ನಿಧಾನವಾಗಿ ಪ್ರಧಾನಿ ಮೇಲೆ ವಿಶ್ವಾಸ ಕಳೆದುಕೊಂಡ ಹಾಗೆ ಕಾಣಿಸುತ್ತಿದೆ. 70 ಕ್ಕೂ ಹೆಚ್ಚು ಮನ್ ಕೀ ಬಾತ್ ಕಾರ್ಯಕ್ರಮಗಳನ್ನು ನೀಡಿದ ಪ್ರಧಾನಿಯವರ ಇತಿಹಾಸದಲ್ಲಿಯೇ ಅತೀ ಕಡಿಮೆ ಲೈಕ್ಸ್ ಮತ್ತು ಹೆಚ್ಚು ಡಿಸ್ ಲೈಕ್ಸ್ ಗಳನ್ನು ಪಡೆದು ವಿಶ್ವಾಸ ಕಳೆದುಕೊಂಡರೇನೋ? ಎಂಬ ಚರ್ಚೆಯು ಎಲ್ಲೇಡೆ ಪ್ರಾರಂಭವಾಗಿದೆ.
ದೇಶದ ಮೂಲೆ ಮೂಲೆಗಳಲ್ಲಿ ನೆಡೆದಂತಹ ಸಣ್ಣ ಸಣ್ಣ ಕಾರ್ಯಗಳನ್ನು ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿ ಜನಪ್ರಿಯತೆ ಪಡೆದಿದ್ದ ವಿಶಿಷ್ಟ ಕಾರ್ಯಕ್ರಮ ನಿಧಾನವಾಗಿ ತನ್ನ ಜನಪ್ರಿಯತೆ ಕಳೆದುಕೊಳ್ಳುತ್ತಿದೆ ಎಂದರೆ ತಪ್ಪಾಗಲಾರದು.. ಇಂದಿನ ಮನ್ ಕಿ ಬಾತ್ ಕಾರ್ಯಕ್ರಮಕ್ಕೆ ಲೈಕ್ ಗಿಂತ ಹೆಚ್ಚು ಡಿಸಲೈಕ್ ಬಂದಿವೆ.

ಇಂದಿನ ಮನಕಿಬಾತ್ ಕಾರ್ಯಕ್ರಮವನ್ನು 2.30 ಲಕ್ಷ ‌ಜನ ವೀಕ್ಷಣೆ ಮಾಡಿದ್ದಾರೆ. ಈ ಪೈಕಿ 5.5k ಜನ ಲೈಕ್ ಮಾಡಿದ್ದು, 75k ಜನ ಡಿಸಲೈಕ್ ಮಾಡಿದ್ದಾರೆ. ಜನಪ್ರಿಯತೆ ಕಳೆದುಕೊಳ್ಳುತ್ತಿದೆ ಎಂದು ಹೇಳಲು ಇದು ಸಾಕ್ಷಿಯಾಗಿದೆ.

Show More

Related Articles

Leave a Reply

Your email address will not be published. Required fields are marked *

Back to top button
error: Content is protected !!