ಜಿಲ್ಲಾ
ಕೋವಿಡ್ ಆಸ್ಪತ್ರೆಯಲ್ಲಿ ಹಂದಿಗಳ ಓಡಾಟ, ಮಾಲೀಕರ ಮೇಲೆ ಪ್ರಕರಣ ದಾಖಲು…

ರಾಯಚೂರು:- ಆಗಸ್ಟ 23 ರಂದು ಓಪೆಕನ ಕೋವಿಡ್ ಆಸ್ಪತ್ರೆಯಲ್ಲಿ ಹಂದಿಗಳ ಓಡಾಟದ ದೃಶ್ಯಗಳು ಪ್ರಸಾರವಾಗಿದ್ದವು. ನಂತರ ಹಂದಿಗಳನ್ನು ಹಿಡಿದು ಬೇರೆಡೆ ಸಾಗಿಸಲಾಗಿತ್ತು..ಆದರೆ ನಿನ್ನೆ ನಗರಸಭೆಯ ಪರಿಸರ ಅಧಿಕಾರಿಯಿಂದ ಹಂದಿ ಮಾಲೀಕರಾದ ನರಸಿಂಹಲು ಎಂಬುವರ ಮೇಲೆ ರಾಯಚೂರಿನ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪರಿಸರ ಹಾನಿ ಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.