ಕರ್ನಾಟಕ

ದಸರಾ ಮಹೋತ್ಸವಕ್ಕೂ ಕೋವಿಡ್ ಕರಿನೆರಳು

ಮೈಸೂರು :- ದಸರಾ ಎಂದರೆ ಸಾಕು ತಕ್ಷಣ ನೆನಪಾಗೋದು ಮೈಸೂರು ನಗರಿಯ ಸಂಭ್ರಮ, ಒಡೆಯರು ಬಿಟ್ಟು ಹೋದ ಆ ಗತವೈಭವ, ನೋಡುಗರ ಮೈ ಜುಮ್ಮೆನ್ನಿಸುವ ಚಾಮುಂಡಿ ತಾಯಿಯ ಜಂಭೂ ಸವಾರಿ, ಜನಮನ ಸೆಳೆಯುವ ಪಂಜಿನ ಕವಾಯತ್ತು, ಸಾಂಸ್ಕೃತಿಕ ಉಡುಗೆ ತೊಡುಗೆಗಳ ಪ್ರದರ್ಶನ ಹೀಗೆ ವಿವಿಧ ಕಾರ್ಯಕ್ರಮಗಳ ಮೂಲಕ ಜಗತ್ತಿನ ಗಮನವನ್ನೇ ತನ್ನತ್ತ ಸೆಳೆಯದುಕೊಳ್ಳುತ್ತಿದ್ದ ಮೈಸೂರು ದಸರಾ ಈ ಬಾರಿ ಮೋಡ ಮುಸುಕಿದಂತಾಗುವ ಲಕ್ಷಣಗಳು ಎದ್ದು ಕಾಣುತ್ತಿವೆ.

ಹೌದು ಕೊರೋನಾ ಭಾರತಕ್ಕೆ ಕಾಲಿಟ್ಟಾಗಿನಿಂದ ಅದು ಮಾಡಿದ ಅವಾಂತರ ಒಂದೆರೆಡಲ್ಲ ಒಂದುಕಡೆ ಅದೆಷ್ಟೋ ಜನರ ಪ್ರಾಣ ಕಿತ್ತು ಕೇಕೆ ಹಾಕಿದರೆ ಮತ್ತೊಂದೆಡೆ ಜಾತ್ರೆ, ಹಬ್ಬಗಳಂತಹ ಸಂಭ್ರಮದ ವಾತಾವರಣವನ್ನೇ ಹಾಳು ಮಾಡಿಬಿಟ್ಟಿತು. ಇಷ್ಟಾದರೂ ತಣ್ಣಗಾಗದ ಕೋವಿಡ್ ಕಣ್ಣು ಇದೀಗ ಮೈಸೂರು ದಸರಾ ಮೇಲೂ ಬಿದ್ದಂತಿದೆ.

ಇದಕ್ಕೆ ಸಾಕ್ಷಿ ಎನ್ನುವಂತೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಮಾದ್ಯಮಗಳಿಗೆ ಸುಳಿವು ಕೊಟ್ಟಿದ್ದು ಈ ಬಾರಿ ಜಂಬೂಸವಾರಿ ಮೆರವಣಿಗೆ ನಡೆಯುವ ಸಾಧ್ಯತೆ ಕಡಿಮೆ ಇದೆ ಎಂದಿದ್ದಾರೆ ದಸರಾ ಉನ್ನತ ಮಟ್ಟದ ಸಭೆಯೂ ಮೈಸೂರಿನಲ್ಲಿಯೇ ನಡೆಯಲಿದ್ದು ಮುಂದಿನ ವಾರ ಮುಖ್ಯಮಂತ್ರಿ ಯಡಿಯೂರಪ್ಪ ಕೊಡಗು ಜಿಲ್ಲಾ ಪ್ರವಾಸ ಹಮ್ಮಿಕೊಂಡಿದ್ದಾರೆ. ಆ ವೇಳೆ ಮೈಸೂರಿಗೆ ಆಗಮಿಸಲಿರುವ ಯಡಿಯೂರಪ್ಪ ದಸರಾ ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ.
ಅಂದೇ ದಸರಾ ಮಹೋತ್ಸವದ ರೂಪುರೇಷೆಗಳ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು
ಸಚಿವ ಸೋಮಶೇಖರ್ ಹೇಳಿದ್ದಾರೆ.

ಒಟ್ಟಿನಲ್ಲಿ ಸಾಂಸ್ಕೃತಿಕ ನಗರಿಗೂ ಕೋವಿಡ್ ಸೋಂಕಿನ ಕರಿನೆರಳು ತಾಗಲಿದ್ದು ಜೆಂಬೂ ಸವಾರಿ ವೀಕ್ಷಣೆಯ ಕನಸು ಕಂಡವರಿಗೆ ನಿರಾಸೆಯಾಗೋದಂತು ಸತ್ಯ

Show More

Related Articles

Leave a Reply

Your email address will not be published. Required fields are marked *

Back to top button
error: Content is protected !!