ಕರ್ನಾಟಕ

ಅನುದಾನಿತ ಮತ್ತು ಖಾಸಗಿ ಶಾಲಾ ಶಿಕ್ಷಕರಿಗೆ ಸ್ಥಿತಿಗೆ ಮರುಗಿದ ಶಿಕ್ಷಣ ಸಚಿವರು…

ಬೆಂಗಳೂರು :- ಕೊರೊನಾ ಹಿನ್ನಲೆಯಲ್ಲಿ ಖಾಸಗಿ ಶಾಲಾಶಿಕ್ಷಕರ ಸ್ಥಿತಿ ಶೋಚನೀಯವಾಗಿದೆ. ಸಕಾಲಕ್ಕೆ ಶಾಲಾ ಆರಂಭಾತಿಯಿಲ್ಲದೆ, ಶಿಕ್ಷಕರು ತರಕಾರಿ ಮಾರಾಟ, ನರೇಗಾ ಯೋಜನೆಯಡಿಯಲ್ಲಿ ಕೆಲಸ ಮಾಡುತ್ತಿರುವುದನ್ನು ಕಂಡು ತುಂಬಾ ಬೇಸರವಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಸುರೇಶ ಕುಮಾರ ಹೇಳಿದರು.

ಇಂದು ಶಿಕ್ಷಕರ ಸದನದಲ್ಲಿ ನಡೆದ ಶಿಕ್ಷಕರ ಸಹಾಯವಾಣಿ-ಶಿಕ್ಷಣ ವಾಣಿ ಆಪ್ ಮತ್ತು ಡ್ಯಾಷ್ ಬೋರ್ಡ ಪರಿವರ್ತನಾ ಕೇಂದ್ರಗಳಿಗೆ ಚಾಲನೆ ನೀಡಲಾಯಿತು. ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ ಅವರಿಂದ ಈ ಎಲ್ಲ ಸೌಲಭ್ಯಗಳಿಗೂ ಚಾಲನೆ‌ ದೊರೆಯಿತು.

ಶಿಕ್ಷಣವಾಣಿ- ಸಹಾಯವಾಣಿ: ಪರಿಹಾರಕ್ಕೆ ಶಿಕ್ಷಣ ವಾಣಿ-ಸಹಾಯವಾಣಿ ಕೇಂದ್ರ ಸ್ಥಾಪನೆ ಮಾಡಲಾಗಿದೆ. ಕುಂದುಕೊರತೆಗಳಿಗೆ ಸಂಬಂಧಿಸಿದಂತೆ ಸಹಾಯವಾಣಿ ಅಲ್ಲದೇ ವಾಟ್ಸಆಪ್ ಸೌಲಭ್ಯ. ಪ್ರತ್ಯೇಕ ಫ್ರೀ-ಟೋಲ್ ಸಂಖ್ಯೆಯ ಲಭ್ಯತೆ. ಮಾಹಿತಿ ಅರ್ಜಿದಾರರ ಮೊಬೈಲ್‍ಗೆ ಲಭ್ಯವಾಗಲಿದೆ. ಇದರ ವ್ಯವಸ್ಥಿತ ನಿರ್ವಹಣೆಯನ್ನು ನಾನೇ ಖುದ್ದಾಗಿ ನಿರಂತರವಾಗಿ ಪರಾಮರ್ಶಿಸಲಿದ್ದೇನೆ ಎಂದರು.

ಶಿಕ್ಷಣ ಸಚಿವರ ಡ್ಯಾಷ್ ಬೋರ್ಡ್-ಪರಿವರ್ತನ: ಇಲಾಖೆಯ ಆಡಳಿತ ಪ್ರಕ್ರಿಯೆಗೆ ತಾಂತ್ರಿಕ ಸ್ಪರ್ಷ ನೀಡಲು ಇ.ಎಂ.(ಶಿಕ್ಷಣ ಸಚಿವ) ಡ್ಯಾಷ್‍ಬೋರ್ಡ್-‘ಪರಿವರ್ತನ’- ಸ್ಥಾಪನೆಯಾಗಿದೆ. ಇದರಲ್ಲಿ ಇಲಾಖೆಗೆ ಸಂಬಂಧಿಸಿದ ಎಲ್ಲ ವಿಷಯಗಳ ಪರಿಶೀಲನೆ. ಪ್ರತಿ ವಿದ್ಯಾರ್ಥಿಯ ಸಾಧನೆಯ ಟ್ರ್ಯಾಕಿಂಗ್ ವ್ಯವಸ್ಥೆ-ಎಸ್‍ಎಟಿಎಸ್ ಅಳವಡಿಕೆಯಾಗಿದೆ. ಕಳೆದ ಬಾರಿ ಕಡ್ಡಾಯ ವರ್ಗಾವಣೆ ಆಗಬೇಕಾದವರು ಮತ್ತು ಹೆಚ್ಚುವರಿ ಶಿಕ್ಷಕರೆಂದು ವರ್ಗಾವಣೆ ಆಗಬೇಕಾದವರಿಗೆ ಮೊದಲ ಆದ್ಯತೆ ದೊರೆಯಲಿದೆ. ಈ ಎಲ್ಲ ತಂತ್ರಜ್ಞಾನಾಧಾರಿತ ವ್ಯವಸ್ಥೆಯಿಂದ ಶಿಕ್ಷಕರು ಶಾಲೆ ಬಿಟ್ಟು ಬಿಇಒ/ಡಿಡಿಪಿಐ ಕಚೇರಿಗೆ ಅಲೆದಾಟ ನಿಲ್ಲಲಿದೆ. ಇದರಿಂದ ಭ್ರಷ್ಟಾಚಾರಕ್ಕೂ ಕಡಿವಾಣ ಬೀಳಲಿದೆ. ಇದರಿಂದ ಇಲಾಖೆ‌ಯ ಎಲ್ಲ‌ ನೌಕರರು ಹಾಗೂ ವಿದ್ಯಾರ್ಥಿಗಳಿಗೂ ಅನುಕೂಲವಾಗಲಿದೆ ಎಂದರು.

Show More

Related Articles

Leave a Reply

Your email address will not be published. Required fields are marked *

Back to top button
error: Content is protected !!