
ಬಳ್ಳಾರಿ/ಹೊಸಪೇಟೆ :- ಹೊಸಪೇಟೆಯ ಬಳ್ಳಾರಿ ಸರ್ಕಲನಲ್ಲಿರುವ ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಸಿಬ್ಬಂದಿ ಮಹೇಶ (28) ಆತ್ಮಹತ್ಯೆ ಮಾಡಿಕೊಂಡ ಯುವಕ. ಹೊಸಪೇಟೆ ಮೂಲದ ಈತ ಈಕ್ವಟಿಸ್ ಬ್ಯಾಂಕನಲ್ಲಿ ಲೀಗಲ್ ಅಡ್ವೈಸರ್ ಆಗಿ ಕೆಲಸ ನಿರ್ವಹಿಸುತ್ತಿದ್ದ. ಲಾಕಡೌನ ಹಿನ್ನಲೆಯಲ್ಲಿ ಬಿಸಿನೆಸ್ ಇಲ್ಲದ ಕಾರಣ ಸಾಮಾನ್ಯವಾಗಿ ಒತ್ತಡ ಹೆಚ್ಚಿದೆ. ಸರಿಯಾದ ದಾಖಲೆ ಇಲ್ಲದೇ ಇದ್ದರೂ ಲೋನ್ ನೀಡುವಂತೆ ಒತ್ತಾಯಿಸಿದ್ದಾರೆ. ಈ ಕುರಿತು ಮನನೊಂದ ವಿಡಿಯೋ ಮಾಡಿ ತನ್ನ ತಾಯಿಯ ಬಳಿ ಆತ್ಮಹತ್ಯೆ ವಿಷಯ ತಿಳಿಸಿದ್ದ ಮಹೇಶ ತನ್ನಗೇ ಆದ ನೋವನ್ನು ವಿಡಿಯೋ ಅಲ್ಲದೇ ಪತ್ರದಲ್ಲಿಯೂ ಕೂಡ ತಿಳಿಸಿದ್ದಾನೆ.