ಪುಲ್ವಾಮಾ ದಾಳಿ ಚಾರ್ಜ್ಶೀಟ್ ಸಲ್ಲಿಸಿದ NIA; ದಾಳಿ ಹಿಂದೆ 26/11 ದಾಳಿ ರೂವಾರಿ ಮಸೂದ್ ಅಜರ್ ಹಾಗೂ ಸಹೋದರ ಅಸ್ಗರ್..

ನವದೆಹಲಿ: 2019ರ ಫೆಬ್ರವರಿಯಲ್ಲಿ ನಡೆದಿದ್ದ ಪುಲ್ವಾಮಾ ಭೀಕರ ಭಯೋತ್ಪಾದನಾ ದಾಳಿ ಕುರಿತು ರಾಷ್ಟ್ರೀಯ ತನಿಖಾ ಸಂಸ್ಥೆ ಇಂದು ಜಮ್ಮು ನ್ಯಾಯಾಲಯಕ್ಕೆ 5 ಸಾವಿರ ಪುಟಗಳ ಚಾರ್ಜ್ಶೀಟ್ ಸಲ್ಲಿಸಿದೆ. ಪಾಕ್ ಮೂಲದ ಜೈಶ್ ಎ ಮೊಹ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ಹಾಗೂ ಆತನ ಸಹೋದರ ರೌಫ್ ಅಸ್ಗರ್ ದಾಳಿ ಹಿಂದಿನ ಸಂಚು ರೂಸಿದ್ದರು ಎಂದು ಉಲ್ಲೇಖಿಸಿದೆ.
ಪುಲ್ವಾಮಾ ಬಳಿಯ ಹೆದ್ದಾರಿಯಲ್ಲಿ ನಡೆದ ಉಗ್ರರ ಆತ್ಮಾಹುತಿ ದಾಳಿಗೆ 40 ವೀರ ಯೋಧರು ಹುತಾತ್ಮರಾಗಿದ್ದರು. ಇನ್ನೂ ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್ಸೀಟ್ನಲ್ಲಿ ಉಗ್ರರ ದಾಳಿ ಹಿಂದೆ ಯಾರ್ಯಾರ ಕೈವಾಡ ಇತ್ತು, ದಾಳಿ ಹೇಗೆ ರೂಪಿಸಲಾಯಿತು ಎಂಬ ಬಗ್ಗೆ ಸಂಪೂರ್ಣ ವಿವರಗಳನ್ನು ನೀಡಲಾಗಿದೆ. ಅಷ್ಟೇ ಅಲ್ಲದೇ ಚಾರ್ಜ್ಶೀಟ್ನಲ್ಲಿ ಒಟ್ಟು 20 ಆರೋಪಿಗಳನ್ನು ಹೆಸರಿಸಲಾಗಿದ್ದು ಇವರಲ್ಲಿ ಕೆಲವರು ಸ್ಥಳೀಯರು ಎಂಬುದು ತಿಳಿದುಬಂದಿದೆ.
ಇನ್ನು ದಾಳಿ ಹಿಂದೆ ಇದ್ದವರನ್ನು ಗುರುತಿಸಿ ಭಾರತೀಯ ಸೇನೆ ಈಗಾಗಲೇ ಹೊಡೆದುರಿಳಿಸದ್ದು, ಅವರ ಹೆಸರುಗಳನ್ನೂ ಚಾರ್ಜ್ಸೀಟ್ನಲ್ಲಿ ಉಲ್ಲೇಖಿಸಲಾಗಿದೆ. ಎನ್ಐಎಗೆ ಸಿಕ್ಕ ದೂರವಾಣಿ ಸಂಭಾಷಣೆ, ವಾಟ್ಸಪ್ ಮೆಸೇಜ್, ವಿಡಿಯೋಗಳು ಹಾಗೂ ಫೋಟೋಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.