ಕರ್ನಾಟಕಜಿಲ್ಲಾ

ಅಂತರರಾಜ್ಯ ಬಸಗಳ ಸೇವೆ ಆರಂಭಿಸಲು ಚಿಂತನೆ : ಡಿಸಿಎಂ ಲಕ್ಷ್ಮಣ ಸವದಿ.


ಬೆಳಗಾವಿ :- ಅಂತರಾಜ್ಯ ಬಸ್ ಗಳ ಸೇವೆ ಆರಂಭಿಸಲು ಅನೇಕ ರಾಜ್ಯಗಳಿಂದ ಪತ್ರಗಳು ಬಂದಿವೆ.ಅದರಲ್ಲಿ ಆಂಧ್ರಪ್ರದೇಶದಿಂದ‌ ಅಂತರಾಜ್ಯ ಬಸ್ ಸೇವೆ ಆರಂಭಕ್ಕೆ ಒಪ್ಪಿಗೆ ಸೂಚಿಸಲಾಗಿದೆ. ಸಧ್ಯದಲ್ಲಿ‌ ಆಂಧ್ರಪ್ರದೇಶ – ಕರ್ನಾಟಕ ಮಧ್ಯೆ ಬಸ್ ಸಂಚಾರ ಪ್ರಾರಂಭ ಮಾಡುತ್ತೇವೆ.‌ ಇನ್ನೂ ತೆಲಂಗಾಣ, ಗೋವಾ, ತಮಿಳುನಾಡು ರಾಜ್ಯದಿಂದ ಒಪ್ಪಿಗೆ ಬರುವುದು ಬಾಕಿಯಿದೆ.
ಮಹಾರಾಷ್ಟ್ರದಲ್ಲಿ ಕೊರೊನಾ ತೀವ್ರತೆ ಇರೋದ್ರಿಂದ ಬಸ್ ಸಂಚಾರ ಆರಂಭ ಬಗ್ಗೆ ಕೇಳಿಲ್ಲ, ಮತ್ತು ಮಹಾರಾಷ್ಟ್ರಕ್ಕೆ ರಾಜ್ಯಕ್ಕೆ ಬಸ್ಸಗಳನ್ನು ಓಡಿಸುವ ಬಗ್ಗೆ ಇನ್ನೂ ಚಿಂತನೆ ಮಾಡಿಲ್ಲ ಎಂಬುವುದಾಗಿ ಡಿಸಿಎಂ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿಕೆ‌ ನೀಡಿದ್ದಾರೆ.

ಸಾರಿಗೆ ಇಲಾಖೆ ವತಿಯಿಂದ ಕೋರಿಯರ್ ಸೇವೆ ಆರಂಭಿಸಲು ಟೆಂಡರ್ ಪ್ರಕ್ರಿಯೆ ಪೂರ್ಣವಾಗಿದೆ : ಡಿಸಿಎಂ ಲಕ್ಷ್ಮಣ ಸವದಿ..

ಕರ್ನಾಟಕ ಸಾರಿಗೆ ಇಲಾಖೆ ವತಿಯಿಂದ ಕೋರಿಯರ್ ಸೇವೆ ಆರಂಭಿಸಲು ಟೆಂಡರ್ ಪ್ರಕ್ರಿಯೆ ಪೂರ್ಣವಾಗಿದೆ. ಇನ್ನೂ ಕೆಲವೇ ದಿನಗಳಲ್ಲಿ ಕೋರಿಯರ್ ಸೇವೆ ಆರಂಭವಾಗಲಿದೆ. ಖಾಸಗಿ ಸಾರಿಗೆ ಕಂಪನಿಗಳಿಗೆ ಬರುವ ಆದಾಯ ಸರ್ಕಾರಕ್ಕೂ ಬರಲಿ ಎನ್ನುವ ಉದ್ದೇಶದಿಂದ ಸೇವೆ ಪ್ರಾರಂಭಿಸಲಾಗುತ್ತಿದೆ. ಇದರಿಂದ ವರ್ಷಕ್ಕೆ ನೂರಾರು ಕೋಟಿ ರೂಪಾಯಿ ಆದಾಯ‌ ಬರುವ ನಿರೀಕ್ಷೆ ಇದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ತಿಳಿಸಿದರು.

ಸಾಮಾಜಿಕ ಅಂತರ ಕಾಯ್ದುಕೊಳ್ಳಲು ರಾಜಹಂಸ ಬಸ್ಸಗಳ ಮಾರ್ಪಾಡು, ಕೊರೊನಾ ಭಯ ಹೊಸ ರಾಮಬಾಣ : ಡಿಸಿಎಂ ಲಕ್ಷ್ಮಣ ಸವದಿ

ಸಾಮಾಜಿಕ ಅಂತರ ಕಾಯ್ದುಕೊಳ್ಳಲು ರಾಜಹಂಸ ಬಸ್ಸುಗಳನ್ನು ಮಾರ್ಪಾಡುಗೊಳಿಸಿ ಜನರಲ್ಲಿ ಕೊರೊನಾ ಬಗ್ಗೆಯ ಭಯ ಕಡಿಮೆ ಮಾಡಲು ಮತ್ತು ಕೊರೊನಾ ನಿಯಂತ್ರಣಕ್ಕೆ ಈ ಮಾರ್ಪಾಡು ಸಹಕಾರಿಯಾಗಲಿದೆ‌ ಮತ್ತು ಲಾಂಗ್ ರೂಟ್ ಬಸ್ ಗಳನ್ನು ಮಾರ್ಪಾಡಿಸುವ ಯೋಜನೆ ಹೊಂದಿದ್ದೇವೆ ಎಂದು ಬೆಳಗಾವಿಯಲ್ಲಿ ಸಾರಿಗೆ ಸಚಿವ ಹಾಗೂ ಡಿಸಿಎಂ ಲಕ್ಷ್ಮಣ ಸವದಿ ತಿಳಿಸಿದರು..

Show More

Related Articles

Leave a Reply

Your email address will not be published. Required fields are marked *

Back to top button
error: Content is protected !!