ಕರ್ನಾಟಕ
ಶೀಘ್ರದಲ್ಲೇ ಶಿಕ್ಷಕರಾಗಿ ಹೆಲ್ಪಲೈನ್ ಆರಂಭ- ಸಚಿವ ಸುರೇಶ ಕುಮಾರ ಮಾಹಿತಿ!

ಬೆಂಗಳೂರು- ರಾಜ್ಯದಲ್ಲಿ ಶಿಕ್ಷಕರು ತಮ್ಮ ಕೆಲಸಗಳಿಗೆ ಪದೇ ಪದೇ ಕಚೇರಿಗೆ ಅಲೆದಾಡುತ್ತಿದ್ದಾರೆ. ಇದನ್ನು ತಪ್ಪಸಲು ಸಚಿವ ಸುರೇಶ ಕುಮಾರ್ ಒಂದು ಹೊಸ ಪ್ಲ್ಯಾನ್ ಮಾಡಿದ್ದಾರೆ. ಅತಿ ಶೀಘ್ರದಲ್ಲೇ ಶಿಕ್ಷಕರಿಗಾಗಿ ಹೆಲ್ಪಲೈನ್ ಆರಂಭಿಸಲು ನಿರ್ಧರಿಸಲಾಗಿದೆ.
ಹೆಲ್ಪಲೈನ್ ಹೇಗಿರಬೇಕು ಎಂಬ ಬಗ್ಗೆ ಈಗ ಅಂತಿಮ ಹಂತದ ಸಿದ್ಧತೆಗಳು ನಡೆಯುತ್ತಿವೆ. ಶಿಕ್ಷಕರ ಎಲ್ಲಾ ಅನುಮಾನಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಹೆಲ್ಪಲೈನ್ ಉಪಯೋಗಕ್ಕೆ ಬರಲಿದೆ. ಇದರಿಂದ ಶಿಕ್ಷಣ ಬಿಇಓ ಹಾಗೂ ಡಿಡಿಪಿಐ ಕಚೇರಿಗೆ ಭೇಟಿ ನಿಡೋದು ತಪ್ಪಲಿದೆ.