ಕರ್ನಾಟಕ

SDPI ಬ್ಯಾನ್​ಗೆ ಸಚಿವ ಸಂಪುಟ ಸಭೆಯಲ್ಲಿ ಒಮ್ಮತದ ನಿರ್ಧಾರ; ಕಾನೂನು ಇಲಾಖೆ ವರದಿ ಬಳಿಕ ಕೇಂದ್ರಕ್ಕೆ ಶಿಫಾರಸು.

ಬೆಂಗಳೂರು :- ಶಾಸಕ ಅಖಂಡ ಶ್ರೀನಿವಾಸ್​ ನಿವಾಸ ಹಾಗೂ ಪೊಲೀಸ್​ ಠಾಣೆ ಧ್ವಂಸ ಮಾಡಿದ ಪ್ರಕರಣದಲ್ಲಿ ಎಸ್​ಡಿಪಿಐ ಸಂಘಟನೆಯ ಕೈವಾಡ ಇದೆ ಎಂದು ಹೇಳಾಗಿತ್ತು. ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ವಿಚಾರ ಪ್ರಮುಖವಾಗಿ ಚರ್ಚೆಯಾಗಿದೆ. ಈ ಸಂಘಟನೆಯನ್ನು ಬ್ಯಾನ್​ ಮಾಡಲು ಸಚಿವ ಸಂಪುಟ ಸಭೆಯಲ್ಲಿ ಒಮ್ಮತದ ನಿರ್ಧಾರ ಮಾಡಲಾಗಿದ್ದು, ಕಾನೂನು ಇಲಾಖೆ ವರದಿ ಬಳಿಕ ಕೇಂದ್ರಕ್ಕೆ ಈ ಬಗ್ಗೆ ಶಿಫಾರಸು ಮಾಡಲು ನಿರ್ಧರಿಸಲಾಗಿದೆ.

ಇಂದು ಬೆಳಗ್ಗೆ ವಿಧಾನಸಭೆಯಲ್ಲಿ ಸಚಿವ ಸಂಪುಟ ಸಭೆ ಕರೆಯಲಾಗಿತ್ತು. ಈ ವೇಳೆ ಬಹುತೇಕ ಸಚಿವರು ಎಸ್​ಡಿಪಿಐ ಸಂಘಟನೆ ಬ್ಯಾನ್​ ಮಾಡಲು ಆಗ್ರಹಿಸಿದ್ದರು. ಸಂಘಟನೆಗೆ ಸಂಬಂಧಿಸಿದಂತೆ ಕಾನೂನು ಇಲಾಖೆ ನೀಡುವ ವರದಿ ಬಳಿಕೆ ಕೇಂದ್ರಕ್ಕೆ ಈ ಬಗ್ಗೆ ಶಿಫಾರಸು ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಬೆಂಗಳೂರು ಗಲಭೆ ವಿಚಾರದಲ್ಲಿ ಕಾಂಗ್ರೆಸ್ ನಾಯಕಯರು ನೀಡುತ್ತಿರುವ ಹೇಳಿಕೆಗಳಿಗೆ ಸಂಪುಟ ಸಭೆಯಲ್ಲಿ ಕೆಲವು ಸಚಿವರು ಆಕ್ರೋಶ ಹೊರ ಹಾಕಿದ್ದಾರೆ. ಪ್ರಕರಣವನ್ನು ಕಾಂಗ್ರೆಸ್ ರಾಜಕೀಯಗೊಳಿಸಲಾಗುತ್ತಿದೆ. ವಿಷಯಾಂತರ ಮಾಡಿ ಬಿಜೆಪಿ ಮೇಲೆಯೇ ಆರೋಪ ಮಾಡಲಾಗುತ್ತಿದೆ. ಕಾಂಗ್ರೆಸ್ ಆರೋಪಗಳಿಗೆ ನಾವು ತೀಕ್ಷ್ಣ ಪ್ರತಿಕ್ರಿಯೆ ಕೊಡಬೇಕಿದೆ. ಹೀಗಾಗಿ ಎಸ್​​ಡಿಪಿಐ ಸಂಘಟನೆಯನ್ನು ನಿಷೇಧಿಸುವ ತೀರ್ಮಾನವನ್ನು ಸರ್ಕಾರ ಕೈಗೊಳ್ಳಬೇಕು ಎಂದರು.

ತನ್ವೀರ್ ಸೇಟ್ ಮೇಲಿನ ಮಾರಣಾಂತಿಕ‌ ಹಲ್ಲೆ, ಮಂಗಳೂರು ಗಲಭೆ ಪ್ರಕರಣ, ಡಿಜೆ ಹಳ್ಳಿ-ಕೆಜಿ ಹಳ್ಳಿ ಗಲಭೆಗಳಲ್ಲಿ ಎಸ್​ಡಿಪಿಐನ ನೇರ ಪಾತ್ರ ಇದೆ. ಇದನ್ನು ಆಧರಿಸಿ ಕೇಂದ್ರಕ್ಕೆ ಎಸ್​​ಡಿಪಿಐ ನಿಷೇಧ ಕುರಿತು ಶಿಫಾರಸು ಮಾಡೋಣ ಎಂದು ಹೇಳಿದರು. ಈ ಮೂಲಕ ಸಭೆಯಲ್ಲಿ ಸಿ ಟಿ ರವಿ, ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್, ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೇರಿ ಹಲವರು ಎಸ್​​ಡಿಪಿಐ ನಿಷೇಧಕ್ಕೆ ಒತ್ತಾಯಿಸಿದರು. ಎಸ್‌ಡಿಪಿಐ ಬ್ಯಾನ್ ಶಿಫಾರಸಿಗೆ ದಾಖಲೆ ಕಲೆಹಾಕಿ ಪಕ್ಕಾ ವರದಿ ನೀಡುವಂತೆ ಕೇಳಲಾಗಿದೆ. ಕಾನೂನು ಮತ್ತು ಗೃಹ ಇಲಾಖೆ ವರದಿ ಬಳಿಕ ಶಿಫಾರಸು ಮಾಡಲು ನಿರ್ಧರಿಸಲಾಗಿದೆ.

Show More

Related Articles

Leave a Reply

Your email address will not be published. Required fields are marked *

Back to top button
error: Content is protected !!