ಪ್ರವಾಸ/ಕಾಲೇಜ್ ಕ್ಯಾಂಪಸ್

ಪ್ರೇಮಿಯಾಗುವುದು ಸಹಜವಲ್ಲ..

ವಿಜಯಭಾಸ್ಕರ.ಎಂ. ಸೇಡಂ..
ಇಳಿ ಸಂಜೆಯಲ್ಲಿ ವ್ಯಾಪಕವಾದ ಕಾಳ ಕತ್ತಲ್ಲು ಆವರಿಸುತ್ತಾ ಆಳವಾಗಿ ಒಂದು ವಿಷಯ ಇನ್ನಿಲ್ಲಿದೆ ಕಾಡುತ್ತಾ ಇದ್ದ ಘಳಿಗೆಯಲ್ಲಿ ಹಠಾತ್ತನೆ ಬಾಗಿಲಿನ ಕೊಂಡಿ ಸದ್ದು ಕೇಳಿಸಿತು. ಅಲ್ಲೆ ಕಮರಿ ಮಲಗಿರುವ ಅವಳ ನಾಜೂಕಿನ ಸೊಂಟಕ್ಕೆ ಹಾಕಿ ಎಬ್ಬಿಸಲು ಮುಂದಾದೆ. ಅವಳು ಸುತಾರಾಮ್ ಏಳಲೇ ಇಲ್ಲ. ಮತ್ತಷ್ಟು ಮಬ್ಬು ಕವಿದಂತೆ ರೂಮಿನ ತುಂಬಾ ಹರಡಿ ಮಲಗಲು ಯತ್ನಿಸಿದಳು. ಸಂಜೆ ಮುಗಿದು ಕತ್ತಲು ವೀಪರಿತ ತಾರಕಕ್ಕೆ ಏರುತ್ತಾ ಇತ್ತು.


ಬಾಗಿಲಲ್ಲಿ ಒವುಚಿ ಕುಳಿತ ಇಲಿಯೊಂದರೆ ಚೇಷ್ಟೆ ಒಂದೊಂದು ಭಾರಿ ಭಯವು ಹುಟ್ಟಿಸುತ್ತಿತ್ತು. ಇವಳು ಒಲವಿನ ಹಾಸಿಗೆ ಮೇಲೆ ಥೇಟ್ ಪಕಳೆಗಳಂತೆ ಹರಡಿದ್ದರೆ. ನನ್ನೊಳಗೆ ಒಲವಿನ ಮಳೆ ಬಿಟ್ಟುಬಿಡದೆ ಸುರಿಯುತ್ತಿತ್ತು. ಅತೀ ನಂಬುಗೆಯ ಪ್ರೀತಿಯ ಗೌಜಿಗೆ ಬಿದ್ದ ನಾನು ಅವಳ ಒಂದಷ್ಟು ಅಸಹಜ ಕ್ರೀಯೆ ತತ್ತರಿಸಿ ಹೋಗಿದ್ದೇನೆ. ಒಂದು ಸಂಜೆ ಆವತ್ತು ಬಹುಶಃ ರಕ್ಷಾ ಬಂಧನ. ಶುಭಾಶಯ ತಿಳಿಸಿದ ನನಗೆ ಪೆಡಮ್ ಭೂತವಾಗಿ ಕಾಡಿದಂತು ಸತ್ಯ.


ಆ ಹೆಳೋದೆ ಮರೆತಿದ್ದೆ. ಅವಳು ನನ್ನೆಲ್ಲಾ ಜವಾಬಿನ, ಕೌತುಕದ, ಅಚ್ಚರಿಯ ಎಲ್ಲವನ್ನೂ ಜಪಿಸುವ ಭಾವನಾತ್ಮಕ ಆಗಾರದ ರೂವಾರಿಯಂತೆ ಸದಾ ನನ್ನೊಳಗೆ ಜರಿಯಾಗಿ ಹರಿಯುವವಳು. ಇಚೆಗೆ ಜೀರ್ಣಿಸಿಕೊಳ್ಳಲಾಗದ ಸೋಜಿಗದ ಅವಳಿಂದ ಉತ್ತರಕ್ಕೊಳಪಟ್ಟೆ. ಅಂದು ಊರು ಸುತ್ತು ರಾತ್ರಿ ಮೂರು ಪುದಿನಾ ಚಿಕನ್ ಬಿರಿಯಾನಿ ತಿನ್ನುವ ಮಧ್ಯ ಅವಳ ಏರಿಳಿತದ ಮಾತು ನನ್ನ ಗಂಟಲಿನ ಬಿರಿಯಾನಿಗೆ ತದೇಕವಾಗಿ ತೊಂದರೆ ನೀಡುತ್ತಾ ಇತ್ತು.

ಅಲ್ಲೆ ಇದ್ದ ವೈನ್ ಗಂಟಲಿಗಿಳಿಸಿದೆ. ಅವಳದು ಮತ್ತದೆ ಚಿರಾಟ. ಬಿರಿಯಾನಿ ತಿಂದು ಮುಗಿಸಿದವನೆ ಅವಳ ಧನಿಗೆ ಕಿವಿಯಾಗಿ ಕೂತೆ. ಒಲವೆಂದರೆ, ಪ್ರೀತಿಯೆಂದರೆ, ನಾಜೂಕಿನ ಭಾವನೆ ಅವಳೊಳಗೆ ಘಾಢವಾಗಿ ಹರಿದು ಉಗ್ರ ಪ್ರೇಮಿಯಾಗಲು ಹಾತೋರೆಯುತ್ತಾ ಇದ್ದಳು. ಒಂದು ಗುಡುಕು ವೈನ್ ಕುಡಿಸಿದೆ. ಸಮಾಧಾನದಿಂದ ನಮ್ಮಿಬ್ಬರ ಗೆಳತನದ ಐತಿಹಾಸಿಕ ಸಂತಸದ ಘಳಿಗೆಯನ್ನು ರಿ ಲೋಡ್ ಮಾಡುತ್ತಾ ಹೋದೆ. ಅವಳ ಕಣ್ಣಲ್ಲಿ ಜಿನುಗುತ್ತಾ ಹನಿ ಟಪ್ ಎಂದು ಸ್ಕ್ರೀನ್ ಮೇಲೆ ಬಿತ್ತು. ಅವಳು ಎಲ್ಲಿ ನನ್ನೊಳಗೆ ಕಳೆದೋದಳೊ ನನಗರಿವಿಲ್ಲ. ನಾನಂತೂ ಸುಕ್ಕಾ ಗೆಳತನ ಬಯಸುವ ಮನುಷ್ಯ. ಅವಳಲ್ಲಿ ಕರಗದ ಪ್ರೇಮವನಿಟ್ಟುಕೊಂಡು ಕೊರಗುವ ಬದಲು. ನೇರಾ ನೇರಾ ಒಂದು ಶುಭ ಅಂತ್ಯಕ್ಕೆ ಪರಿತಪಿಸುತ್ತಾ ಮುಂದೊಂದು ದಿನ ಎದೆ ಜಲ್ಲನೆಸುವ ಕ್ಷಣ ಬರುವ ಮೊದಲೇ ಎಚ್ಚೆತ್ತು ದೂರವಿದ್ದಾಗಲೆ ಅರ್ಥೈಸಿಕೊಳ್ಳಲಿಕೆ ಸಾಧ್ಯ. ಅವಳೊಟಿಗ್ಟಿನ ಅಷ್ಟೂ ನೆನಪಿನ ದೋಣಿಯಲ್ಲಿ ನಾವಿಕನಾಗಿ ಇರುವೆ. ಅವಳಂತೂ ಮುನಿಸಿನ ಪರಮಾವಧಿಗೆ ಜೋತುಬಿದ್ದು ಕಾಲವೇಯಾಯಿತು.

Show More

Leave a Reply

Your email address will not be published. Required fields are marked *

Back to top button
error: Content is protected !!