ಕರ್ನಾಟಕಜಿಲ್ಲಾ

ಗಣೇಶ ಮೂರ್ತಿಯ ತಯಾರಿಕಾ ಕೈಚಳಕ, ವೃತ್ತಿ ಅಷ್ಟು ಸುಲಭವಲ್ಲ..

ಬೆಳಗಾವಿ :- ಗಣಪತಿಬಪ್ಪ ಮೋರೆಯಾ, ಗಣೇಶ ಹಬ್ಬ ಆಚರಿಸುವುದರೊಂದಿಗೆ ಮೂರ್ತಿ ತಯಾರಿಸುವವರ ತಿಂಗಳುಗಟ್ಟಲೇ ಶ್ರಮ ನೆನೆಸಿಕೊಳ್ಳುವುದು ಅತ್ಯಗತ್ಯ. ಬೆಳಗಾವಿ ನಗರದ ಅನಗೋಳ ಬಾಂದೂರಗಲ್ಲಿಯ ಆನಂದ. ಭೀಮರಾವ್. ಪೋತದಾರ. ಮತ್ತು ಕುಟುಂಬದವರು ಕಳೆದ 50 ಕ್ಕೂ ಹೆಚ್ಚು ವರ್ಷಗಳಿಂದ ವಿವಿಧ ಮೂರ್ತಿಗಳನ್ನು ಸಿದ್ಧಪಡಿಸಿ ಪ್ರಸಿದ್ದಿ ಗಳಿಸಿದ್ದಾರೆ.
ಆನಂದ ಪೋತದಾರ ವೃತ್ತಿಪರ ಬೇರೆ ಸಣ್ಣ ಪುಟ್ಟ ಕೆಲಸಕಾರ್ಯಗಳನ್ನು ಮಾಡಿ ಜೀವನ ನೆಡೆಸುತ್ತಿದ್ದಾರೆ. ಆದರೆ ವಂಶಪಾರಂಪರ್ಯವಾಗಿ ಬಂದ ಮೂರ್ತಿ ತಯಾರಿಕಾ ಕಲೆಯನ್ನು ಮುಂದುವರೆಸಿದರು. ತಂದೆಯೊಂದಿಗೆ ಬಾಲ್ಯದಲ್ಲೇ ಕೈಜೋಡಿಸಿ ಸಣ್ಣ ಸಣ್ಣ ಮೂರ್ತಿಗಳನ್ನು ಸಿದ್ದಪಡಿಸುವ ಹವ್ಯಾಸ ರೂಢಿಸಿಕೊಂಡು ಪರಿಣಿತಿ ಹೊಂದಿದರು.
ಗಣಪತಿ ಹಬ್ಬಕ್ಕೆ ಇವರ ಮನೆಯಲ್ಲಿ ಮೂರು ತಿಂಗಳಿಂದ ಗಣಪತಿ ಮೂರ್ತಿ ಸಿದ್ದಪಡಿಸಲಾಗುತ್ತಿದೆ. ಬೆಳಗಾವಿಯ ಸುತ್ತಮುತ್ತಲಿನ ಜೇಡಿ ಮಣ್ಣು ಸಂಗ್ರಹಿಸಿ, ಅದಕ್ಕೆ ಹತ್ತಿ ಬೆರೆಸಿ ವಿವಿಧ ಮೂರ್ತಿಗಳನ್ನು ಸಿದ್ದಪಡಿಸಲು ಆರಂಭಿಸುತ್ತೇವೆ ಎಂದು ಆನಂದ ಪೋತದಾರ ಹೇಳುತ್ತಾರೆ‌.
ಸಿದ್ದಪಡಿಸಿದ ಮೂರ್ತಿಗಳಿಗೆ ಮಕ್ಕಳು ಮತ್ತು ಪತ್ನಿ ಬಣ್ಣ ಮತ್ತು ಅಂತಿಮ‌ ಸ್ಪರ್ಶ ನೀಡುತ್ತಾರೆ. ಇನ್ನೂ ಈ ಕಲೆಯನ್ನು ಪ್ರಸ್ತುತ ಪೀಳಿಗೆಗೆ ಈ ಕೊಡುಗೆಯನ್ನು ಸಾಗರ ಆನಂದ ಪೋತದಾರ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ‌.

Show More

Related Articles

Leave a Reply

Your email address will not be published. Required fields are marked *

Back to top button
error: Content is protected !!