ಕರ್ನಾಟಕಜಿಲ್ಲಾ

ಗಣಪತಿ ಬಪ್ಪಾ ಮೋರಯಾ.. ಗೌರಿ ಗಣೇಶ ಹಬ್ಬದ ಖುಷಿಯಲ್ಲಿರುವ ನಾವು ಅದರ ಹಿಂದಿನ ಶ್ರಮದ ಕುರಿತು ಅರೆಯುವುದು ಅಗತ್ಯ..

ಬೆಳಗಾವಿ :- ಗಣಪತಿಬಪ್ಪ ಮೋರೆಯಾ, ಗಣೇಶ ಹಬ್ಬ ಆಚರಿಸುವುದರೊಂದಿಗೆ ಮೂರ್ತಿ ತಯಾರಿಸುವವರ ತಿಂಗಳುಗಟ್ಟಲೇ ಶ್ರಮ ನೆನೆಸಿಕೊಳ್ಳುವುದು ಅತ್ಯಗತ್ಯ. ಬೆಳಗಾವಿ ನಗರದ ಅನಗೋಳ ರಂಗುನಾಥ ಪೇಠೆಯ ಸುರೇಶ ಶ್ರೀಧರ ಚೀವಟೆ ಮತ್ತು ಕುಟುಂಬದವರು ಕಳೆದ 30 ಹೆಚ್ಚು ವರ್ಷಗಳಿಂದ ವಿವಿಧ ಮೂರ್ತಿಗಳನ್ನು ಸಿದ್ಧಪಡಿಸಿ ಪ್ರಸಿದ್ದಿ ಗಳಿಸಿದ್ದಾರೆ.
ಸುರೇಶ ಚಿವಟೆ ಮತ್ತು ಮಗ ಸಂಕೇತ ಚಿವಟೆ ವೃತ್ತಿಪರ ಸ್ಟೇಷನರಿ ಅಂಗಡಿಯನ್ನು ಅವಲಂಬಿಸಿ ಜೀವನ ನೆಡೆಸುತ್ತಿದ್ದಾರೆ. ಆದರೆ ವಂಶಪಾರಂಪರ್ಯವಾಗಿ ಬಂದ ಮೂರ್ತಿ ತಯಾರಿಕಾ ಕಲೆಯನ್ನು ಮುಂದುವರೆಸಿದರು. ತಂದೆಯೊಂದಿಗೆ ಬಾಲ್ಯದಲ್ಲೇ ಕೈಜೋಡಿಸಿ ಸಣ್ಣ ಸಣ್ಣ ಮೂರ್ತಿಗಳನ್ನು ಸಿದ್ದಪಡಿಸುವ ಹವ್ಯಾಸ ರೂಢಿಸಿಕೊಂಡು ಪರಿಣಿತಿ ಹೊಂದಿದರು.
ಗಣಪತಿ ಹಬ್ಬಕ್ಕೆ ಇವರ ಮನೆಯಲ್ಲಿ ಮೂರು ತಿಂಗಳಿಂದ ಗಣಪತಿ ಮೂರ್ತಿ ಸಿದ್ದಪಡಿಸಲಾಗುತ್ತಿದೆ. ಬೆಳಗಾವಿಯ ಸುತ್ತಮುತ್ತಲಿನ ಜೇಡಿ ಮಣ್ಣು ಸಂಗ್ರಹಿಸಿ, ಅದಕ್ಕೆ ಹತ್ತಿ ಬೆರೆಸಿ ವಿವಿಧ ಮೂರ್ತಿಗಳನ್ನು ಸಿದ್ದಪಡಿಸಲು ಆರಂಭಿಸುತ್ತೇವೆ ಎಂದು ಸಂಕೇತ ಚಿವಟೆ ಹೇಳುತ್ತಾರೆ‌.
ಸಿದ್ದಪಡಿಸಿದ ಮೂರ್ತಿಗಳಿಗೆ ಸುರೇಶ ಚಿವಟೆರವರ ಮಕ್ಕಳಾದ ಸಂಕೇತ ಹಾಗೂ ಆತನ ಸಹೋದರಿ ಮತ್ತು ಪತ್ನಿ ಬಣ್ಣ ಮತ್ತು ಅಂತಿಮ‌ ಸ್ಪರ್ಶ ನೀಡುತ್ತಾರೆ. ಇನ್ನೂ ಈ ಕಲೆಯನ್ನು ಪ್ರಸ್ತುತ ಪೀಳಿಗೆಯೂ ಮೊಬೈಲ್, ಬೈಕ್ ಮತ್ತು ಇನ್ನಿತರ ಕ್ರೇಜ್ ಹೊಂದಿದ್ದರೆ ಸಂಕೇತ ಚಿವಟೆಯವರದ್ದು ವಿಭಿನ್ನ ಹವ್ಯಾಸವಾಗಿದೆ.

Show More

Related Articles

Leave a Reply

Your email address will not be published. Required fields are marked *

Back to top button
error: Content is protected !!