ಪ್ರಪಂಚಕ್ಕೆ ತಲೆನೋವಾಗಿದ್ದ ಕರೋನ ವೈರಾಣು ವಿರುದ್ದ ಔಷಧವು ಕನ್ನಡಿಗನಿಂದ ತಯಾರಾಗುತ್ತಿದೆ.

ಬೆಂಗಳೂರು :- ಪ್ರಪಂಚಕ್ಕೆ ತಲೆನೋವಾಗಿದ್ದ ಕರೋನ ವೈರಾಣು ವಿರುದ್ದ ಔಷಧವು ಕನ್ನಡಿಗನಿಂದ ತಯಾರಾಗುತ್ತಿದೆ. ಐಸಿಎಂಆರ್ ಲ್ಯಾಬ್ ನಲ್ಲಿ ಸಸ್ಯಾಧರಿತ ಔಷದ ಪ್ರಯೋಗವು ನೆಡೆದಿದೆ. ಕಿಲ್ಲರ್ ಕೊರೊನಾ ಎದುರಿಸಲು ಕನ್ನಡಗರಿಂದಲೇ ಔಷಧಿ ಸಿಗುವ ಸಾಧ್ಯತೆ ಇದೆ. ಕನ್ನಡಿಗ ವೈದ್ಯ ಹೃಷಿಕೇಶ್ ದಾಮ್ಲೆ ಔಷಧಿ ಕಂಡು ಹಿಡಿದಿದ್ದಾರೆ. ಐಸಿಎಂಆರ್ ಲ್ಯಾಬ್ ನಲ್ಲಿ ಸಸ್ಯಾಧರಿತ ಔಷಧಿ ಪ್ರಯೋಗ ನೆಡೆಯುತ್ತಿದೆ.
ಈ ರೀತಿ ಕೊರೊನಾ ವೈರಸ್ ಮೇಲೆ ಆರ್ಯುವೇದದಲ್ಲಿ ನಡೆದ ಮೊದಲ ಪ್ರಯೋಗ ಇದಾಗಿದೆ ಎಂದು ತಿಳಿದುಬಂದಿದೆ. ಸಸ್ಯಧಾರಿತ ಪರೀಕ್ಷೆಯಲ್ಲಿ ಒಂದು ಸಸ್ಯದ ಗುಣವು ಕೊರೊನಾವನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ.
ಫರೀದಾಬಾದನ ಜೈವಿಕ ತಂತ್ರಜ್ಞಾನ ಸಂಸ್ಥೆಯಲ್ಲಿ ನಡೆದ ಪ್ರಯೋಗದಲ್ಲಿ ವೈರಸ್ ಕೊಂದಿರುವ ಕುರಿತು ಲ್ಯಾಬ್ ವರದಿ ನೀಡಿದೆ. ಒಟ್ಟು 3 ಲಕ್ಷ ಸಸಿಗಳಲ್ಲಿ 10 ಸಸ್ಯಗಳನ್ನು ಟೆಸ್ಟ್ ನೆಡೆಸಿದ ಐಸಿಎಂಆರ್ ಗೆ ಉತ್ತಮ ಫಲಿತಾಂಶ ದೊರೆತಿದೆ. ಈ 10 ಸಸ್ಯಗಳಲ್ಲಿ ನಾಲ್ಕು ಸಸ್ಯಗಳಲ್ಲಿ ಕೊರೊನಾ ವೈರಸ್ ಕೊಲ್ಲುವ ಶಕ್ತಿ ಹೊಂದಿವೆ. ಈ ಕುರಿತು ಲ್ಯಾಬ್ ರಿಪೋರ್ಟ್ ತಿಳಿಸಿದೆ.
ಪ್ರಸ್ತುತ ದಾಮ್ಲೆ ಮಾನವ ಪ್ರಯೋಗಕ್ಕೆ ಅನುಮತಿ ಕೋರಲಾಗಿದೆ ಎಂದು ತಿಳಿದುಬಂದಿದೆ. ಮಾನವ ಅನುಮತಿ ದೊರೆತರೆ ಮೂರು ತಿಂಗಳೊಳಗೆ ಔಷಧಿ ಸಿದ್ದವಾಗಲಿದೆ. ಪ್ರಯೋಗಕ್ಕೆ ಬಳಸಿದ ಸಸ್ಯದ ಹೆಸರನ್ನು ಬಹಿರಂಗ ಪಡಿಸಿಲ್ಲ.