ಕರ್ನಾಟಕಜಿಲ್ಲಾ

ಪಶ್ಚಿಮಘಟ್ಟ ಪ್ರದೇಶದಲ್ಲಿ ಮುಂದುವರೆದ ಮಳೆ, ಘಟಪ್ರಭಾ ನದಿಯಲ್ಲಿ ಹೆಚ್ಚುತ್ತಿರುವ ನೀರಿನ ಮಟ್ಟ ಆತಂಕದಲ್ಲಿ ಜನತೆ‌..!

ಬೆಳಗಾವಿ / ಗೋಕಾಕ :- ಘಟಪ್ರಭಾ ನದಿಯಲ್ಲಿ ಹೆಚ್ಚುತ್ತಲೇ ಇರುವ ನೀರಿನ ಮಟ್ಟದಿಂದ ಪ್ರವಾಹ ಸ್ಥಿತಿಯನ್ನು ಗೋಕಾಕ ತಾಲೂಕಿನ ಸುಣಧೋಳಿ ಸೇರಿದಂತೆ ಸುತ್ತಮುತ್ತಲಿನ ಹಲವಾರು ಹಳ್ಳಿಗಳು ಎದುರಿಸುತ್ತಿವೆ. ಮುಸಗುಪ್ಪಿ ಮತ್ತು ಸುಣಧೋಳಿ ಸೇತುವೆಗಳು ಮುಳುಗಡೆಯಾಗಿವೆ, ಮುಖ್ಯ ರಸ್ತೆಗಳೆಲ್ಲವು ಸಂಪೂರ್ಣ ಬಂದಾಗಿವೆ.

ಸಂಪೂರ್ಣ ನಡುಗಡ್ಡೆಯಂತಾಗುತ್ತಿರುವ ಸುಣಧೋಳಿ ಗ್ರಾಮ ಮುಂಜಾಗ್ರತಾ ಕ್ರಮವಾಗಿ ಗ್ರಾಮವನ್ನು ಬಿಟ್ಟು ಸುರಕ್ಷಿತ ಸ್ಥಳಗಳಿಗೆ ಜನರು ತೆರೆಳಿದ್ದಾರೆ. ಪ್ರಸಿದ್ದ ಜಡಿಸಿದ್ದೇಶ್ವರ ದೇವಸ್ಥಾನವು ಪೂರ್ತಿ ಜಲಾವೃತವಾದರೂ, ಅಪಾಯವನ್ನು ಲೆಕ್ಕಿಸದೇ ದೇವರ ದರ್ಶನಕ್ಕೆ ಭಕ್ತರು ಬರುತ್ತಿದ್ದಾರೆ.

ಇನ್ನೂ ಇದೇ ರೀತಿ ಗೋಕಾಕ ತಾಲೂಕಿನ ಉದ್ದಮ್ಮದೇವಿ ದೇವಸ್ಥಾನವು ಮುಳುಗಡೆಯಾಗಿದೆ‌. ಉದಗಟ್ಟಿ ಗ್ರಾಮವನ್ನು ಸುತ್ತುವರೆದಿರುವ ಘಟಪ್ರಭಾ ನದಿಯ ನೀರು, ಮುಂಜಾಗ್ರತಾ ಕ್ರಮವಾಗಿ ಗ್ರಾಮ ತೊರೆದು ಸುರಕ್ಷಿತ ಸ್ಥಳಗಳಿಗೆ ಜನರು ತೆರೆಳುತ್ತಿದ್ದಾರೆ.

Show More

Related Articles

Leave a Reply

Your email address will not be published. Required fields are marked *

Back to top button
error: Content is protected !!