
ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಮುಂದುವರೆದ ಮಳೆಯಿಂದಾಗಿ ಘಟಪ್ರಭಾ, ಮಾರ್ಕಂಡೇಯ, ಹಿರಣ್ಯಕೇಶಿ ನದಿಗಳು ಅಪಾಯದ ಮಟ್ಟ ಮೀರಿ ತುಂಬಿ ಹರಿಯುತ್ತಿವೆ. ಗೋಕಾಕ ನಗರದ ದನಗಳ ಪೇಟೆ, ಉಪ್ಪಾರ ಓಣಿ, ಮಹಾಲಿಂಗೇಶ್ವರ ನಗರಗಳು ಸೇರಿದಂತೆ ಹಲವಾರು ಬಡವಾಣೆಗಳು ಮುಳುಗಡೆಯಾಗಿದ್ದು, ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿಯಾಗಿದೆ. ಕಳೆದ ವರ್ಷದ ಪ್ರವಾಹದ ಕರಾಳ ನೆನೆಪು ಮಾಸುವ ಮುನ್ನವೇ ಮತ್ತೊಮ್ಮೆ ಪ್ರವಾಹ ಎದುರಾಗಿದೆ.