ಕರ್ನಾಟಕಜಿಲ್ಲಾ

ಕೃಷ್ಣ ನದಿಯಲ್ಲಿ ತೆಪ್ಪ ಮುಳುಗಿ, ನಾಲ್ಕು ಜನ ನಾಪತ್ತೆ, ನಿನ್ನೆಯಿಂದ ನೆಡೆಯತ್ತಿರುವ ಶೋಧ ಕಾರ್ಯ..

ರಾಯಚೂರು :- ರಾಯಚೂರು ತಾಲೂಕಿನ ಕುರ್ವಾಕುಲ ಗ್ರಾಮದ ನಾಲ್ಕು ಜನ ತೆಲಂಗಾಣದ ಪಂಚಾದಿಪಾಡದಿಂದ ದಿನಸಿ ಖರೀದಿಸಿ ವಾಪಸ್ಸಾಗುವಾಗ ತೆಪ್ಪ ಮುಳುಗಿ ನಾಲ್ವರು ಕಣ್ಮರೆಯಾಗಿದ್ದಾರೆ.

ಕಣ್ಮರೆಯಾದವರನ್ನು ಕುರ್ವಾಕುಲ ಗ್ರಾಮದ ಪಾರ್ವತಿ (55), ನರಸಮ್ಮ (36),ಸುಮಲತಾ(32), ಪೂಜಾ(10) ಎಂದು ತಿಳಿದು ಬಂದಿದೆ. ಇನ್ನೂ ನಾಪತ್ತೆಯಾದವರ ಶೋಧ ಕಾರ್ಯದಲ್ಲಿ ಎನಡಿಆರ್ಪ್ ತಂಡ ನಿನ್ನೆಯಿಂದ ಕೈಗೊಂಡಿದೆ. ನಿನ್ನೆ ಕತ್ತಲಾಗಿದ್ದರಿಂದ‌ ಅರ್ಧಕ್ಕೆ ಬಿಟ್ಟಿದ ಕಾರ್ಯಾಚರಣೆ ಇಂದು ಮುಂಜಾನೆ ಮತ್ತೆ ಆರಂಭವಾಗಿದೆ.

ತೆಲಂಗಾಣದ ಪಂಚಾದಿಪಾಡ ಸ್ಥಳದ ಹತ್ತಿರದಿಂದ ಕಾರ್ಯಾಚರಣೆ ಆರಂಭಿಸಲಾಗಿದೆ. 24 ಜನ ಎನ್ ಡಿಆರ್ಎಫ್ ಹಾಗು 12 ಜನ ಅಗ್ನಿ ಶಾಮಕದಳದ ಅಧಿಕಾರಿಗಳು ಶೋಧ ಕಾರ್ಯದಲ್ಲಿ ತೊಡಗಿದ್ದಾರೆ‌.ಮೂರು ಮೇಕ್ಯಾನೇಜಡ್ ಬೋಟ್ ಗಳನ್ನು ಬಳಸಿ ಕಾರ್ಯಾಚರಣೆ ನೆಡೆಯುತ್ತಿದೆ.

Show More

Related Articles

Leave a Reply

Your email address will not be published. Required fields are marked *

Back to top button
error: Content is protected !!