ಜಿಲ್ಲಾ

ಬೆಳಗಾವಿಯಲ್ಲಿ ಮುಂದುವರೆದ ಮಳೆ, ಹಲವೆಡೆ ನೀರು ನುಗ್ಗಿ ಜನರ ಜೀವನ ಅಸ್ಥವ್ಯಸ್ಥ..

ಬೆಳಗಾವಿ :- ಬೆಳಗಾವಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆಯಿಂದಾಗಿ ಹತ್ತಿರದ ಬಸವನ ಕುಡಚಿಯ ಬಸವೇಶ್ವರ ಮತ್ತು ಕಲ್ಮೇಶ್ವರ ದೇವಾಲಯಗಳು ಜಲಾವೃತ. ಬೆಳಗಾವಿ ಮಹಾನಗರದ ವಾರ್ಡ್ ನಂ. ೫೮ ದಲ್ಲಿ ಇರುವ ಈ ದೇವಾಲಯಗಳು ಪ್ರತಿ ವರ್ಷ ಜಲಾವೃತವಾಗುತ್ತಿದ್ದರೂ ಇಲ್ಲಿ ಜನಪ್ರತಿನಿಧಿಗಳು ತೆಲೆಕೆಡಸಿಕೊಂಡಿಲ್ಲ.

ದೇವರಾಜ ಅರಸು ಕಾಲನಿ ಮತ್ತು ಕೆ.ಎಚ್.ಬಿ. ಹೌಸಿಂಗ್ ಬೋರ್ಡ್ ನಿಂದ ನೀರು ಹರಿದು ಬರುತ್ತಿದೆ.‌ ಇದರಿಂದ ಸ್ಥಳೀಯರಿಗೆ ತುಂಬಾ ಸಮಸ್ಯೆಗಳಾಗುತ್ತಿವೆ. ವಾರ್ಡಿನ ಎಲ್ಲಾ ಚರಂಡಿಯ ನೀರು ರಸ್ತೆಯ ಮೇಲೆ ಹರಿಯುತ್ತದೆ. ಇದರಿಂದಾಗಿ ರೋಗಗಳು ಹರಡುವ ಸಾಧ್ಯತೆಗಳಿವೆ. ಕುಡಚಿಯ ಜನರು ಆತಂಕದಲ್ಲಿ ಜೀವನವನ್ನು ಸಾಗಿಸುತ್ತಿದ್ದಾರೆ. ಸಂಸದರ, ಶಾಸಕರ ಮತ್ತು ಕಾರ್ಪೊರೇಟರ ಗಮನಕ್ಕೆ ತಂದು ಆಗಿದೆ. ಮನವಿಗಳನ್ನು ಕೂಡ ಸಲ್ಲಿಸಲಾಗಿದೆ. ಆದರೆ ಯಾವುದೇ ರೀತಿಯ ಸ್ಪಂದನೆ ದೊರೆತಿಲ್ಲ.

Show More

Related Articles

Leave a Reply

Your email address will not be published. Required fields are marked *

Back to top button
error: Content is protected !!