ಕರ್ನಾಟಕ

ಶಾಂತಳಾಗಿದ್ದ ಮಲಪ್ರಭೆ, ಮತ್ತೆ ಆರ್ಭಟ ಪ್ರಾರಂಭಿಸಿದ್ದಾಳೆ…

ಖಾನಾಪುರ ಭಾಗದಲ್ಲಿ ಧಾರಾಕಾರವಾಗಿ ಮಳೆಯಾಗುತ್ತಿರುವುದರಿಂದ ಮಲಪ್ರಭಾ ನದಿಯ ಹಲವಾರು ಸೇತುವೆಗಳು ಮುಳುಗಡೆಯಾಗಿದ್ದು, ಅನೇಕ ಗ್ರಾಮಗಳು ನಿಧಾನವಾಗಿ ತಮ್ಮ ಸಂಪರ್ಕ ಕಳೆದುಕೊಳ್ಳುತ್ತಿವೆ. ಪಾರಶ್ವಾಡ, ಹಿರೇಮುನ್ನವಳಿ, ರಾಮದುರ್ಗ ಸೇರಿದಂತೆ ಗದಗ ಜಿಲ್ಲೆ ರೋಣ ಭಾಗದ 16 ಕ್ಕೂ ಹೆಚ್ಚು ಹಳ್ಳಿಗಳು ಆತಂತದಲ್ಲಿವೆ.

ಹೌದು ಪಶ್ಚಿಮ ಘಟ್ಟಗಳ ಸಾಲಲ್ಲಿ ಧಾರಾಕಾರವಾಗಿ ಮಳೆ ಮುಂದುವರೆದಿದ್ದು ಮಲಪ್ರಭಾ ನದಿ ಮೈದುಂಬಿ ಹರೆಯುತ್ತಿದ್ದು, ನವಿಲು ತೀರ್ಥ ಜಲಾಶಯ ತುಂಬಿದ್ದು ಮುಂಜಾಗ್ರತಾ ಕ್ರಮವಾಗಿ ಜಲಾಶಯದಿಂದ ನದಿಗೆ ನೀರು ಬಿಟ್ಟ ಪರಿಣಾಮ ರಾಮದುರ್ಗ ಸುರೇಬಾನ ರಸ್ತೆ ಬಂದಾಗಿದ್ದು ಜನ ಆತಂಕಕ್ಕ ಒಳಗಾಗಿದ್ದಾರೆ.

ನಿನ್ನೆ ಮಲಪ್ರಭಾ ಜಲಾನಯದಿಂದ 5 ಸಾವಿರ ಕ್ಯೂಸೆಕ್ ನೀರು ಬಿಟ್ಟಿದ್ದರು. ಇಂದು‌ ಮತ್ತೆ 10000 ಕ್ಯೂಸೆಕ್ ನೀರು ಬಿಡುಗಡೆ ಮಾಡಿದ್ದು, ಮಲಪ್ರಭಾ ನದಿಯ ನೀರಿನ ಒಳ ಹರಿವು ಹೆಚ್ಚಾಗಿದ್ದು ಇನ್ನೂ ಹೆಚ್ಚು ನೀರು ಬಿಡುಗಡೆ ಸಾದ್ಯತೆಯಿದೆ.‌

10 ಸಾವಿರಕ್ಕೂ ಹೆಚ್ಚು ನೀರು ಬಿಡುಗಡೆ ಮಾಡಿದ್ರೆ ನಡುಗಡೆಯಾಗಲಿರುವ ಲಖಮಾಪೂರ ಗ್ರಾಮ, ಇಡೀ ಗ್ರಾಮವನ್ನೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ ಎಂಬುವುದಾಗಿ ಗದಗ ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಮಾಹಿತಿ ನೀಡಿದ್ದಾರೆ.

Show More

Related Articles

Leave a Reply

Your email address will not be published. Required fields are marked *

Back to top button
error: Content is protected !!