ಜಿಲ್ಲಾ
ಮತ್ತೇ ಅಮಾನವೀಯತೆಗೆ ಸಾಕ್ಷಿಯಾದ ಬೆಳಗಾವಿ..

ಬೆಳಗಾವಿ :- ಜಿಲ್ಲೆಯ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿಯ ಗಾಂಧಿ ನಗರದಲ್ಲಿ ಅಮಾನವೀಯ ಘಟನೆಯು ನೆಡೆದಿದೆ.
ಕಳೆದ ಎರಡು ದಿನಗಳ ಹಿಂದೆ ತೀವ್ರ ಜ್ವರದಿಂದ ಬಳಲುತ್ತಿದ್ದ ವ್ಯಕ್ತಿಯು ಮೃತ ಪಟ್ಟಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೋವಿಡ ಲಕ್ಷಣ ಹಿನ್ನಲೆಯಲ್ಲಿ ಜಿಲ್ಲಾಸ್ಪತ್ರೆಗೆ ದಾಖಲಾಗುವಂತೆ ಸೂಚನೆ ನೀಡಿದ್ದರು, ಆದರೆ ದಾಖಲಾಗುವ ಮೊದಲೇ ಮನೆಯಲ್ಲಿ ಮೃತರಾದರು. ಅಂತ್ಯಕ್ರಿಯೆಗೆ ಆರೋಗ್ಯ ಅಧಿಕಾರಿಗಳಾಗಲಿ, ಗ್ರಾಮಸ್ಥರಾಗಲಿ ಹಾಗೂ ಸಂಬಂಧಿಕರಾಗಲಿ ಯಾರೂ ಆಗಮಿಸದ ಕಾರಣ ಶವವನ್ನು ಸೈಕಲ್ ಮೇಲೆ ತೆಗೆದುಕೊಂಡು ಹೋಗಿದ್ದಾರೆ.
ಇದು ಮಾನವೀಯತೆ ಸತ್ತು ಹೋಗಿದ್ದಕ್ಕೆ ಮತ್ತೊಂದು ಉದಾಹರಣೆಯಾಗಿದೆ.