ದೇಶ & ವಿದೇಶ

ರಷ್ಯಾದಿಂದ ಜಗತ್ತಿನ ಮೊಟ್ಟಮೊದಲ ಕೊರೊನಾ ಲಸಿಕೆ: ಲಸಿಕೆ ಸುರಕ್ಷತೆ ಬಗ್ಗೆ ಬೇರೆ ದೇಶಗಳು ಕಳವಳ.

ದೆಹಲಿ: ಜಗತ್ತಿನಾದ್ಯಂತ ಹರಡಿರುವ ಕೊರೊನಾ ಮಹಾಮಾರಿಗೆ ಮೊಟ್ಟ ಮೊದಲ ಲಸಿಕೆ ರಷ್ಯಾ ದೇಶ ಕಂಡುಹಿಡಿದಿದ್ದು ಆ.11 ರಂದು ನೋಂದಣಿ ಕೂಡ ಮಾಡಿದೆ. ಸ್ವತಃ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ ಪುತ್ರಿಗೆ ಲಸಿಕೆ ನೀಡಲಾಗಿದೆ‌.

ಈ ಬಗ್ಗೆ ಸ್ವತಃ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸ್ಥಳೀಯ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ದೇಶದಲ್ಲಿ ಅಭಿವೃದ್ಧಿ ಪಡಿಸಲಾಗಿರುವ ಕೊರೊನಾ ವೈರಸ್‌ ಲಸಿಕೆಯನ್ನು ಬಳಕೆಗೆ ನೋಂದಾಯಿಸಲಾಗಿದೆ ಹಾಗೂ ನನ್ನ ಒಬ್ಬ ಮಗಳಿಗೆ ಆಗಲೇ ಲಸಿಕೆ ನೀಡಲಾಗಿದೆ ಎಂದು ಹೇಳಿದ್ದಾರೆ. ಇನ್ನು ರಷ್ಯಾದ ರಕ್ಷಣಾ ಸಚಿವಾಲಯ ಹಾಗೂ ಗಮಲೇಯಾ ಸಂಶೋಧನೆ ಸಂಸ್ಥೆ ಜಂಟಿಯಾಗಿ ಲಸಿಕೆ ಅಭಿವೃದ್ಧಿ ಪಡಿಸಿವೆ.

ಲಸಿಕೆಯನ್ನು ಜೂ.18 ರಿಂದ ಇಲ್ಲಿಯವರಗೆ ಮೂರು ಹಂತದಲ್ಲಿ‌ ಸುಮಾರು 76 ಜನರ ಮೇಲೆ ಕ್ಲಿನಿಕಲ್ ಟ್ರಯಲ್ ನಡೆಸಲಾಗಿದೆ ಎಂದು ರಷ್ಯಾದ ಸ್ಥಳೀಯ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ. ಕ್ಲಿನಿಕಲ್ ಟ್ರಯಲ್‌ನಲ್ಲಿ ಭಾಗಿಯಾದ ಎಲ್ಲ ಜನರ ರೋಗ ನಿರೋಧಕ ಶಕ್ತಿ ಹೆಚ್ಚಿಗೆ ಆಗಿರುವುದಾಗಿ ರಷ್ಯಾ ಸರ್ಕಾರ ಹೇಳಿದೆ.ಆದರೆ ಕೊರೊನಾಗೆ ಲಸಿಕೆ ಕಂಡುಹಿಡಿಯುವ ನಿಟ್ಟಿನಲ್ಲಿ ಹಗಲು ರಾತ್ರಿ ಶ್ರಮಿಸುತ್ತಿರುವ ಬೇರೆ ದೇಶಗಳು ರಷ್ಯಾ ಬಿಡುಗಡೆ ಮಾಡಿರುವ ಲಸಿಕೆ ಬಗ್ಗೆ ಇನ್ನೊಂದಿಷ್ಟು ವೈದ್ಯಕೀಯ ಪ್ರಯೋಗಗಳಿಗೆ ಒಳಪಡಿಸಬೇಕಿತ್ತು ಎಂದು‌ ಅಭಿಪ್ರಾಯಪಟ್ಟಿವೆ.

ಇಷ್ಟೊಂದು ತರಾತುರಿಯಲ್ಲಿ ಲಸಿಕೆ ಬಿಡುಗಡೆ ಅವಶ್ಯಕತೆ ಇರಲಿಲ್ಲ ಜೊತೆಗೆ ಕೆಲವೇ ಕೆಲವು ಜನರ ಮೇಲೆ ಕ್ಲಿನಿಕಲ್ ಟ್ರಯಲ್ ಮಾಡಲಾಗಿದೆ‌‌‌ ಎಂದು ಆತಂಕ ಹೊರ ಹಾಕಿವೆ..

Show More

Related Articles

Leave a Reply

Your email address will not be published. Required fields are marked *

Back to top button
error: Content is protected !!