ಕೆಂಪು ಕೋಟೆಯ ಮೇಲೆ ತಿರಂಗಾ ದ್ವಜಕ್ಕೆ ಮೋದಿ ಸೆಲ್ಯೂಟ್..

ನವದೆಹಲಿ : ಕೊರೋನ ಸಂಕಷ್ಟದ ಮಧ್ಯದಲ್ಲಿಯೂ 74 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಪ್ರಧಾನಿ ನೇತೃತ್ವದಲ್ಲಿ ದೆಹಲಿಯಲ್ಲಿ ಸರಳವಾಗಿ ಆಚರಿಸಲಾಯಿತು. ನರೇಂದ್ರ ಮೋದಿ ಅವರು ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದರು. ನಂತರ ದೇಶ ರಕ್ಷಣೆಯ ಮೂರು ಪಡೆಗಳಿಂದ ಗೌರವ ಸ್ವೀಕರಿಸಿದರು.
ಧ್ವಜಾರೋಹಣದ ಬಳಿಕ ಪ್ರಧಾನಿ ಮೋದಿ ದೇಶವನ್ನುದ್ದೇಶಿಸಿ ಮಾತನಾಡಿದರು. ಭದ್ರತಾ ಪಡೆಗಳಿಗೆ ಮತ್ತು ಸೈನಿಕರಿಗೆ ವಂದನೆಗಳನ್ನು ಸಲ್ಲಿಸಿದರು. ದೇಶ ಮತ್ತು ಜಗತ್ತಿಗೆ ಕರೋನಾ ಕಂಟಕವಾಗಿ ಕಾಡುತ್ತಿದೆ ಇಂತಹ ಸಂದರ್ಭದಲ್ಲಿ ಯೋಧರಂತೆ ಕೆಲಸ ಮಾಡುತ್ತಿರುವ ವೈದ್ಯಕೀಯ ಸಿಬ್ಬಂದಿಗಳಿಗೆ, ವೈದ್ಯರಿಗೆ, ದಾದಿಯರಿಗೆ ಹಾಗೂ ಆಂಬ್ಯುಲೆನ್ಸ್ ಚಾಲಕರಿಗೆ ಅಭಿನಂದನೆ ಸಲ್ಲಿಸಿದರು. ಇದರ ಮದ್ಯೆಯೇ ನೈಸರ್ಗಿಕ ವಿಪತ್ತುಗಳು ಎದುರಾಗಿದ್ದು ಕೇಂದ್ರ ಮತ್ತು ರಾಜ್ಯಗಳು ಒಟ್ಟಾಗಿ ಎದುರಿಸುತ್ತಿವೆ ಎಂದರು.
ಆತ್ಮ ನಿರ್ಭರ ಭಾರತಕ್ಕೆ ಕರೆ :
74 ವರ್ಷಗಳಲ್ಲಿ ಭಾರತವು ಅನೇಕ ಸಾಧನೆಗಳನ್ನು ಮಾಡಿದೆ. ನಮ್ಮ ಪೂರ್ವಜರ ತ್ಯಾಗದ ಫಲದಿಂದ ಸ್ವಾತಂತ್ರ್ಯ ಒದಗಿದೆ. ಈಗ ಆತ್ಮನಿರ್ಭಾರ ಭಾರತ್ ನಮ್ಮ ದೃಢ ಸಂಕಲ್ಪವಾಗಬೇಕು. ರೈತರು ಇದೀಗ ಅದನ್ನು ಸಾಬೀತುಪಡಿಸಿದ್ದಾರೆ. ಪ್ರಪಂಚವು ಅಂಗೀಕರಿಸಬೇಕಾದ ಸ್ವದೇಶಿ ಉತ್ಪನ್ನಗಳನ್ನು ಉತ್ಪಾದಿಸೋಣ ಎಂದರು.
ಚೀನೀ ಸರಕುಗಳನ್ನು ನಿಷೇಧಿಸೋಣ :
‘ಚೀನೀ ಸರಕುಗಳ ಆಮದನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಇತರ ದೇಶಗಳಿಂದ ಸರಕುಗಳ ಆಮದನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಇನ್ನು ಮುಂದೆ ನಾವು ನಮ್ಮ ಸ್ವಂತ ಸರಕುಗಳನ್ನು ನಾವೇ ತಯಾರಿಸಿಕೊಳ್ಳೋಣ. ಭಾರತವು ಗುಣಮಟ್ಟದ ಸರಕುಗಳ ಆಶ್ರಯ ತಾಣವೆಂದು ಮತ್ತೊಮ್ಮೆ ಸಾಬೀತುಪಡಿಸೋಣ. ಒಂದು ಕಾಲದಲ್ಲಿ ಭಾರತೀಯ ಸರಕುಗಳನ್ನು ಪ್ರಪಂಚದಾದ್ಯಂತ ಗುಣಮಟ್ಟದ ವಸ್ತುಗಳೆಂದು ಪೂಜಿಸಲಾಗುತ್ತಿತ್ತು. ಭಾರತೀಯ ಸರಕುಗಳಿಗೆ ಹಿಂದಿನ ವೈಭವವನ್ನು ತರಲು ನಾವು ಮತ್ತೆ ಪ್ರಯತ್ನಿಸೋಣ.
ಕರೋನಾ ಕಷ್ಟದ ಸಮಯದಲ್ಲೂ ಹೊಸ ಹಾದಿಯನ್ನು ಹುಡುಕೋಣ. ಪಿಪಿಇ ಕಿಟ್ಗಳು ಮತ್ತು ಎನ್ 95 ಮಾಸ್ಕ್ ಗಳು ಸಹ ಬೇರೆ ಕಡೆಯಿಂದ ತರಬೇಕಾಗಿತ್ತು. ಸ್ಥಳೀಯರಿಗಾಗಿ ನಾವೇ ತಯಾರಿಸಿಕೊಳ್ಳೋಣ. ಭಾರತದಲ್ಲಿ ಹೇರಳವಾದ ನೈಸರ್ಗಿಕ ಸಂಪನ್ಮೂಲಗಳಿವೆ. ಎಫ್ಡಿಐ ವಿಷಯದಲ್ಲಿ ಭಾರತ ಹೊಸ ನೆಲೆಯನ್ನು ಕಂಡುಕೊಂಡಿದೆ. ಕೃಷಿಯಿಂದ ಹಿಡಿದು ಬ್ಯಾಂಕಿಂಗ್ವರೆಗಿನ ಎಲ್ಲ ಕ್ಷೇತ್ರಗಳಲ್ಲಿ ಸುಧಾರಣೆಗಳನ್ನು ಕೈಗೊಂಡಿದ್ದೇವೆ ಎಂದು ಹೇಳಿದರು.