ಅಂತರಾಷ್ಟ್ರೀಯ ಕ್ರಿಕೆಟ್ ಗೆ ಮಾಜಿ ನಾಯಕ ಮಹೇಂದ್ರಸಿಂಗ್ ಧೋನಿ, ಸುರೇಶ ರೈನಾ ಗುಡ್ ಬೈ..!

ದೆಹಲಿ- ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದು, ನಿವೃತ್ತ ಸಮಯ ಬಂದಿದೆ ಎಂದು ಹೇಳಿಕೊಂಡಿದ್ದಾರೆ.
ಭಾರತದ ಕ್ರಿಕೆಟ್ ಇತಿಹಾದಲ್ಲಿ ಮಹೇಂದ್ರಸಿಂಗ್ ಧೋನಿ ಓರ್ವ ಯಶಸ್ವಿ ನಾಯಕನಾಗಿ ಗುರುತಿಸಿಕೊಂಡಿದ್ದರು. ಧೋನಿ ದೇಶಕ್ಕೆ ಎರಡು ವರ್ಡ್ ಕಪ್ ಗೆದ್ದು ಕೊಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಧೋನಿ ಕೊನೆಯ ಬಾರಿ 2019 ವಿಶ್ವಕಪ್ ನ್ಯೂಸಿಲೆಂಡ್ ವಿರುದ್ಧ ಅಂತಿಮವಾಗಿ ಕಣಕ್ಕೆ ಇಳಿದಿದ್ದರು.
39 ವರ್ಷ ವಯಸ್ಸಿನ ಮಹೇಂದ್ರ ಧೋನಿ ಇನ್ನೂ ಹಲವು ವರ್ಷಗಳ ಕಾಲ ಕ್ರಿಕೆಟ್ ನಲ್ಲಿ ಮುಂದುವರೆಯಬೇಕು ಎಂಬುದು ಅಭಿಮಾನಿಗಳ ಬಯಕೆಯಾಗಿತ್ತು. ಆದರೇ ಬಿಸಿಸಿಐ ವಾರ್ಷಿಕ ಗುತ್ತಿಗೆ ಒಪ್ಪಂದಿದಿಂದಲೂ ಮಹೇಂದ್ರ ಸಿಂಗ್ ಧೋನಿಯನ್ನು ದೂರ ಇಡಲಾಗಿತ್ತು. ಇದೀಗ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಧೋನಿ ವಿಧಾಯ ಹೇಳಿದ್ದಾರೆ.
2004ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಪಾದಾರ್ಪಣೆ ಮಾಡಿದ್ದ ಧೋನಿ ನಂತರ ಟೀಂ ಇಂಡಿಯಾದ ನಾಯಕ್ವದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. 2007ರಲ್ಲಿ ಟೀ -20 ವಿಶ್ವಕಪ್ ಹಾಗೂ 2011ರಲ್ಲಿ ಏಕದಿನ ವಿಶ್ವಕಪ್ ಗೆಲ್ಲಿಸುವಲ್ಲಿ ಧೋನಿ ಯಶಸ್ವಿಯಾಗಿದ್ದರು. ಎಂತಹ ಕಠಿಣ ಸಂದರ್ಭದಲ್ಲಿ ಮೈದಾನದಲ್ಲಿ ಕೂಲ್ ಆಗಿಯೇ ಇದ್ದು ಪರಿಸ್ಥಿತಿ ನಿವಾಹಿಸುವುದು ಧೋನಿಗೆ ಕರಗತವಾಗಿತ್ತು.
ಧೋನಿ ವಿದಾಯ ಘೋಷಿಣೆ ಮಾಡಿದ ಕೆಲವೇ ನಿಮಿಷದಲ್ಲಿ ಸುರೇಶ ರೈ ಸಹ ಅಭಿಮಾನಿಗಳಿಗೆ ಶಾಕ್!
ಟೀಂ ಇಂಡಿಯಾದ ಎಡಗೈ ಬ್ಯಾಟ್ಸಮನ್ ಆಗಿದ್ದ ಸುರೇಶ ರೈನಾ ಸಹ ಧೀಢೀರನೆ ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಣೆ ಮಾಡಿದ್ದಾರೆ. ರೈನಾ ಸಹ ಸಾಮಾಜಿಕ ಜಾಲತಾಣದಲ್ಲಿ ನಿವೃತ್ತಿಯನ್ನು ಖಚಿತ ಪಡಿಸಿದ್ದಾರೆ. ಮಾಜಿ ನಾಯಕ ಮಹೇಂದ್ರ ಧೋನಿ ವಿದಾಯದ ಕೆಲ ನಿಮಿಷಗಳಲ್ಲೇ ರೈನಾ ಸಹ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.
33 ವರ್ಷದ ಎಡಗೈ ಬ್ಯಾಟ್ಸಮನ್ ಸುರೇಶ ರೈನಾ ಟೀಂ ಇಂಡಿಯಾ ಪರ 226 ಏಕದಿನ, 18 ಟೆಸ್ಟ್ ಹಾಗೂ 78 ಟಿ20 ಪಂದ್ಯಗಳನ್ನು ಆಡಿದ್ದಾರೆ. ಇತ್ತೀಚಿಗೆ ಕಳಪೆ ಪ್ರದರ್ಶನದಿಂದ ರೈನಾ ತಂಡದಿಂದ ದೂರ ಉಳಿದಿದ್ದರು. ಅನೇಕ ಸಂದರ್ಭದಲ್ಲಿ ಟೀಂ ಇಂಡಿಯಾ ಗೆಲುವಿಗೆ ರೈನಾ ನೆರವಾಗಿದ್ದರು.