ಜಿಲ್ಲಾ

ಸೇಡಂ ಪಟ್ಟಣದ ಸಣ್ಣ ಅಗಸಿ ಚೌಕಿನಲ್ಲಿ ಮಧ್ಯರಾತ್ರಿ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪೂಜೆ

ಸೇಡಂ- ಕಳೆದ 24 ವರ್ಷದಿಂದ ಮಾಡುತ್ತ ಬಂದಿರುವ ಹಿನ್ನೆಲೆಯ ಪ್ರಾಸ್ತಾವಿಕ‌ ಮಾತುಗಳು ಮತ್ತು ಸಣ್ಣ ಅಗಸಿಯ ಗೆಳೆಯರೊಂದಿಗೆ…ಜನಾರ್ಧನರೆಡ್ಡಿ ತುಳೇರ, ಬಸವಣ್ಣ ಬೋಳದ, ನಾಗೇಶರೆಡ್ಡಿ, ನಾಗೇಂದ್ರಪ್ಪ ರಾಜಾಪುರ, ಡಾ.ಮುರುಗೇಂದ್ರರೆಡ್ಡಿ, ಬಸವರಾಜ ಸಕ್ರಿ, ಶಂಕರ ಬೋಳದ, ವಿರೇಶ ಬೋಳದ, ಬಸವರಾಜ ಬಾಳಿ ಸೇರಿದಂತೆ ಅನೇಕರಿದ್ದರು.

ಸೇಡಂ ಪಟ್ಟಣದ ವಾರ್ಡ ನಂ.1 ರಲ್ಲಿ ಸಣ್ಣ ಅಗಸಿ ಹೋಗುವ ( ಶ್ರೀ ಪಂಚಲಿಂಗೇಶ್ವರ ದೇವಾಲಯ ಹತ್ತಿರ) ಸಂದರ್ಭದ ಚೌಕಿನಲ್ಲಿ ಕಳೆದ 23 ವರ್ಷಗಳಿಂದ ಮಧ್ಯರಾತ್ರಿಗೆ ಧ್ವಜಾರೋಹಣ ನೆರವೇರಿಸುತ್ತ ಬಂದಿರುವುದು ತಮಗೆಲ್ಲ ಗೊತ್ತಿರುವ ಸಂಗತಿ.

ಭಾರತ ಸ್ವಾತಂತ್ರ್ಯದ 50 ರ ಸಂಭ್ರಮದಿಂದ ಇದೂವರೆಗೂ ಮಧ್ಯರಾತ್ರಿಗೆ ಧ್ವಜಾರೋಹಣ ಮಾಡಲಾಗುತ್ತಿದೆ. ಕಳೆದ 24 ವರ್ಷದಿಂದ‌ ನಿರಂತರವಾಗಿ, ಮಳೆ ಎನ್ನದೇ ಮಧ್ಯರಾತ್ರಿಗೆ ಧ್ವಜಾರೋಹಣವನ್ನು ನನ್ನ ನೇತೃತ್ವದಲ್ಲಿ ಶುರುವಾಯಿತು. ಆರಂಭದಲ್ಲಿ ಕೆಲವರು ಬೈಯ್ದರು. ಸುಮ್ಮನೆ ಮನೇಲಿ ಕೂಡೋದು ಬಿಟ್ಟು ಇವೆಲ್ಲ ನಿನಗ್ಯಾಕೆ ಎಂದರು. ಆದರೂ ಬಿಡಲಿಲ್ಲ. ಈ ಕಾರ್ಯಕ್ರಮ ಇದೂವರೆಗು ಅಂದರೆ 24 ವರ್ಷ‌ ಈ ವರ್ಷ.. ನಡೆದುಕೊಂಡು ಬಂದಿದೆ. ನಮ್ಮ ಈ ಪ್ರದೇಶದ ಎಲ್ಲ ಯುವಕರು ಇದಕ್ಕೆ ಕೈಜೋಡಿಸಿದ್ದಾರೆ.

ಹಿರಿಯರಾಗಿರುವ ದಿ.ಅಂಜನರೆಡ್ಡಿ ಗರ್ಕಾ, ಚಂದ್ರಶೇಖರ ಊಡಗಿ, ಸಿದ್ದಪ್ಪ‌ ನೂಲಾ, ಭೀಮಶೆಟ್ಟಿ ಬೋಳದ, ಶಿವಪುತ್ರಪ್ಪ ಸಕ್ರಿ, ನಾಗೇಂದ್ರಪ್ಪ ರುದ್ನೂರ, ಸರ್ವಜ್ಞಮೂರ್ತಿ ಬೋಳದ, ಹೀಗೆ ಅನೇಕರು ಇವತ್ತು ನಮ್ಮ ಮಧ್ಯೆ ಇಲ್ಲದಿದ್ದರೂ ಅವರೆಲ್ಲರೂ ಮಧ್ಯರಾತ್ರಿಗೆ ಆಗಮಿಸಿ ಧ್ವಜಾರೋಹಣ ನೆರವೇರಿಸಿದ್ದಾರೆ.

ತಹಸೀಲ್ದಾರ ಆಗಿದ್ದ ಸುಬ್ಬಣ್ಣ ಜಮಖಂಡಿ,
ಪೊಲೀಸ್ ಅಧಿಕಾರಿಗಳಾಗಿದ್ದ ವಿ.ಎನ್.ಪಾಟೀಲ, ಭೀಮಣ್ಣ, ಶಂಕರಗೌಡ ಪಾಟೀಲ, ರಾಜಶೇಖರ ಹಳಿಗೋಧಿ, ಪಿ.ಎಸ್.ಸಾಲಿಮಠ ಸೇರಿದಂತೆ ಅನೇಕರು ಆಗಮಿಸಿದ್ದರು.

ನಮ್ಮ ಭಾಗದ ಹಿರಿಯರಾದ ನಾಗೇಶ್ವರರಾವ ಮಾಲಿಪಾಟೀಲ, ಪ್ರಭಾಕರ‌ ಜೋಶಿ , ಭೀಮರೆಡ್ಡಿ ಅಗನೂರ, ಮಾರುತಿರಾವ ಕುಲಕರ್ಣಿ, ಧನಶೆಟ್ಟಿ ಸಕ್ರಿ, ಶರಣರೆಡ್ಡಿ ಪಾಟೀಲ,
ಚಿನ್ನಪ್ಪ ತುಳೇರ, ಶರಣಪ್ಪ ತುಳೇರ, ಶರಣಪ್ಪ‌ ತಳವಾರ ಸೇರಿದಂತೆ ಅನೇಕ ರೈತರಿಂದ ಧ್ವಜಾರೋಹಣ ನೆರವೇರಿಸುವ ಮೂಲಕ ವಿಶಿಷ್ಟ ಕಾರ್ಯ ನಡೆದಿದೆ.

ಅಷ್ಟೇ ಅಲ್ಲ ನನ್ನ ಪ್ರಾಥಮಿಕ ಶಾಲೆಯ ಗುರುಗಳಾಗಿರುವ ಶ್ರೀಮತಿ ಬಸವಲಿಂಗಮ್ಮ ಬಸವರಾಜ ಪಾಟೀಲ ಸೇಡಂ ಅವರು ಆಗಮಿಸಿ, ಮಧ್ಯರಾತ್ರಿಯಲ್ಲಿ ಧ್ವಜಾರೋಹಣ ನೆರವೇರಿಸಿ ಮೆರುಗು ತಂದರು. ಕಳೆದ ವರ್ಷ ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಪೂಜ್ಯರಾದ ಶ್ರೀ ಸದಾಶಿವ ಸ್ವಾಮೀಜಿ ಆಗಮಿಸಿದ್ದರು. ಊರಿನ ಗಣ್ಯರು, ಅಧಿಕಾರಿಗಳು, ಗಲ್ಲಿಯ ಹಿರಿಯರು, ಯುವಕರು ಭಾಗವಹಿಸುವ.. ಅಂತಹದ್ದೇ ಸಂಭ್ರಮ ಮತ್ತೆ ಬಂದಿದೆ. ಇವತ್ತು ಆಗಸ್ಟ 14 ಮುಗಿದು 15 ಕ್ಕೆ ಕಾಲಿಡುತ್ತಿದ್ದೇವೆ. ಮಧ್ಯರಾತ್ರಿ ಸರಿಯಾಗಿ 12 ಗಂಟೆಗೆ ಧ್ವಜಾರೋಹಣ ನೆರವೇರಿಸಲಾಯಿತು. ನಮ್ಮ ಸಣ್ಣ ಅಗಸಿಯ ಎಲ್ಲಾ ಗೆಳೆಯರು ಈ ಕಾರ್ಯಕ್ರಮವನ್ನು ತುಂಬಾ ಪ್ರೀತಿ, ಗೌರವ ಮತ್ತು ಅಭಿಮಾನದಿಂದ ಭಾಗವಹಿಸಿ ಯಶಸ್ವಿ ಮಾಡಿದರು.

  • ಮಹಿಪಾಲರೆಡ್ಡಿ
    ಪತ್ರಕರ್ತ- ಲೇಖಕ

Show More

Related Articles

Leave a Reply

Your email address will not be published. Required fields are marked *

Back to top button
error: Content is protected !!