ಜಿಲ್ಲಾ

ವ್ಯಾಟ್ಸ್ಅಪ್ ಮೂಲಕ ಬೆದರಿಕೆ‌, ಸುಲಿಗೆಗೆ ಯತ್ನಿಸಿದ ಆರೋಪಿಗಳ ಬಂಧನ

ತುಮಕೂರು : ನಗರದ ಉದ್ಯಮಿಗಳಿಗೆ ವಾಟ್ಸಾಪ್ ಸಂದೇಶ ಮತ್ತು ಕರೆಗಳ ಮೂಲಕ ಬೆದರಿಕೆ ಹಾಕಿ ಹಾಗೂ ಹಲ್ಲೆ ನಡೆಸಿ ಹಣ ವಸೂಲಿ ಮಾಡುತ್ತಿದ್ದ ಗುಂಪಿನ ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು ಪುಂಡರ ಗುಂಪು ಇದೀಗ ಕಂಬಿ ಎಣಿಸುವಂತಾಗಿದೆ.
ಕಳೆದ ಕೆಲವು ದಿನಗಳಿಂದ ತುಮಕೂರಿನ ಮಂಡಿ ಪೇಟೆಯ ಆಯಿಲ್ ಉದ್ಯಮಿಗೆ ಸೇರಿದಂತೆ ಹಲವು ಉದ್ಯಮಿಗಳಿಗೆ ವಾಟ್ಸಾಪ್ ಸಂದೇಶ ಮತ್ತು ಕರೆ ಮಾಡಿ ಹಣ ನೀಡಿ ಇಲ್ಲದಿದ್ದರೆ ನಿಮ್ಮ ಮೇಲೆ ಹಲ್ಲೆ ನಡೆಸುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದ ಗುಂಪನ್ನು ನಗರ ಪೋಲೀಸರು ಹೆಡೆಮುರಿ ಕಟ್ಟಿದ್ದಾರೆ. ಪುಂಡರ ಗುಂಪಿನ ಕಿರುಕುಳ ತಾಳದ ಉದ್ಯಮಿಗಳ ಮೂರು ಪ್ರಕರಣಗಳು ಠಾಣೆಯಲ್ಲಿ ದಾಖಲಾಗಿದ್ದು ನಗರದ ವೃತ್ತ ನೀರಿಕ್ಷಕ ನವೀನ ಬಿ. ನೇತೃತ್ವದಲ್ಲಿ ನಾಲ್ಕು ಜನರನ್ನು ಬಂಧಿಸಿದ್ದು ಅಲಿ ಹುಸೆನ್ ಬಿನ್ ಲೇಟ್ ಅಬ್ದುಲ್ (40), ಶಾನ್ ವಾಜ್ ಪಾಶ್ ಬಿನ್ ಅಬ್ದುಲ್ ಸಮನ್(40), ಮೆಹಬೂಬ್ ಖಾನ ಲೇಟ್ ಮಹಮ್ಮದ ಗೌಸ (40), ಸೈಯದ್ ಶೇವರ್ ಲೇಟ್ ಸೈಯದ್ ಅಹಮದ(34) ರನ್ನು ಸೆರೆಹಿಡಿದಿದ್ದು ಸ್ಟೈಲ್ ಇಮ್ರಾನಗಾಗಿ ಬಲೆ ಬೀಸಿದ್ದಾರೆ.
ಆರೋಪಿಗಳಿಂದ 6 ಮೂಬೈಲ್ ಮತ್ತು ಸಿಮ್ಗಳು, 1 ಆಟೋರಿಕ್ಷಾ, 1 ಮೊಪೈಡ್ ಬೈಕ್,  ಒಂದು ಸಾವಿರ ಹಣವನ್ನು ವಶಪಡಿಸಿಕೊಂಡಿದ್ದಾರೆ.ರಮೇಶ ಪಿ.ಸಿ ಹಾಗೂ ನರಸಿಂಹರಾಜು ಎಸ್.ಎನ್ ಅವರ ಪತ್ತೆ ತಂಡಕ್ಕೆ ತುಮಕೂರು ಜಿಲ್ಲಾ ಪೋಲಿಸ ಅಧೀಕ್ಷಕರಾದ ಡಾ.ಕೆ.ವಂಸಿಕೃಷ್ಣ ಅಭಿನಂದಿಸಿದ್ದಾರೆ.

Show More

Related Articles

Leave a Reply

Your email address will not be published. Required fields are marked *

Back to top button
error: Content is protected !!