ಸ್ಪೋರ್ಟ್ಸ್

ಐಪಿಎಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನೋಡಲು ಅವಕಾಶ!

ನವದೆಹಲಿ- ಇಡೀ ವಿಶ್ವದಲ್ಲಿ ಕೊರೊನಾ ವೈರಸ್ ಮಾಹಮಾರಿ ಹಾವಳಿ ಹೆಚ್ಚಾಗಿದ್ದು, ಈ ನಡುವೆ ಐಪಿಎಲ್ 2020 ನಡೆಯುವುದು ಖಚಿತವಾಗಿದೆ. ಮೊದಲು ಖಾಲಿ ಸ್ಟೇಡಿಯಂ ನಲ್ಲಿ ಪಂದ್ಯಾವಳಿಗಳು ನಡೆಯಲಿವೆ ಎಂದು ಹೇಳಲಾಗಿತ್ತು. ಆದರೇ ಇದೀಗ ಬಂದಿರೋ ವರದಿಗಳ ಪ್ರಕಾರ ಕ್ರಿಕೆಟ್ ನೋಡಲು ಶೇಖಡಾ 50ರಷ್ಟು ಪ್ರೇಕ್ಷಕರಿಗೆ ಅನುಮತಿ ನೀಡಬಹುದು ಎಂದು ಎಮಿರೇಟ್ಸ್ ಕ್ರಿಕೆಟ್ ಮಂಡಳಿ ಹೇಳಿದೆ.

ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ನಡೆಯುವ ಐಪಿಎಲ್ ಪಂದ್ಯಾವಳಿಯಲ್ಲಿ ಶೇಖಡಾ 30ರಿಂದ 50ರಷ್ಟು ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಲು ಚಿಂತನೆ ನಡೆಸಲಾಗಿದೆ. 25 ಸಾವಿರ ಪ್ರೇಕ್ಷಕರ ಸಾಮರ್ಥ್ಯ ಹೊಂದಿರೋ ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಐಪಿಎಲ್ ನಡೆಯುವ ಸಾಧ್ಯತೆ ಇದೆ.

ಸೆಪ್ಟೆಂಬರ್ 19ರಿಂದ ರಿಂದ ನವೆಂಬರ್ 8ರ ವರೆಗೆ ಐಪಿಎಲ್ ಪಂದ್ಯಾವಳಿಗಳು ನಡೆಯಲಿವೆ. ಪ್ರೇಕ್ಷಕರು ಮೈದಾನಕ್ಕೆ ಬಂದು ನೋಡುವ ನಿರ್ಧಾರವನ್ನು ಅಲ್ಲಿನ ಸ್ಥಳೀಯ ಸರ್ಕಾರ ನಿರ್ಧಾರ ಮಾಡಲಿದೆ. ಭಾರತದ ಕ್ರೀಡಾ ಅಭಿಮಾನಿಗಳು ಮಾತ್ರ ಟಿವಿಯಲ್ಲಿಯೇ ಈ ಸಲ ಐಪಿಎಲ್ ನೋಡಿ ಖುಷಿ ಪಡಬೇಕಾದ ಸ್ಥಿತಿ ಇದೆ.

Show More

Leave a Reply

Your email address will not be published. Required fields are marked *

Back to top button
error: Content is protected !!