ಜಿಲ್ಲಾ

ಅಮರ ಪ್ರೇಮಕ್ಕೆ ಸಾಕ್ಷಿಯಾದ ಕೊಪ್ಪಳದ ಗೃಹ ಪ್ರವೇಶ!

ಕೊಪ್ಪಳ- ದೇಶದಲ್ಲಿ ಶಹಜಾನ್, ಮುಮ್ತಾಜ್ ಪ್ರೇಮಕ್ಕೆ ಸಾಕ್ಷಿಯಾಗಿ ತಾಜ್ ಮಹಲ್ ಇಂದಿಗೂ ನಮ್ಮ ಕಣ್ಣ ಮುಂದೆ ನಿಂತಿದೆ. ಕರ್ನಾಟಕದಲ್ಲಿ ಮೃತ ಪತ್ನಿಯ ನೆನಗಾಗಿ ಪುತ್ಥಳಿಃಯನ್ನು ಮನೆ ಗೃಹ ಪ್ರವೇಶದಲ್ಲಿ ಅನಾವರಣಗೊಳಿಸಿದ ಘಟನೆ ನಡೆದಿದೆ. ಮೇಣದ ಅಪರೂಪದ ಪುತ್ಥಳಿಃಯನ್ನು ನೋಡಿ ಎಲ್ಲರೂ ಒಂದು ಕ್ಷಣ ಅಚ್ಚರಿಗೆ ಒಳಗಾಗಿದ್ದಾರೆ. ಅಷ್ಟಕ್ಕೂ ಪತ್ನಿಯ ಪುತ್ಥಳಿಃ ನಿರ್ಮಾಣಕ್ಕೆ ಕಾರಣವಾಗಿದ್ದು ಏನು ಅಂತಿರಾ..!

ಕೊಪ್ಪಳದ ಉದ್ಯಮಿ ಶ್ರೀನಿವಾಸ್ ಗುಪ್ತಾ ಅವರ ಪತ್ನಿ ಕೆ ವಿ ಎನ್ ಮಾಧವಿ ಮೂರು ವರ್ಷಗಳ ಹಿಂದೆ ಅಪಘಾತದಲ್ಲಿ ಮೃತಪಟ್ಟಿದ್ದರು. ಪತ್ನಿಯ ಅನುಪಸ್ಥಿತಿಯಲ್ಲಿ ಇಂದು ಗೃಹ ಪ್ರವೇಶ ನಡೆಸಿದ ಶ್ರೀನಿವಾಸ್ ಈ ಸಂದರ್ಭದಲ್ಲಿ ಪತ್ನಿಯ ಮೇಣದ ಪುತ್ಥಳಿಯನ್ನು ಮಾಡಿ ಹಾಲ್ ನಲ್ಲಿ ಇರಿಸಿದ್ದಾರೆ. ಮನೆಗೆ ಬಂದ ಸಂಬಂಧಿಕರು ಇದನ್ನು ನೋಡಿ ಒಂದು ಕ್ಷಣ ಶಾಕ್ ಆಗಿದ್ದಾರೆ.

ಬೆಂಗಳೂರಿನ ಗೊಂಬೆ ಮನೆಯಲ್ಲಿ ಸಿಲಿಕಾನ್ ಇಂಪೋರ್ಟೆಡ್ ಮೆಟಿರಿಯಲ್ ಬಳಿಸಿ ಈ ಪ್ರತಿಮೆಯನ್ನು ತಯಾರಿಸಲಾಗಿದೆ. ಪ್ರತಿಮೆ ಸಿದ್ದಪಡಿಸಲು ಒಂದು ವರ್ಷದ ಅವಧಿ ತೆಗೆದುಕೊಳ್ಳಲಾಗಿದ್ದು, ಶಿಲ್ಪಿ ಶ್ರೀಧರಮೂರ್ತಿಯವರು 10 ಲಕ್ಷ ವೆಚ್ಚದಲ್ಲಿ ಆಕರ್ಷಕ ಪುತ್ಥಃಳಿಯನ್ನು ಸಿದ್ದಮಾಡಿದ್ದಾರೆ.

ಅಪ್ಪನ ಈ ಪ್ರೇಮಕ್ಕೆ ಮಕ್ಕಳು ಫುಲ್ ಖುಷಿಯಾಗಿದ್ದು, ಕುಟುಂಬ ಸಮೇತರಾಗಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಶ್ರೀನಿವಾಸ್ ಗುಪ್ತಾ ಅವರ ಪತ್ನಿ ಪ್ರೇಮದ ಬಗ್ಗೆ ಜನರ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ.

Show More

Related Articles

Leave a Reply

Your email address will not be published. Required fields are marked *

Back to top button
error: Content is protected !!