ದೇಶ & ವಿದೇಶ

ಕೊರೊನಾ ಸೋಂಕಿಗೆ ರಷ್ಯಾ ದೇಶದಿಂದ ಲಸಿಕೆ- ಕ್ಲಿನಿಕಲ್ ಟ್ರಯಲ್ ಯಶಸ್ವಿ ಶೀಘ್ರದಲ್ಲಿ ಬಿಡುಗಡೆ!

ದೆಹಲಿ- ಇಡೀ ಪ್ರಪಂಚವನ್ನೇ ಮಂಡಿ‌ ಉರಿಸಿರುವ ಕೊರೊನಾ ವೈರಸ್‌ಗೆ ರಷ್ಯಾ ದೇಶದ ವಿಜ್ಞಾನಿಗಳು ಲಸಿಕೆ ಕಂಡುಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಲಸಿಕೆಯ ಮೊದಲ‌ ಕ್ಲಿನಿಕಲ್‌ ಟ್ರಯಲ್‌ ಯಶಸ್ವಿಯಾಗಿದ್ದು ಆಗಸ್ಟ್‌ 12ರಂದು ಲಸಿಕೆಯ ಬಿಡುಗಡೆ ಜೊತೆ ನೋಂದಣಿ ಕಾರ್ಯ ಪೂರ್ಣಗೊಳ್ಳಲಿದೆ. ಅಷ್ಟೇ ಅಲ್ಲದೇ ಸೆಪ್ಟೆಂಬರ್ ತಿಂಗಳಿನಿಂದ ಬೃಹತ್ ಮಟ್ಟದಲ್ಲಿ ಲಸಿಕೆ ಉತ್ಪಾದನೆ ಕಾರ್ಯ ಪ್ರಾರಂಭವಾಗಲಿದೆ‌ ಎಂದು ರಷ್ಯಾ ಮಾಧ್ಯಮಗಳು ವರದಿ ಮಾಡಿವೆ.

ರಷ್ಯಾದ ರಕ್ಷಣಾ ಇಲಾಖೆ ವಿಜ್ಞಾನಗಳು ಮತ್ತು ಗಮಲೇಯಾ ಸಂಶೋಧನಾ ಸಂಸ್ಥೆ ಜಂಟಿಯಾಗಿ ಲಸಿಕೆಯನ್ನು ಕಂಡುಹಿಡಿದ್ದು ಜೂನ್ 17 ರಿಂದ ಇಲ್ಲಿಯವರೆಗೆ ಸುಮಾರು 76 ಸ್ವಯಂ ಸೇವಕರ ಮೇಲೆ ಲಸಿಕೆ ಪ್ರಯೋಗ ಮಾಡಲಾಗಿದೆ. ಲಸಿಕೆ ಟ್ರಯಲ್‌ನಲ್ಲಿ ಭಾಗವಹಿಸಿದ್ದ ಸ್ವಯಂ ಸೇವಕರೆಲ್ಲರಿಗೂ ರೋಗ ನಿರೋಧಕ ಶಕ್ತಿ ಬೆಳೆದಿದೆ, ಯಾವುದೇ ಅಡ್ಡ ಪರಿಣಾಮಗಳು ಕಂಡು ಬಂದಿಲ್ಲ ಎಂದು ರಷ್ಯಾ ರಕ್ಷಣಾ ಸಚಿವಾಲಯ ತಿಳಿಸಿದೆ ಎಂದು ರಷ್ಯಾದ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಲಸಿಕೆ ಬಿಡುಗಡೆ ಮತ್ತು ನೋಂದಣಿ ‌ನಂತರ ಆರೋಗ್ಯ ಇಲಾಖೆ‌ ಸಿಬ್ಬಂದಿ ಹಾಗೂ ಹಿರಿಯ ‌ನಾಗರಿಕರಿಗೆ ಮೊದಲ ಆದ್ಯತೆ ನೀಡಲಾಗುವು ನಂತರ ಇನ್ನುಳಿದ ಜನರಿಗೆ ಲಸಿಕೆ‌ ನೀಡಲಾಗುವುದು ಎಂದು‌ ರಷ್ಯಾ ಸರ್ಕಾರ ಹೇಳಿದೆ. ಇನ್ನು ಲಸಿಕೆ‌ ಬೆಲೆ ಎಷ್ಟು ಇರಲಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿಯನ್ನು ರಷ್ಯಾ ಸರ್ಕಾರ ನೀಡಿಲ್ಲ..

Show More

Related Articles

Leave a Reply

Your email address will not be published. Required fields are marked *

Back to top button
error: Content is protected !!