ಕರ್ನಾಟಕ

ಆರೋಗ್ಯ ಸಚಿವ ಬಿ. ಶ್ರೀರಾಮುಲುಗೆ ಕೊರೊನಾ ಸೋಂಕು ದೃಢ

ಬೆಂಗಳೂರು- ಇಡೀ ದೇಶವನ್ನು ಕೊರೊನಾ ವರೈಸ್ ಬಿಟ್ಟು ಬಿಡದೇ ಕಾಡುತ್ತಿದೆ. ರಾಜ್ಯದಲ್ಲಿ ಸಿಎಂ ಬಿ ಎಸ್ ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಸಾಲಿಗೆ ಇದೀಗ ರಾಜ್ಯದ ಆರೋಗ್ಯ ಸಚಿವ ಬಿ. ಶ್ರೀರಾಮುಲು ಸಹ ಸೇರಿಕೊಂಡಿದ್ದಾರೆ.

ಶ್ರೀರಾಮುಲು ಅವರಿಗೆ ಇಂದು ಜ್ವರ ಕಾಣಿಸಿಕೊಂಡಿತ್ತು ಪರೀಕ್ಷೆ ಒಳಗಾಗಿದ್ದು ಕೊರೊನಾ ಸೋಂಕು ಇರೋದು ದೃಢ ಪಟ್ಟಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಬೋರಿಂಗ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಟ್ವಿಟರ್ ನಲ್ಲಿ ಸ್ವತಃ ಶ್ರೀರಾಮುಲು ಮಾಹಿತಿಯನ್ನು ನೀಡಿದ್ದಾರೆ.

ಕೊರೊನಾ ಸೋಂಕು ಕರ್ನಾಟಕಕ್ಕೆ ಕಾಲಿಟ್ಟ ದಿನದಿಂದಲೂ ಶ್ರೀರಾಮುಲು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಿ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ರು. ಅಷ್ಟೇ ಅಲ್ಲ ಸೋಂಕು ಹರುಡವಿಕೆ ತಡೆಗಟ್ಟುವ ಹಿನ್ನೆಲೆಯಲ್ಲಿ ವ್ಯಾಪಕವಾಗಿ ಕೆಲಸ ಮಾಡಿದ್ದರು. ಇದೀಗ ಸೋಂಕು ದೃಢವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಚಿವ ಬಿ. ಶ್ರೀರಾಮುಲುಗೆ ಸೋಂಕು ದೃಢವಾದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಗೆಳೆಯ ಗಾಲಿ ಜನಾರ್ದನ ರೆಡ್ಡಿ ಸಹ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಹಾಗೂ ಶ್ರೀರಾಮುಲು ಸ್ನೇಹ ಸಾಗರದಷ್ಟು ಇದೆ. ಶ್ರೀರಾಮಲು ಬಡವರ ಪರ ಕೆಲಸ ಮಾಡೋ ನಾಯಕ. ಶೀಘ್ರದಲ್ಲಿ ಗುಣಮುಖರಾಗಿ ಹೊರ ಬರುಲಿದ್ದಾರೆ ಎಂದು ಹಾರೈಕೆ ಮಾಡಿದ್ದಾರೆ.

Show More

Related Articles

Leave a Reply

Your email address will not be published. Required fields are marked *

Back to top button
error: Content is protected !!