ಕರ್ನಾಟಕ

ಶ್ರೀರಾಮನಿಗಾಗಿ ಶಬರಿ ಕಾಯ್ದು ಕುಳಿತ ಸ್ಥಳ ನಮ್ಮ ರಾಜ್ಯದಲ್ಲಿಯೇ ಇದೆ.! ಈಗ ಹೇಗಿದೆ ಆ ಕ್ಷೇತ್ರ?

ಬೆಳಗಾವಿ- ಶ್ರೀರಾಮನ ಭಕ್ತಳಾದ ಶಬರಿ, ರಾಮ, ಲಕ್ಷಣನೊಂದಿಗೆ ವನವಾಸಕ್ಕೆ ಬುರವ ಮಾರ್ಗದಲ್ಲಿ ಕಾದು ತಾನು ಸಂಗ್ರಹಿಸಿದ್ದ ಬೋರೆ ಹಣ್ಣುಗಳನ್ನು ನೀಡುವ ಕಥೆ ರಾಮಾಯಣದಲ್ಲಿ ಪ್ರಸಿದ್ಧವಾಗಿದೆ. ಹಣ್ಣನ್ನು ಸ್ವೀಕರಿಸಿದ ಶ್ರೀರಾಮ, ಈಕೆ ಭಕ್ತಿಗೆ ಮೆಚ್ಚಿ ಏನು ವರಬೇಕೆಂದು ಕೇಳುತ್ತಾನೆ.

ನಿನ್ನ ತೊಡೆಯ ಮೇಲೆ ಪ್ರಾಣ ಬಿಡುವ ವರ ನೀಡುವಂತೆ ಶರಬಿ ರಾಮನಿಗೆ ಕೇಳುತ್ತಾಳೆ. ಪ್ರಾಣ ಹೋಗುವ ಸಂದರ್ಭದಲ್ಲಿ ಬಾಯಿಗೆ ನೀರು ಬಿಡುವ ರಾಮ ಸುತ್ತಮುತ್ತಲೂ ನೋಡುತ್ತಾನೆ. ನೀರಿನ ಸೆಲೆ ಕಾಣಿಸದೇ ಇದ್ದಾಗ ಬಾಣ ಪ್ರಯೋಗ ಮಾಡಿ ನೀರು ಚಿಮುತ್ತದೆ. ಹೀಗೆ ಇತಿಹಾಸದಲ್ಲಿ ದಾಖಲೆಯಾಗಿ ಈ ಕ್ಷೇತ್ರ ಇರೋ ಕರ್ನಾಟಕ ರಾಜ್ಯದಲ್ಲಿಯೇ ಅನ್ನೋದು ವಿಶೇಷವಾಗಿದೆ.

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸುರೇಬಾಗ ಗ್ರಾಮದ ಹೊರ ವಯಲದಲ್ಲಿ ಇಂದಿಗೂ ಶಬರಿ ದೇವಸ್ಥಾನ ಕಾಣಬಹುದು. ಶಬರಿಕೊಳ್ಳ ಅಂತಲೇ ಈ ಪುಣ್ಯ ಕ್ಷೇತ್ರ ಪ್ರಸಿದ್ಧಿಯನ್ನು ಪಡೆದಿದೆ. ಎರಡು ಬೆಟ್ಟಗಳ ಕಣಿವೆ ಪ್ರದೇಶದಲ್ಲಿ ಸುಂದರ ಪ್ರಾಕೃತಿಕ ತಾಣದಲ್ಲಿ ದೇವಾಲಯ ಇದೆ. ಇಲ್ಲಿ ಹಲವು ಐತಿಹಾಸಿಕ ಕುರುಹುಗಳು ಇಂದಿಗು ನೋಡಲು ಸಿಗುತ್ತವೆ. ಎರಡು ಹೊಂಡಗಳು ಇಲ್ಲಿ ಸಾಕ್ಷಿಯಾಗಿ ಉಳಿದುಕೊಂಡಿವೆ. ಈ ಪೈಕಿ ಗಣಪತಿ ಹೊಂಡವು ಯಾವುದೇ ಕಾಲದಲ್ಲಿಯೂ ಬತ್ತದೇ ಇರೋದರ ಬಗ್ಗೆ ಭಕ್ತರು ಅಚ್ಚರಿಗೆ ಕಾರಣವಾಗಿದೆ.

ನಂತರ ಇಲ್ಲಿ ಪ್ರಸಿದ್ಧ ಶಿಲ್ಪಿ ಜಕಣಾಚಾರಿ ನಿರ್ಮಾಣ ಮಾಡಿರೋ ಮಂದಿರ ಇಂದಿಗೂ ಇದೆ. ಜತೆಗೆ ಎರಡು ಪುಷ್ಕರಣಿಗಳು ನೋಡುಗರ ಆಕರ್ಷಣೆಯ ಸ್ಥಳವಾಗಿವೆ. ಸದ್ಯ ಇದೀಗ ಇದೊಂದು ಪ್ರವಾಸಿ ಸ್ಥಳವಾಗಿದ್ದು, ರಾಮದುರ್ಗ ಸೇರಿ ಅನೇಕ ಕಡೆಗಳಿಂದ ಜನ, ಭಕ್ತರು ಇಲ್ಲಿಗೆ ಆಗಮಿಸಿ ಶಬರಿಯ ದರ್ಶನ ಪಡೆಯತ್ತಿದ್ದಾರೆ. ಐತಿಹಾಸಿಕ ಶಬರಿ ಕೊಳ್ಳ ಅಭಿವೃದ್ಧಿಗೆ ಸ್ಥಳೀಯ ಜನಪ್ರತನಿಧಿಗಳು ಶ್ರಮಿಸದೇ ಇರೋದು ಜನರ ಬೇಸರಕ್ಕೆ ಕಾರಣವಾಗಿದೆ.

Show More

Related Articles

Leave a Reply

Your email address will not be published. Required fields are marked *

Back to top button
error: Content is protected !!