ದೇಶ & ವಿದೇಶ

ರಫೇಲ್‌ ಯುದ್ಧ ವಿಮಾನವನ್ನು ಎರಡ್ಮೂ ದೇಶ ಬಿಟ್ಟರೆ ಬೇರೆ ದೇಶಗಳು ಯಾಕೆ ಖರೀದಿಸಿಲ್ಲ; ನಿಜಕ್ಕೂ ರಫೇಲ್ ವಿಮಾನ ಅಷ್ಟೊಂದು ಶಕ್ತಿಶಾಲಿನ.?

-ಸ್ಪೇಷಲ್ ಡೆಸ್ಕ್
ದೆಹಲಿ- ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಕೊರೊನಾ ನಂತರ ಹೆಚ್ಚು ಚರ್ಚೆಯಾಗುತ್ತಿರುವ ವಿಚಾರ ಭಾರತ ಖರೀದಿಸಿರುವ ರಫೆಲ್‌ ಯುದ್ಧ ವಿಮಾನದ ಕುರಿತು. ಭಾರತ ಸುಮಾರು 60,000 ಕೋಟಿ‌ ಮೊತ್ತದಲ್ಲಿ 36 ರಫೆಲ್‌ ಯುದ್ಧ ವಿಮಾನಗಳನ್ನು ಫ್ರಾನ್ಸ್‌ನಿಂದ ಖರೀದಿ ಮಾಡಿದ್ದು, ಮೊದಲ‌ ಹಂತದ 5 ಯುದ್ಧ ವಿಮಾನಗಳು ಜು.29ರಂದು ಹರಿಯಾಣದ ಅಂಬಾಲ ವಾಯುನೆಲೆಗೆ ಬಂದಿಳಿದಿವೆ. ಇನ್ನೂ ರಫೇಲ್ ಅತ್ಯಂತ ಶಕ್ತಿಶಾಲಿ ಹಾಗೂ ಅತ್ಯಾಧುನಿಕ ತಂತ್ರಜ್ಞಾನದ ಯುದ್ಧ ವಿಮಾನ ಇದರ ಆಗಮನದಿಂದ ಭಾರತ ವಾಯುಸೇನೆ ಬಲ ಇಮ್ಮಡಿ‌ಗೊಂಡಿದೆ, ರಫೇಲ್‌ ಆಗಮನದಿಂದ ಶತ್ರು ರಾಷ್ಟ್ರಗಳು ನಿದ್ದೆಗೆಟ್ಟಿವೆ ಅಂತೆಲ್ಲಾ ಚರ್ಚೆ ಜೋರಾಗಿ ನಡೆಯುತ್ತಿವೆ. ಹಾಗಾದರೆ ಭಾರತ ಬಿಟ್ಟರೆ ಬೇರೆ ದೇಶಗಳು ಯಾಕೆ ಈ ಯುದ್ಧ ವಿಮಾನ ಖರೀದಿಗೆ ಮುಂದಾಗಿಲ್ಲ ಎಂಬ ಪ್ರಶ್ನೆ ಸದ್ಯ ಎಲ್ಲರನ್ನೂ ಕಾಡುತ್ತಿದೆ.

ಇನ್ನೂ ಅಂತರಾಷ್ಟ್ರೀಯ ಮಿಲಿಟರಿ ಎಕ್ಸ್ಪರ್ಟ್ಸ್ ಕೂಡ ಯು.ಎಸ್ ಯುದ್ಧ ವಿಮಾನ ಹೊಲಿಕೆಯಲ್ಲಿ ದುಬಾರಿ ರಫೇಲ್‌ ವಿಮಾನದ ಕಾರ್ಯಕ್ಷಮತೆ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ಒಂದು‌ ವೇಳೆ ರಫೇಲ್ ಅಷ್ಟೊಂದು ಶಕ್ತಿಶಾಲಿ ಯುದ್ಧ ವಿಮಾನ ಅಂತ ಹೇಳೊದಾದ್ರೆ ಯಾಕೆ ಅಂತರಾಷ್ಟ್ರೀಯ ಶಸ್ತ್ರಾಸ್ತ್ರ ಮಾರುಕಟ್ಟೆಯಲ್ಲಿ ಬೇರೆ ಯುದ್ಧ ವಿಮಾನಗಳಿಗೆ ಪೈಪೋಟಿ ನೀಡದೆ ವಿಫಲವಾಯಿತು.? ಯಾಕೆ ಬೇರೆ ದೇಶಗಳು ರಫೇಲ್ ಖರೀದಿಗೆ ಮುಂದೆ ಬರಲಿಲ್ಲ.? ಎಂಬ ಪ್ರಶ್ನೆಗಳು ಉದ್ಭವಿಸಿವೆ. ಇನ್ನೂ ರಫೇಲ್ ವಿಮಾನ ಒಂದೇ ಭಾರತದ ಏಕ ಮಾತ್ರ ಆಯ್ಕೆ ಕೂಡ ಆಗಿರಲ್ಲ. ಆರಂಭದಲ್ಲಿ 126 ಯುದ್ಧ ವಿಮಾನಗಳ ಟೆಂಡರ್ ಬಿಡ್‌ಗೆ ಕರೆದಾಗ ಒಟ್ಟು ಆರು ಹೆಸರಾಂತ ವಿಮಾನ ಉತ್ಪಾದಕ ಕಂಪನಿಗಳು ಟೆಂಡರ್‌ನಿಲ್ಲಿ ಭಾಗವಸಿದ್ದವು ಆರೂ ವಿಮಾನ ಉತ್ಪಾದಕರ ವಿಮಾನಗಳನ್ನ ಭಾರತೀಯ ವಾಯುಸೇನೆ ಪರೀಕ್ಷಾರ್ಥ ಉಡಾವಣೆ ಮಾಡಿದ ನಂತರ ಯುರೋಫೈಟರ್ ಟೈಫೂನ್ ಹಾಗೂ ಡಸ್ಸೌಲ್ಟ ರಫೇಲ್ ಯುದ್ಧ ವಿಮಾನಗಳನ್ನು ಆಯ್ಕೆ ಮಾಡಲಾಗಿತ್ತು. ಇನ್ನೂ ಡಸ್ಸೌಲ್ಟ್ ರಫೇಲ್ ಕಡಿಮೆ ಬಿಡ್ ಮಾಡಿದ್ದರಿಂದ ರಫೇಲ್‌‌ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಇನ್ನೂ ಭಾರತ ಬಿಟ್ಟರೆ ಈಜಿಪ್ಟ್ ಮತ್ತು ಕತಾರ್ ದೇಶಗಳು ಮಾತ್ರ ರಫೇಲ್ ಯುದ್ಧ ವಿಮಾನಗಳನ್ನ ಖರೀದಿಸಿವೆ.ಇನ್ನೂ ರಷ್ಯಾ ದೇಶದ ವಾಯುಯಾನ ತಜ್ಞರ ಪ್ರಕಾರ ರಫೇಲ್ ಯುದ್ಧ ವಿಮಾನ ಚೀನಾದ ಕೆಲ ಯುದ್ಧ ವಿಮಾನಗಳ ಮುಂದೆ ಅಷ್ಟೊಂದು ಶಕ್ತಿಶಾಲಿ ಅಲ್ಲ ಅಂತ ಅಭಿಪ್ರಾಯ ಪಟ್ಟಿದ್ದಾರೆ.

ರಫೇಲ್ ಯುದ್ಧ ವಿಮಾನದ ವೇಗ ಸುಮಾರು ಮ್ಯಾಕ್ 1.8 ಆದ್ರೆ ಚೀನಾದ J-16 ಯುದ್ಧ ವಿಮಾನದ ವೇಗೆ ಮ್ಯಾಕ್ 2.2 ಆಗಿದೆ. ಅಷ್ಟೇ ಅಲ್ಲದೇ ಎತ್ತರದ ಹಾರಾಟ ಹಾಗೂ ಒತ್ತಡ ತಡೆಯುವ ನಿಟ್ಟಿನಲ್ಲೂ ಚೀನಾದ J-16 ಹಾಗೂ ರಷ್ಯಾದ Su-35 ಕ್ಕಿಂತ ಕಡಿಮೆ ಇದೆ. ಭಾರತೀಯ ವಾಯುಸೇನೆ 36 ರಫೇಲ್ ಯುದ್ಧ ವಿಮಾನಗಳು ಸೇರ್ಪಡೆಯಾದರು ಚೀನಾ ವಾಯುಸೇನೆಯೇ ಬಲವೇ ಹೆಚ್ಚಾಗಿ ಇರಲದೆ ಎಂದು ರಷ್ಯಾದ ವಾಯುಯಾನ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಇನ್ನೂ ಫ್ರಾನ್ಸ್‌ನ ರಫೇಲ್ ವಿಮಾನ ಹೋಲಿಕೆಯಲ್ಲಿ ಅಮೇರಿಕಾ, ರಷ್ಯಾ ದೇಶದ F-18, F-15, MiG-29, F-35, Su-35 ಹಾಗೂ ಕಡಿಮೆ ಬೆಲೆಯ F-16v, F-18E, MiG-35 ಯುದ್ಧ ವಿಮಾನಗಳು ತಂತ್ರಜ್ಞಾನ ಹಾಗೂ ಕಾರ್ಯಕ್ಷಮತೆಯಲ್ಲಿ ಸಾಕಷ್ಟು ಬಲಿಷ್ಠ ಆಗಿದ್ದು ಬೆಲೆ‌ ಕೂಡ ಕಡಿಮೆ ಇವೆ. ಇನ್ನೂ 2000 ರಲ್ಲಿ ದಕ್ಷಿಣ ಕೊರಿಯಾ ಹಾಗೂ ಸಿಂಗಪುರ್ ಕೂಡ ರಫೇಲ್ ಬದಲಿಗೆ ಬಲಿಷ್ಠ F-15 ಯುದ್ಧ ವಿಮಾನ ಖರೀದಿ ಮಾಡಿಕೊಂಡಿವೆ. ಈಜಿಪ್ಟ್ ಕೂಡ ಇತ್ತೀಚಿಗೆ ರಫೇಲ್ ವಿಮಾನ ಬದಲಿಗೆ ರಷ್ಯಾದ 24 ಕ್ಕೂ ಹೆಚ್ಚು Su-35 ಯುದ್ಧ ವಿಮಾನಗಳ ಖರೀದಿಗೆ ಒಪ್ಪಂದ ಮಾಡಿಕೊಂಡಿದೆ.

ಭಾರತದಲ್ಲಿ ರಫೇಲ್ ಆಗಮನವನ್ನು ಚೀನಾ ಜೊತೆಗೆ ಯುದ್ಧ ಗೆದ್ದಿರುವ ರೀತಿಯಲ್ಲಿ ಆಚರಣೆ ಮಾಡಲಾಗುತ್ತಿದೆ. ರಫೇಲ್ ಅಷ್ಟೊಂದು ಬಲಿಷ್ಠ ಯುದ್ಧ ವಿಮಾನ ಆಗಿದ್ದರೆ ಯಾಕೆ ಒಮಾನ್, ಕೊರಿಯಾ, ಸಿಂಗಪುರ್, ಲಿಬಿಯಾ,ಕುವೈತ್, ಕೆನಡಾ, ಬ್ರೆಜಿಲ್, ಮಲೇಷಿಯಾ, ಯುಎಇ, ಬೆಲ್ಜಿಯಂ, ಸ್ವಿಟ್ಜರ್ಲೆಂಡ್‌‌ ದೇಶಗಳು ರಫೇಲ್ ಯುದ್ಧ ವಿಮಾನವನ್ನ ಖರೀದಿಗೆ ನಿರಾಕರಿಸಿವೆ ಎಂಬ ಮಾತು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿವೆ.

ಇನ್ನೂ ಫ್ರಾನ್ಸ್‌ನ ರಫೇಲ್ ಯುದ್ಧ ವಿಮಾನದ ಬೆಲೆ ಸಾಕಷ್ಟು ದುಬಾರಿ‌ ಆಗಿದ್ದು ಬೇರೆ ದೇಶಗಳು ರಫೇಲ್ ಸಮನಾದ ಬಲಿಷ್ಠತೆ ಹೊಂದಿರುವ ಬೆಲೆ ಕೂಡ ಕಡಿಮೆ ಇರುವ ಅಮೇರಿಕಾ ಹಾಗೂ ರಷ್ಯಾ ದೇಶಗಳ ಯುದ್ಧ ವಿಮಾನಗಳ ಖರೀದಿಗೆ ಹೆಚ್ಚು ಒತ್ತು ನೀಡಿವೆ. ಇನ್ನೂ ಫ್ರಾನ್ಸ್ ರಫೇಲ್ ಯುದ್ಧ ವಿಮಾನ ಉತ್ಪಾದನೆ ಹಾಗೂ ಪುರೈಕೆಯಲ್ಲೂ ಸಾಕಷ್ಟು ವಿಳಂಬ ಮಾಡುವ ವಿಚಾರ ಕೂಡ ರಫೇಲ್‌ಗೆ ಕಂಟಕವಾಗಿದೆ. ಒಟ್ಟಿನಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತ ಬಿಟ್ಟರೆ ಬಲಿಷ್ಠ ರಫೇಲ್‌ ಯುದ್ಧ ವಿಮಾನ ಬೇರೆ ದೇಶಗಳನ್ನು ತನ್ನತ್ತ ಸೆಳೆಯುವಲ್ಲಿ ಸೋತಿದೆ..

Show More

Related Articles

Leave a Reply

Your email address will not be published. Required fields are marked *

Back to top button
error: Content is protected !!