ಕೃಷಿ

ಇಳುವರಿಗೂ ,ರುಚಿಗೂ ಸೈ ಎನ್ನುವ ದೇಶಿ ಬದನೆ ತಳಿಗಳು

ವಿನೋದ ರಾ ಪಾಟೀಲ
ಬೆಳಗಾವಿ- ಗಡಿ ಜಿಲ್ಲೆ ಬೆಳಗಾವಿಯು ತರಕಾರಿಯ ತವರು. ಇಲ್ಲಿಯ ತರಕಾರಿ ನೆರೆ ರಾಜ್ಯ ಗೋವಾ, ಮಹಾರಾಷ್ಟ್ರ ಸೇರಿ ಹೀಗೆ ಹತ್ತು ಹಲವು ಕಡೆ ರಫ್ತಾಗುತ್ತವೆ. ಹಸಿರುಕ್ರಾಂತಿ ನಂತರ ಹೈಬ್ರೀಡ್ ತಳಿಗಳಿಗೆ ಹೆಚ್ಚು ಓತ್ತು ನೀಡಿದ್ದರಿಂದ ನಮ್ಮ ಹೋಲಗಳಿಂದ ಹಲವು ದೇಶಿತಳಿಗಳು ಮಾಯವಾಗಿದ್ದವು.ಆದರೂ ನಮ್ಮ ಬೆಳಗಾವಿಯ ಹಲವೆಡೆ ಇನ್ನೂ ದೇಶಿ ತಳಿಗಳನ್ನು ನಮ್ಮ ರೈತರು ಉಳಿಸಿಕೊಂಡು ಬಂದಿದ್ದಾರೆ.
ಆಹಾರದ ಗುಣಮಟ್ಟಕ್ಕೆ ಹೆಸರುವಾಸಿಯಾದ ಇವುಗಳಿಗೆ ಇಂದಿಗೂ ಪೇಟೆಯಲ್ಲಿ ಹೆಚ್ಚಿನದರದಲ್ಲಿ ಮಾರಾಟವಾಗುತ್ತವೆ. ಹೆಚ್ಚು ಪ್ರಚಾರ ಸಿಗದೇ ಕೇವಲ ಸ್ಥಳಿಯವಾಗಿ ಮಾತ್ರ ಪರಿಚಿತವಾಗಿರುವವು. ಅಂತಹ ಎರಡು ತಳಿ ಅವರಾದಿ ಬದನೆ ಮತ್ತು ಮಾಳಾಪುರದ ಬದನೆ.
ಕಿತ್ತೂರು, ಅವರಾದಿ ಮತ್ತು ಸುತ್ತುಮುತ್ತು ಗ್ರಾಮಗಳಲ್ಲಿ ಬೆಳೆಯಲಾಗುತ್ತದೆ. ಮಾರುಕಟ್ಟೆ ಅಥವಾ ರೈತರೇ ಬೂದಿಯಲ್ಲಿ ಸಂಗ್ರಹಿಸಿಟ್ಟುಕೊಂಡು ಬೆಳಯುತ್ತಾರೆ.
ಸ್ಥಳೀಯ ಮತ್ತು ಬೆಳಗಾವಿ, ಧಾರವಾಡದ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ.
ಪ್ರಾರಂಪರಿಕ ಬದನೆಯ ಬೀಜಗಳು ಕಬ್ಬು ಮತ್ತು ಗೋವಿನ ಜೋಳ ಬೆಳೆ ತನ್ನ ಕ್ಷೇತ್ರವನ್ನು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಈ ತರಹದ ದೇಶಿ ಬೀಜಗಳು ಪ್ರಚಲಿತಕ್ಕೆ ಬರುತ್ತಿರುವದು ದೇಶಿ ಬೀಜಾಂದೋಲನಕ್ಕೆ ಬಲ ಬಂದಂತಾಗಿದೆ.
ಬೆಳಗಾವಿಯ ಅವರಾದಿ ಬದನೆ, ಗಂದಿಗವಾಡ ಬದನೆ, ಮಾಳಾಪುರದ ಬದನೆ, ಚಿವಡಗುಂಡಿ ಬದನೆ ಎಲ್ಲರ ಮನೆಯ ಅಡುಗೆ ಮನೆಯಲ್ಲಿ ಅನ್ನದ ತಟ್ಟೆಯಲ್ಲಿ ಇರುತ್ತವೆ. ಅವುಗಳ ರುಚಿ ಅವುಗಳನ್ನು ನಮ್ಮಿಂದ ದೂರ ಮಾಡಿಲ್ಲ. ಮುಂಗಾರಿನಲ್ಲಿ ಹಾಗೂ ಹಿಂಗಾರಿನಲ್ಲೂ ಬರುವ ತಳಿಗಳಾಗಿವೆ. ಮುಖ್ಯವಾಗಿ ಇವುಗಳಿಗೆ ರೋಗಭಾದೆ ಇರುವದಿಲ್ಲ. ಕಿತ್ತೂರ ತಾಲೂಕಿನ ಅವರಾದಿಯ ಬದನೆ ಕಿತ್ತೂರಿನ ಸೋಮವಾರ ಪೇಟೆಯ ರಾಜ ಎಂದು ಕರೆಸಿಕೊಳ್ಳುತ್ತದೆ.
ಬದನೆಯನ್ನು ಮಳೆಯಾಶ್ರಿತ ಮತ್ತು ನೀರಾವರಿಯಲ್ಲು ಬೆಳೆಯಬಹುದು.
ಸಾಮಾನ್ಯವಾಗಿ ಆಗಸ್ಟನಲ್ಲಿ ನಾಟಿ ಮಾಡುತ್ತಾರೆ. ಏಕರೆಗೆ 250 ಗ್ರಾಂ ಬೀಜ ನಾಟಿ ಮಾಡುತ್ತಾರೆ. ಜನೆವರಿಂದ ಇದರ ಫಲ ನಮಗೆ ದೊರೆಯತ್ತದೆ ವಾರದಲ್ಲಿ 2 ಬಾರಿ ಇದನ್ನು ಕೋಯ್ಲು ಮಾಡುತ್ತಾರೆ. ಪ್ರತಿ ಬಾರಿ 8 ರಿಂದ 10 ಕ್ವಿಂಟಾಲ ಇಳುವರಿ ಸಿಗುತ್ತದೆ.
ಈ ವಿಶೇಷ ಬದನೆ ತಳಿಗಳು ರೋಗ ನೀರೋಧಕಗುಣ ಹೊಂದಿದೆ.
ಬದನೆಯು ಹಸಿರು ಮಿಶ್ರಿತ ಬಿಳಿ ಬಣ್ಣ ಹೊಂದಿವೆ. ಇದರಿಂದ ಮಾಡಿದ ಏಣ್ಣೆಗಾಯಿ ಪಲ್ಯ ಬಲು ರುಚಿಯಾಗಿರುತ್ತದೆ. ಹಬ್ಬ ಹರಿದಿನಗಳಲ್ಲಿ ಇದರಿಂದ ವಿಶೇಷ ಖಾದ್ಯಗಳನ್ನು ತಯಾರಿಸುತ್ತಾರೆ.
ಸ್ಥಳೀಯವಾಗಿ ರೈತರು ಗ್ರಾಮಗಳಾದ ಬಾಗೇವಾಡಿ ಎಮ್.ಕೆ.ಹುಬ್ಬಳಿ , ಸಂಪಗಾಂವ ಸಂತೆಗಳಲ್ಲಿ ಇದನ್ನು ಮಾರಾಟ ಮಾಡುತ್ತಾರೆ. ದೇಶಿ ತಳಿಗಳು ಮಾಯವಾಗುತ್ತಿರುವ ಈ ಸಂದರ್ಭದಲ್ಲಿ ಇಂತಹ ದೇಶಿ ಬದನೆಗಳು ನಮ್ಮ ನಡುವೆ ಇರುವದು ನಮ್ಮ ಜೀವವೈವಿಧ್ಯದ ಕುರುಹುವಾಗಿದೆ.
ನಮ್ಮ ದೇಶಿ ತಳಿಗಳು ಇವಾಗಿದ್ದು ಹಿಂದಿನಿಂದಲೂ ಇವುಗಳನ್ನು ಬಳಕೆ ಮಾಡುತ್ತಿದ್ದೇವೆ. ಜೊತೆಗೆ ಇವುಗಳಿಂದ ನಮಗೆ ಗುಣಮಟ್ಟದ ಆಹಾರವನ್ನು ಪಡೆದಿದ್ದೇವೆ ಎಂದು ದುಂಡಪ್ಪಾ ಇನಾಂದಾರ ಸಾವಯವ ರೈತರು ಎಂದು ತಮ್ಮ ಅಭಿಪ್ರಾಯ ಹೇಳಿದ್ದಾರೆ.

Show More

Leave a Reply

Your email address will not be published. Required fields are marked *

Back to top button
error: Content is protected !!