ಜಿಲ್ಲಾ
ನಾಳೆ ಬೆಳಗಾವಿ ಜಿಲ್ಲಾ ಎನ್.ಪಿ.ಎಸ್ ನೌಕರರ ಗೂಗಲ್ ಮೀಟ್ ಸಭೆ

ಬೆಳಗಾವಿ- ಎನ್.ಪಿ.ಎಸ್ ಸಂಬಂಧಿತ ಮಾಹಿತಿ ,ಜಾಗೃತಿ ಹಾಗೂ ಹೋರಾಟದಹಾದಿ ಹುಡಕಲು ಆಗಷ್ಟ್ 2 ರಂದು ರವಿವಾರ ಮದ್ಯಾಹ್ನ 2.45 ಗಂಟೆಗೆ ಸರಕಾರಿ ನೌಕರರಿಗೆ ಆನ್ಲೈನ್ ಗೂಗಲ್ ಮೀಟ್ ಸಭೆಯನ್ನು ಈ …https://meet.google.com/fst-oszw-bbj ಲಿಂಕ್ ಮೂಲಕ ಏರ್ಪಡಿಸಲಾಗಿದೆ. ಕೆ.ಎಸ್.ಜಿ.ಇ.ಎ.ದ ರಾಜ್ಯಾಧ್ಯಕ್ಷರಾದ ಸಿ.ಎಸ್.ಷಡಕ್ಷರಿ,ಹಾಗೂ ಪ್ರಧಾನಕಾರ್ಯದರ್ಶಿ ಜಗದೀಶ ಗೌಡಪ್ಪ ಪಾಟೀಲ ಉದ್ಘಾಟಿಸಲಿದ್ದು ಕೆ.ಎಸ್.ಪಿ.ಎಸ್.ಟಿ.ಯ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.
ಸಂಪನ್ಮೂಲ ವ್ಯಕ್ತಿಗಳಾಗಿ ಪವನ ಅಮಟೆ, ಮಂಜುನಾಥ ಕಲಾಲ ಹಾಗೂ ಉಮೇಶ ಸಂಪನ್ಮೂಲ ವ್ಯಕ್ತಿಗಳಾಗಿ ಪವನ ಅಮಟೆ,ಮಂಜುನಾಥ ಕಲಾಲ,ಹಾಗೂ ಉಮೇಶ ಕೊಲಾರಕೊಪ್ಪ, ಭಾಗವಹಿಸಲಿದ್ದಾರೆ.ಜಿಲ್ಲೆಯ ಎಲ್ಲ ಸರಕಾರಿ ಎನ್.ಪಿ,ಎಸ್ ನೌಕರರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಆಯೋಜಕರಾದ ಸವದತ್ತಿ ತಾಲೂಕಿನ ಸರಕಾರಿ ಎನ್.ಪಿ.ಎಸ್ ನೌಕರ ಸಂಘದ ಅಧ್ಯಕ್ಷರಾದ ಮರಿಗೌಡ ಮುದ್ದನಗೌಡ್ರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.