ದೇಶ & ವಿದೇಶ

ಆಂಧ್ರ ಪ್ರದೇಶಕ್ಕೆ ಮೂರು ಪ್ರತ್ಯೇಕ ರಾಜ್ಯಧಾನಿ- ರಾಜ್ಯಪಾಲರ ಒಪ್ಪಿಗೆ!

ಅಮರಾವತಿ- ಕಳೆದ ಅನೇಕ ದಿನಗಳಿಂದ ಆಂಧ್ರ ಪ್ರದೇಶಕ್ಕೆ ಮೂರು ರಾಜಧಾನಿ ಬಗ್ಗೆ ಚರ್ಚೆ ನಡೆಯುತ್ತಿತ್ತು. ಆದರೇ ಇಂದು ಮೂರು ರಾಜಧಾನಿಗಳ ಅಧಿಕೃತ ಆದೇಶಕ್ಕೆ ರಾಜ್ಯಪಾಲ ಬಿಸ್ವಾಭೂಸನ್ ಹರಿಚಂದನ್ ಅಧಿಕೃತ ಮುದ್ರೆ ಹಾಕಿದ್ದಾರೆ.

ಈ ಹಿಂದಿನ ಟಿಡಿಪಿ ಸರ್ಕಾರ ಅಮರಾವತಿ ನಗರವನ್ನೇ ರಾಜಧಾನಿ ಎಂದು ಘೋಷಣೆ ಮಾಡಿತ್ತು. ಸದ್ಯ ಅಧಿಕಾರದಲ್ಲಿ ಇರೋ ವೈ ಎಸ್ ಆರ್ ಕಾಂಗ್ರೆಸ್ ಪಕ್ಷದ ಜಗನ್ ರಾಜ್ಯದಲ್ಲಿ ಸುಗಮ ಆಡಳಿತದ ದೃಷ್ಠಿಯಿಂದ ಮೂರು ರಾಜಧಾನಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಸದ್ಯ ನೂತನ ಮಸೂದೆಯನ್ನು ಆಂದ್ರದ ವಿಧಾನ ಸಭೆ, ವಿಧಾನ ಪರಿಷತ್ ನಲ್ಲಿ ಟಿಡಿಪಿ ವಿರೋಧದ ನಡುವೆ ಅನುಮೋದನೆ ಪಡೆಯಲಾಗಿದೆ. ವಿಶಾಖಪಟ್ಟಣ ನಗರದ ಆಡಳಿತಾತ್ಮಕ ರಾಜಧಾನಿ, ಅಮರಾವತಿ ಶಾಸನ ರಾಜಧಾನಿ ಹಾಗೂ ಕರ್ನೂಲ್ ನ್ಯಾಯ ರಾಜಧಾನಿಯಾಗಲಿದೆ.

Show More

Related Articles

Leave a Reply

Your email address will not be published. Required fields are marked *

Back to top button
error: Content is protected !!