ಕರ್ನಾಟಕ

ಸಿಎಂ ಮನೆಗೆ ಡಿಸಿಎಂ ಲಕ್ಷ್ಮಣ ಸವದಿ ಭೇಟಿ- ದೆಹಲಿ ಭೇಟಿ ಗುಟ್ಟು ರಟ್ಟು?

ಬೆಂಗಳೂರು- ರಾಜ್ಯದಲ್ಲಿ ಶೀಘ್ರದಲ್ಲಿಯೇ ರಾಜಕೀಯ ಕ್ಷೀಪ್ರ ಕ್ರಾಂತಿ ಆಗಲಿದೆ. ರಾಜ್ಯದಲ್ಲಿ ಮತ್ತೊಮ್ಮೆ ಸಿಎಂ ಬದಲಾವಣೆ ಆಗಲಿದ್ದು, ಇದಕ್ಕಾಗಿ ಲಕ್ಷ್ಮಣ ಸವದಿ ಸರ್ಕಾರ ವರ್ಷಾಚರಣೆ ಸಂದರ್ಭದಲ್ಲಿ ದೆಹಲಿಗೆ ಹೋಗಿದ್ರು. ಹೈಕಮಾಂಡ್ ಜತೆಗೆ ಸವದಿ ಮಾತಕುತೆ ನಡೆಸಿದ್ದಾರೆ ಎಂಬ ಊಹಾಪೋಹಗಳು ರಾಜ್ಯದಲ್ಲಿ ಹರಿದಾಡುತ್ತಿವೆ.

ಈ ಎಲ್ಲಾ ವಿಷಯಗಳ ಬಗ್ಗೆ ಸಿಎಂ ಬಿಎಸ್ ಯಡಿಯೂರಪ್ಪಗೆ ಖುದ್ದು ಇಂದು ಡಿಸಿಎಂ ಲಕ್ಷ್ಮಣ ಸವದಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ದೆಹಲಿಯಿಂದ ಇಂದು ಬೆಂಗಳೂರಿಗೆ ವಾಪಸ್ ಆಗಿದ್ದ ಲಕ್ಷ್ಮಣ ಸವದಿ ಚರ್ಚೆ ನಡೆಸಿದ್ದಾರೆ. ದೆಹಲಿ ಭೇಟಿಗ್ಗೆ ಸಿಎಂ ಬಳಿ ಗಟ್ಟು ರಟ್ಟು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ನಡುವೆ ರಾಜ್ಯದಲ್ಲಿ ನಡೆಯಲಿದೆ ಎನ್ನಲಾಗಿದ್ದ ಸಂಪುಟ ಪುನರ್ ರಚನೆಯ ಬಗ್ಗೆ ಇನ್ನೂ ಅಂತಿಮವಾಗಿಲ್ಲ. ಸದ್ಯ ಸಿಎಂ ದೊಡ್ಡ ಇಕ್ಕಟಿಗೆ ಸಿಲುಕುವ ಬದಲು ಖಾಲಿ ಇರೋ ಸ್ಥಾನಗಳಲ್ಲು ಭರ್ತಿ ಮಾಡಿಕೊಳ್ಳಲು ಚರ್ಚೆ ನಡೆಸಿದ್ದಾರೆ. ಈ ಬಗ್ಗೆ ಆಪ್ತರ ಬಳಿ ಮುಂದಾಗುವ ಸಾಧಕ ಭಾದಕ ಬಗ್ಗೆ ಮಾತಕುತೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

Show More

Related Articles

Leave a Reply

Your email address will not be published. Required fields are marked *

Back to top button
error: Content is protected !!