ಮಕ್ಕಳ ಶಿಕ್ಷಣಕ್ಕಾಗಿ ತಾಳಿ ಅಡವಿಟ್ಟು ಟಿವಿ ಕೊಡಿಸಿದ ಮಹಾತಾಯಿ!

ಗದಗ- ಮಕ್ಕಳ ಆನ್ ಲೈನ್ ಪಾಠಕ್ಕಾಗಿ ತಾಯಿ ತನ್ನ ಚಿನ್ನದ ತಾಳಿಯನ್ನ ಅಡವಿಟ್ಟು ಟಿವಿ ತಂದುಕೊಟ್ಟಿದ್ದಾಳೆ ಮಹಾತಾಯಿ. ಗದಗ ಜಿಲ್ಲೆಯ ನರಗುಂದ ತಾಲೂಕಿನ ರಡ್ಡೇರ್ ನಾಗನೂರ ಗ್ರಾಮದಲ್ಲಿ ಘಟನೆ ನಡೆದಿದೆ. ಕಸ್ತೂರಿ ಅನ್ನೋ ಹೆಣ್ಮಗಳು ತನ್ನ ಇಬ್ಬರು ಮಕ್ಕಳು ಹೈಸ್ಕೂಲ್ ಮತ್ತು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾರೆ. ಮಕ್ಕಳ ವಿದ್ಯಾಭ್ಯಾಸ ಹಾಳಾಗಬಾರದು ಎಂದು ಟಿವಿ ತಂದು ಕೊಟ್ಟು ಎಲ್ಲರಿಗೂ ಮಾದರಿಯಾಗಿದ್ದಾಳೆ.
ಕಸ್ತೂರಿ ಎಂಬ ಮಹಿಳೆಯ ಓರ್ವ ಮಗಳು 8 ನೇ ತರಗತಿಯಲ್ಲಿ ಇನ್ನೋರ್ವ ಮಗ 7 ನೇ ತರಗತಿಯಲ್ಲಿ ಓದುತ್ತಿದ್ದಾರೆ. ಆದ್ರೆ ಈಗ ಮಕ್ಕಳಿಗೆ ಚಂದನ ವಾಹಿನಿಯಲ್ಲಿ ಪ್ರಸಾರವಾಗುವ ಪಾಠವನ್ನ ಕೇಳಲು ಶಿಕ್ಷಕರು ಪ್ರತಿದಿನ ಪೋನ್ ಮೂಲಕ ಕರೆ ಮಾಡಿ ಟಿವಿ ನೋಡಿ ಅಂತ ಹೇಳ್ತಿದ್ರು. ಜೊತೆಗೆ ಅದರಲ್ಲಿ ಬರುವ ಪಾಠಗಳ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಿದ್ದರು.
ಮನೆಯಲ್ಲಿ ಟಿವಿ ಇಲ್ಲದ ಕಾರಣ ಟಿವಿ ನೋಡೋದಕ್ಕೆ ಆಗ್ತಿರಲಿಲ್ಲ. ಜೊತೆಗೆ ಶಿಕ್ಷಕರು ಕೇಳಿದ ಪ್ರಶ್ನೆಗೆ ಉತ್ತರಿಸಲು ಮಕ್ಕಳಿಗೆ ಆಗ್ತಿರಲಿಲ್ಲ. ಇವರ ಮನೆಯಲ್ಲಿ ಈ ಮೊದಲು ಇದ್ದ ಟಿವಿ ಸುಟ್ಟು ಹೋಗಿತ್ತು. ಹೀಗಾಗಿ ಮಕ್ಕಳು ಟಿವಿ ನೋಡಲು ಕಷ್ಟ ಪಡ್ತಿದ್ರು. ಬೇರೆಯವರ ಮನೆಗೆ ಹೋದ್ರೆ ಅವರು ಸಿನಿಮಾ ಇನ್ನಿತರ ಕಾರ್ಯಕ್ರಮಗಳನ್ನು ನೋಡ್ತಿದ್ರು ಹೀಗಾಗಿ ತನ್ನ ತಾಯಿ ಟಿವಿಯೊಂದನ್ನ ಖರೀದಿಸಲೇಬೇಕು ಅಂತ ವಿಚಾರ ಮಾಡ್ತಾರೆ.
ಮೊದಲೆ ಲಾಕ್ ಡೌನ್ ದಿಂದಾಗಿ ಕೆಲಸವಿಲ್ಲದೆ ಕೈಯಲ್ಲಿ ಹಣ ಇಲ್ದೆ ಕಂಗಾಲಾಗಿದ್ದ ಇವರು ಮಕ್ಕಳ ಗೋಳು ನೋಡೋದಕ್ಕೆ ತಾಯಿಯಿಂದ ಆಗಲಿಲ್ಲ. ಹೀಗಾಗಿ ಒಂದು ದಿಢೀರ್ ನಿರ್ಧಾರಕ್ಕೆ ಬರ್ತಾರೆ. ತನ್ನ ಕೊರಳಲಿದ್ದ ಚಿನ್ನದ ತಾಳಿಯನ್ನ ಅಡವಿಟ್ಟು ಟಿವಿ ಖರೀದಿಸಲು ಯೋಚನೆ ಮಾಡ್ತಾರೆ. ಕೊನಗೆ ಅಂದುಕೊಂಡ ನಿರ್ಧಾರದಂತೆ 32 ಇಂಚಿನ ಒಂದು ಸ್ಯಾಮ್ಸಂಗ್ ಟಿವಿಯನ್ನ ತಂದು ಮಕ್ಕಳಿಗೆ ಓದಲು ಅನುಕೂಲ ಮಾಡಿಕೊಡ್ತಾರೆ.
20 ಸಾವಿರ ರೂ.ಗೆ ತಾಳಿ ಅಡವಿಟ್ಟು 14 ಸಾವಿರ ರೂ. ಗೆ ಟಿವಿ ಖರೀದಿ ಮಾಡಿಕೊಂಡು ಬರ್ತಾರೆ. ಸದ್ಯ ಅವರಿಗೆ ಇದ್ದ ದೊಡ್ಡ ಸಮಸ್ಯೆ ಪರಿಹರಿಸಿಕೊಂಡಿದ್ದಾರೆ. ಆದ್ರೆ ಮುಂದೆ ಅಡವಿಟ್ಟ ತಾಳಿಯನ್ನ ಕೂಲಿ ಮಾಡಿದ ಸಂಬಳದಲ್ಲಿ ಕುಟುಂಬ ನಿರ್ವಹಣೆ ಮಾಡಿ ಉಳಿದ ಹಣವನ್ನ ಕಟ್ಟಿ ತಾಳಿ ಬಿಡಿಸಿಕೊಳ್ಳಬಹುದು ಅಂತ ಯೋಚನೆ ಮಾಡಿದ್ದಾರೆ.