ಕೃಷಿ

ಕೈ ಹಿಡಿದ ಸುಸ್ಥಿರ ಬೇಸಾಯ ಪದ್ಧತಿ- ಯುವಕನೊಬ್ಬನ ಕೃಷಿ ಯಶೋಗಾಧೆ

ವಿಶೇಷ ಲೇಖನ
ವಿನೋದ ರಾ ಪಾಟೀಲ

‘ಮನೆಯೇ ಮೊದಲ ಪಾಠ ಶಾಲೆ’ಎನ್ನುವ ಹಾಗೆ ನಾವು ಮನೆಯಿಂದಲೇ ಮಕ್ಕಳಿಗೆ ಕೃಷಿ ಸಂಸ್ಕಾರ ಕೊಟ್ಟಿದ್ದೆ ಆದರೆ ಮಕ್ಕಳು ಸ್ವಾವಲಂಬನೆ ಬದುಕು ಸಾಗಿಸಬಲ್ಲರು. ಯುವಕರು ಇಂದು ಸಾಲಿ ಕಲಿತು ನೌಕರಿ ಹುಡುಕಿ ನಗರವಾಸಿಗಳಾಗುತ್ತಿದ್ದರೆ ಇಲ್ಲೋಬ್ಬ ರಾಯಬಾಗ ತಾಲೂಕಿನ ಹಿಡಕಲ್ ಗ್ರಾಮದ ಯುವಕ ಶಿವಾನಂದ ಲಕ್ಷಣ ಮಾಳಿ ದೊಡ್ಡಪ್ಪನ ಕೃಷಿ ನೋಡುತ್ತಾ ಬೆಳೆದು ತಾನು ಮಣ್ಣಿನ ಜೊತೆ ಬೆರೆತು ಕೆಲಸ ಮಾಡುತ್ತಾ ಮೂಲಕ ಸುಂದರ ಬದುಕು ಕಟ್ಟಿಕೊಂಡಿದ್ದಾನೆ.
ಇವರು ಓದಿದ್ದು ಬಿ.ಎ ನಂತರ ಬಾಲ್ಯದಿಂದ ಒಡನಾಡಿಯಾಗಿದ್ದ ಮಣ್ಣಿನ ಸಂಗ ಇವರನ್ನು ಈ ವೃತ್ತಿಗೆ ಎಳೆದು ತಂಂದಿತು. ಶ್ರಧ್ದೆಯೊಂದಿದ್ದರೆ ಏನಾದರೂ ಸಾಧಿಸಬಲ್ಲೇವು ಎನ್ನುವದಕ್ಕೆ ಈ ಯುವಕ ಮಾದರಿಯಾಗಿದ್ದಾನೆ. ನಾಲ್ಕು ಏಕರೆ ಭೂಮಿಯಲ್ಲಿ ಸಮಗ್ರ ಬೇಸಾಯದ ತೋಟವನ್ನು ಇಂದು ಹತ್ತಾರು ಜನ ಸಂದರ್ಶನ ಮಾಡಿ ತಾವೂ ಅಳವಡಿಸಿಕೊಂಡಿದ್ದಾರೆ. ಕೃಷಿ ಅಧಿಕಾರಿಗಳು ಹಲವು ಬೆಳೆ ಕ್ಷೇತ್ರೋತ್ಸವಗಳನ್ನು ಮಾಡಿದ್ದಾರೆ.
ಸಮಗ್ರ ಬೇಸಾಯ
ಸಾವಯವದಲ್ಲಿ ಇವರ ದೊಡಪ್ಪ ಕಲ್ಲಪ್ಪ ಮಾಳಿ ಬೇಸಾಯ ಮಾಡಿಕೊಂಡು ಬಂದಿದ್ದರು. ಅದೇ ಕೆಲಸಕ್ಕೆ ಇವರು ನಾವಿಣ್ಯತೆಯ ಸ್ಪರ್ಶ ನೀಡಿ ವ್ಯವಸಾಯ ಮಾಡಿದ್ದಾರೆ. ಕೊಟ್ಟಿಗೆ ಗೊಬ್ಬರ, ಏರೆಹುಳು ತೋಟ್ಟಿ , ಜೀವಾಮೃತ, ಬೀಜೋಪಚಾರ, ಮಾಡಿಕೊಂಡಿದ್ದಾರೆ. ಹಾಗೂ ಉಪಕಸಬುಗಳನ್ನು ಅಳವಡಿಸಿಕೊಂಡು ಸುಸ್ಥಿರ ಬದುಕು ಕಟ್ಟಿಕೊಂಡಿದ್ದಾರೆ. ಇವರದ್ದು ನಾಲ್ಕುವರೆ ಏಕರೆ ಜಮೀನಿದೆ. ಅಲ್ಲಿ ಚೆಂಡು ಹೂ,ಕಬ್ಬು,ತರಕಾರಿ .ರೇಶ್ಮೆ, ಕೃಷಿಯನ್ನು ಮಾಡಿಕೊಂಡು ಬರುತ್ತಿದ್ದಾರೆ.
ಉಪಕಸಬುಗಳಾದ ಹೈನುಗಾರಿಕೆ, ಮೊಲಸಾಕಾಣಿಕೆಯು ಇವರ ಆದಾಯಕ್ಕೆ ಕೈ ಜೋಡಿಸಿವೆ. ಚೆಂಡು ಹೂ,ಸದಕ,ಅರಿಷಿಣ,ಗೋವಿನಜೋಳ ಪ್ರಮುಖ ಬೆಳೆಗಳನ್ನು ಬೆಳೆಯುತ್ತಾರೆ. ಇನ್ನೂಳಿದ ಜಮೀನಿನಲ್ಲಿ ಹಿಪ್ಪುನೇರಳೆ ಜೊತೆ ಮಿಶ್ರಬೆಳೆಯಾಗಿ ಕಬ್ಬು,ಸುವರ್ಣಗಡ್ಡೆ, ರಾಗಿ, ನವಣೆ, ಚಿಯಾ, ಸಾಮನ್ಯವಾಗಿ ಏಕರೆಗೆ ಬೇರಡೆ ಕಬ್ಬು 50 ಟನ್ ಕಬ್ಬು ಇಳುವರಿ ಬಂದರೆ ಇವರು ಸಾವಯವದಲ್ಲಿ 65 ರಿಂದ 70 ಟನ್ ವರೆಗೆ ಇಳುವರಿ ಪಡೆಯುತ್ತಾರೆ.

ಮಿಶ್ರಬೆಳೆ
ಒಂದೂವರೆ ಏಕರೆಯಲ್ಲಿ ಇವರು ಮಿಶ್ರಬೆಳೆಯಾಗಿ ಹಿಪ್ಪುನೇರಳೆಯ ಜೊತೆ ಕಬ್ಬು ಮಾಡಿಕೊಂಡಿದ್ದು ಎಲ್ಲರ ಗಮನಸೆಳೆಯುತ್ತದೆ.ಇಲ್ಲಿ ಮೊದಲು ಸಾಲಿನಿಂದ ಸಾಲಿಗೆ 12 ಫೂಟ್ ಇದ್ದು, ಕಬ್ಬಿನ ಸಸಿಯ ಪಿಟ್ ದಿಂದ ಪಿಟ್ ಗೆ 6 ಪೂಟ್ ಇದೆ. 12 ಪೂಟ್ ಅಂತರದಲ್ಲಿ ರೇಷ್ಮೆ, ಅವರೆ, ನವಣೆ,ತರಕಾರಿಗಳನ್ನು , ಚಿಯಾ, ಸುವಣಗಡ್ಡೆ ಹೀಗೆ ಹಲವು ಬೆಳೆಗಳನ್ನು ಬೆಳೆದಿದ್ದಾರೆ. ಇವರು ಸೂಕ್ತ ರೀತಿಯಲ್ಲಿ ಬೀಜೋಪಚಾರ ಮಾಡಿಕೊಂಡು ನಾಟಿ ಮಾಡುತ್ತಾರೆ.
ಜೀವಾಮೃತ, ಟ್ರಯಕೋಡರ್ಮ ಗಳನ್ನು ಬೆಳೆಗಳಿಗೆ ಊಣಿಸುತ್ತಾರೆ.ಇದರಿಂದ ಬೆಳೆಗಳಿಗೆ ಟಾನಿಕ ದೊರೆತು ಸಮೃದ್ದವಾಗಿ ಬೆಳೆದು ಇಳುವರಿಯಲ್ಲೂ ಗಣನೀಯವಾಗಿ ಹೆಚ್ಚಳವಾದ್ದನ್ನು ಕಾಣಬಹುದಾಗಿದೆ.ದನಗಳ ತಾಜ್ಯವನ್ನು ಸಮರ್ಪಕವಾಗಿ ಬಳಸಿಕೊಂಡಿದ್ದಾರೆ ಇದರಿಂದ ಇವರು ಏರೆಹುಳುಗೊಬ್ಬರ ಮಾಡಿಕೊಂಡು ಜಮೀನಿಗೆ ಹಾಕುಲಾಗುತ್ತಿದೆ. ವೆಸ್ಟಡಿ ಕಂಪೋಸರ ಮೂಲಕ ಕಳಿಸಿ ಜಮೀನಿಗೆ ಉಪಯೋಗಿಸುತ್ತಾರೆ.ಡ್ರೀಪ್ ಮೂಲಕ ನೀರೂಣಿಸುವ ಮೂಲಕ ನೀರು ಮಿತವ್ಯಯ ಬಳಕೆಯಲ್ಲದೆ ಮಣ್ಣಿನ ಫಲವತ್ತತೆ ಕಾಯ್ದುಕೊಂಡಿದ್ದಾರೆ.

ಆದಾಯ

ಸಾವಯವದಲ್ಲಿ ಬೆಳೆದ ಕಬ್ಬಿನಿಂದ ಮನೆಗೆ ಬೇಕಾಗುವಷ್ಟು ಬೆಲ್ಲವನ್ನು ಮಾಡಿಸಿಕೊಂಡು ಬರುತ್ತಾರೆ. ಒಟ್ಟು 15 ದನಗಳಿದ್ದು ಅದರಲ್ಲಿ 8 ಆಡುಗಳಿವೆ.ಹಸುಗಳು ನಿತ್ಯ 5 ಲೀಟರ ವರೆಗೆ ಹಾಲು ನೀಡುತ್ತವೆ. ಕಬ್ಬು,ರೇಷ್ಮೆ ,ಇತರ ಬೆಳೆಗಳಿಂದ ವಾರ್ಷಿಕವಾಗಿ 7 ರಿಂದ 8 ಲಕ್ಷದವರೆಗೆ ಆದಾಯ ಪಡೆಯುತ್ತಾರೆ.ರೇಷ್ಮೆಯಿಂದ 2 ತಿಂಗಳಿಗೆ 30 ರಿಂದ 50 ಸಾವಿರದವರೆಗೆ ಆದಾಯ ಪಡೆಯುತ್ತಾರೆ.
ಇತ್ತೀಚಿಗೆ ಮೊಲಸಾಕಾಣಿಕೆ ಮಾಡಿಕೊಂಡಿದ್ದು ಸದ್ಯ 15 ಮೊಲಗಳಿವೆ. ಕೃಷಿ ಉತ್ಪನ್ನಗಳನ್ನು ಸ್ಥಳೀಯ ಮಾರುಕಟ್ಟೆಗಳಾದ ಹಾರೋಗೇರಿ,ಮಹಾಲಿಂಗಪೂರದಲ್ಲಿ ಮಾರಾಟ ಮಾಡುತ್ತಾರೆ. ಚೆಂಡು ಹೂವನ್ನು ಒಪ್ಪಂದ ಮಾಡಿಕೊಂಡು ಮಾರಾಟ ಮಾಡುತ್ತಾರೆ.

ಯುವಕರು ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯ ಎನ್ನುವದಕ್ಕೆ ಇವರು ಉದಾಹರಣೆ.ಮಾರುಕಟ್ಟೆಯಿಂದ ಎಣ್ಣೆ ಮತ್ತು ಉಪ್ಪನ್ನು ಮಾತ್ರ ತರುವ ಇವರು ತಮಗೆ ಬೇಕಾದ ಆಹಾರವನ್ನು ತಾವೇ ಬೆಳೆದುಕೊಳ್ಳುತ್ತಾರೆ ಇದರಿಂದ ಕುಟುಂಬ ನಿರ್ವಹಣೆ ಖರ್ಚು ಉಳಿತಾಯವಾಗಿದೆ.ಇನ್ನೂ ಸಾವಯದಲ್ಲಿ ವಿಷಮುಕ್ತ ಆಹಾರವನ್ನು ಸೇವಿಸುವದರಿಂದ ಆರೋಗ್ಯವಾಗಿದ್ದೇವೆ ಮತ್ತು ದವಾಖಾನೆ ಖರ್ಚು ಉಳಿತಾಯವಾಗಿದೆ ಎನ್ನುತ್ತಾರೆ ಶಿವು ಮಾಳಿಯವರು..

Show More

Leave a Reply

Your email address will not be published. Required fields are marked *

Back to top button
error: Content is protected !!