ಸರ್ಕಾರಕ್ಕೆ ಸರ್ಜರಿ- ಸಂಪುಟ ಪುನರ್ ರಚನೆಯೋ-ವಿಸ್ತರಣೆಯೋ ಕುತೂಹಲ

ಬೆಂಗಳೂರು- ರಾಜ್ಯ ರಾಜಕಾಣದಲ್ಲಿ ಮತ್ತೆ ಕ್ಷೀಪ್ರ ಕಾಂತ್ರಿ ಆಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆಗಷ್ಟ್ 1 ಮತ್ತು 2ನೇ ವಾರದಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳವಣಿಗೆಗಳು ಸರ್ಕಾರದಲ್ಲಿ ಆಗಲಿವೆ. ಅದು ಸಿಎಂ ಬದಲಾವಣೆಯೇ ಅಥವಾ ಸಂಪುರ ಪುನರ್ ರಚನೆಯೆ ಎಂಬ ಗೊಂದಲಗಳು ಮೂಡಿವೆ.
ಸರಿಯಾಗಿ ಒಂದು ವರ್ಷದ ಹಿಂದೆ ರಾಜ್ಯದಲ್ಲಿ ಕ್ಷೀಪ್ರ ಕಾಂತ್ರಿಯ ಮೂಲಕ ಕಾಂಗ್ರೆಸ್- ಜೆಡಿಎಸ್ ಸಮ್ಮೀಶ್ರ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು ಇದೀಗ ಇತಿಹಾಸ. ಮತ್ತೆ ಇದೀಗ ರಾಜ್ಯ ರಾಜಕಾರಣದಲ್ಲಿ ಬದಲಾವಣೆ ಆಗಲಿವೆ ಎಂಬ ಚರ್ಚೆಗಳು ನಡೆಯುತ್ತಿವೆ. ಈ ಎಲ್ಲಾ ಚರ್ಚೆಗಳಿಗೆ ಕಾರಣವಾಗಿದ್ದು ಡಿಸಿಎಂ ಲಕ್ಷ್ಮಣ ಸವದಿ ನವದೆಹಲಿ ಭೇಟಿಯಾಗಿದೆ.
ರಾಜ್ಯದಲ್ಲಿ ಸಿಎಂ ಬದಲಾವಣೆ ಆಗಲಿದ್ದು ಮುಂದಿನ ಸಿಎಂ ಲಕ್ಷ್ಮಣ ಸವದಿ ಆಗಲಿದ್ದಾರೆ ಎಂದೇ ಹೇಳಲಾಗುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಅಥಣಿ ಭಾಗದಲ್ಲಿ ಸವದಿ ಅಭಿಮಾನಿಗಳು ಸವದಿ ಸಿಎಂ ಎನ್ನುವ ಪೋಸ್ಟರ್ ಗಳು ಸೊಶೀಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗಿವೆ.
ಸವದಿ ನಸೀಬಿನಲ್ಲಿ ಇದ್ರೆ ಸಿಎಂ ಆಗುತ್ತಾರೆ- ಸಚಿವ ರಮೇಶ ಜಾರಕಿಹೊಳಿ.!
ಈ ಬಗ್ಗೆ ಬೆಳಗಾವಿಯಲ್ಲಿ ಪತ್ರಿಕ್ರಿಯೆ ನೀಡಿದ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ, ಸವದಿ ನಸೀಬಿನಲ್ಲಿ ಇದ್ರೆ ಸಿಎಂ ಆಗಲಿ ಎನ್ನುವ ಮೂಲಕ ಗಮನ ಸೆಳೆದಿದ್ದಾರೆ. ಇನ್ನೂ ಹುಬ್ಬಳ್ಳಿಯಲ್ಲಿ ಮಾತನಾಡಿದ ಸಚಿವ ಜಗದೀಶ ಶೆಟ್ಟರ್, ಸದ್ಯ ಸಿಎಂ ಖುರ್ಚಿ ಖಾಲಿಯಿಲ್ಲ ಎಂದು ವ್ಯಂಗ್ಯ ಮಾಡಿದ್ದಾರೆ.
ಆಗಷ್ಟ್ ತಿಂಗಳ ಮೊದಲ ಅಥವಾ ಎರಡನೇ ವಾರದಲ್ಲಿ ರಾಜ್ಯದಲ್ಲಿ ಸಂಪುಟ ವಿಸ್ತರಣೆ ಆಗಲಿದೆ. ಸಂಪುಟ ವಿಸ್ತರಣೆಯಲ್ಲಿ ಲಕ್ಷ್ಮಣ ಸವದಿ, ಸಚಿವೆ ಶಶಿಕಲಾ ಜೊಲ್ಲೆ, ಸಿ ಸಿ ಪಾಟೀಲ್, ಪ್ರಭು ಚವ್ಹಾಣ ಸೇರಿ 6 ಜನ ಸಚಿವರಿಗೆ ಸಂಪುಟದಿಂದ ಕೋಕ್ ನೀಡುವ ಸಾಧ್ಯತೆ ಇದೆ. ಇವರ ಸ್ಥಾನಕ್ಕೆ ಹಿರಿಯ ಶಾಸಕ ಉಮೇಶ ಕತ್ತಿ, ಪಿ ರಾಜೀವ, ಚಿತ್ರದುರ್ಗದ ತಿಪ್ಪಾರೆಡ್ಡಿ, ಮೈಸೂರಿನ ಎ ರಾಮದಾಸ್, ಎಂ ಟಿ ಬಿ ನಾಗರಾಜ್, ಶಂಕರ್ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.