ಸಿನಿ ದುನಿಯಾ

ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ ಬಾಲಿವುಡ್‌ ದಿಗ್ಗಜ ಮಹೇಶ ಭಟ್‌ಗೆ ಸಮನ್ಸ್..

ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್‌ನ ನಿರ್ಮಾಪಕ, ನಿರ್ದೇಶಕರಾದ ಮಹೇಶ್ ಭಟ್ ಹಾಗೂ ಕರಣ್ ಜೋಹರ್‌ ಮ್ಯಾನೇಜರ್‌ಗೆ ಮುಂಬೈ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ. ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ತನಿಖೆಯಲ್ಲಿ ಮಹೇಶ್ ಭಟ್ ಮತ್ತು ಕರಣ್ ಜೋಹರ್ ಮ್ಯಾನೇಜರ್‌ನ್ನು ವಿಚಾರ ಕರೆಯಲಾಗುವುದು ಎಂದು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ಹೇಳಿದ್ದಾರೆ.

ಮುಂಬೈ ಪೊಲೀಸರು ಈ ಮೊದಲು ಕೆಲ ಬಾಲಿವುಡ್ ಜನರಿಗೆ ಸಮನ್ಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿತ್ತು. ಇನ್ನೂ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಕರಣ್ ಜಾಹೋರ್ ಹಾಗೂ ಮಹೇಶ ಭಟ್ ಕೂಡ ಕಾರಣ ಆದ್ರೆ ಅವರಿಬ್ಬರನ್ನ ಯಾಕೆ ವಿಚಾರಣೆಗೆ ಒಳಪಡಿಸಿಲ್ಲ ಎಂದು ಸುಶಾಂತ್ ಫ್ಯಾನ್ಸ್ ಹಾಗೂ ನೆಟ್ಟಿಗರಿಂದ ಸಾಮಾಜಿಕ ಜಾಲತಾಣಗಳ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಅಷ್ಟೇ ಅಲ್ಲದೇ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದ ತನಿಖೆಯನ್ನ ಸಿಬಿಐಗೆ ವಹಿಸುವಂತೆ ಸುಶಾಂತ್ ಪ್ರೇಯಸಿ ರಿಚಾ ಚಕ್ರವರ್ತಿ ಟ್ವಿಟರ್ ಮೂಲಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಕೇಳಿಕೊಂಡಿದ್ದಳು.

ಇನ್ನೂ ನಟಿ ಕಂಗನಾ ರಣಾವತ್ ಕೂಡ ಖಾಸಗಿ ಸುದ್ದಿ ವಾಹಿನಿಯ ಸಂದರ್ಶನ ಒಂದರಲ್ಲಿ ಸುಶಾಂತ್ ಸಿಂಗ್ ರಜಪೂತ ಆತ್ಮಹತ್ಯೆ ಮಾಡಿಕೊಂಡಿಲ್ಲ ಅದೊಂದು ವ್ಯವಸ್ಥಿತವಾಗಿ ಮಾಡಿರುವ ಕೊಲೆ, ಇದಕ್ಕೆ ಮಹೇಶ್ ಭಟ್ ಮತ್ತು ಕರಣ್ ಜಾಹೋರ ಕೂಡ ಕಾರಣ ಸರಿಯಾದ ತನಿಖೆಯ ಅವಶ್ಯಕತೆ ಇದೆ ಎಂದು ಹೇಳಿದ್ದರು. ಈ ಎಲ್ಲದರ ಬೆನ್ನಲ್ಲೇ ಸದ್ಯ ಮತ್ತೆ ಇಬ್ಬರಿಗೆ ಮುಂಬಯಿ ಪೊಲೀಸರು ಸಮನ್ಸ್ ನೀಡಿದ್ದು ನಾಳೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.

Show More

Related Articles

Leave a Reply

Your email address will not be published. Required fields are marked *

Back to top button
error: Content is protected !!