ಮಾಸ್ಕ್ ಧರಿಸದೇ ಇದ್ರೆ ಉತ್ತರ ಕೊರಿಯಾದಲ್ಲಿ ವಿಚಿತ್ರ ಶಿಕ್ಷೆ..!

ದೆಹಲಿ- ತನ್ನ ವಿಚತ್ರ ಧೋರಣೆಯಿಂದ ಇಡೀ ಜಗತ್ತಿನಲ್ಲಿ ಕುಖ್ಯಾತಿ ಗಳಿಸಿರೋ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ತನ್ನ ದೇಶದ ಜನರಿಗೆ ಹೊಸ ನಿಯಮ ಜಾರಿಗೆ ತರೋ ತಯಾರಿಯಲ್ಲಿ ಇದ್ದಾನೆ. ಉತ್ತರ ಕೊರಿಯಾ ದೇಶದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳೆ ಇಲ್ಲ ಎಂದು ಇಷ್ಟು ದಿನ ಹೇಳುತ್ತಿದ್ದರು. ಆದರೇ ದೇಶದಲ್ಲಿ ಮಾಸ್ಕ್ ಧರಿಸದೇ ಇದ್ರೆ ಭಯಂಕರ ಶಿಕ್ಷೆ ಜಾರಿ ಮಾಡೋ ತಯಾರಿಯಲ್ಲಿ ಸರ್ವಾಧಿಕಾರಿ ಇದ್ದಾನೆ.
ಕೊರೊನಾ ಸೋಂಕಿನಿಂದ ಅನೇಕ ದೇಶಗಳಲ್ಲಿ ಮಾಸ್ಕ್, ಸ್ಯಾನಿಟೈಜರ್ ಹಾಗೂ ಸಮಾಜಿಕ ಅಂತರ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ನಮ್ಮ ರಾಜ್ಯದಲ್ಲಿ ಮಾಸ್ಕ್ ಧರಿಸದೇ ಇದ್ರೆ 100 ರೂಪಾಯಿ ದಂಡ ವಿಧಿಸಲಾಗುವುದು ಎಂದು ಸರ್ಕಾರ ನಿಯಮ ಜಾರಿಗೆ ಮಾಡಿದೆ.
ಉತ್ತರ ಕೊರಿಯಾದಲ್ಲಿ ಯಾರು ಮಾಸ್ಕ್ ಧರಿಸುವುದಿಲ್ಲವೋ ಅವರು ಮೂರು ತಿಂಗಳು ಕೂಲಿ ಕಾರ್ಮಿಕನಂತೆ ದುಡಿಯವ ಕಠಿಣ ಶಿಕ್ಷೆಗೆ ಆದೇಶ ನೀಡಲಾಗಿದೆ ಎನ್ನಲಾಗಿದೆ. ಈ ಬಗ್ಗೆ ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ಇನ್ನೂ ಲಾಕ್ ಡೌನ್ ಬಗ್ಗೆ ಸರ್ವಾಧಿಕಾರಿ ಚಿಂತಿಸಿದ್ದಾರೆ ಎನ್ನಲಾಗಿದೆ.