ಬಿಎಸ್ ವೈ ಸರ್ಕಾರಕ್ಕೆ ಒಂದು ವರ್ಷದ ಸಂಭ್ರಮ- ಮುಂದೆ ಸಂಪುಟ ಸರ್ಕಸ್..!

ಬೆಂಗಳೂರು- ರಾಜ್ಯದಲ್ಲಿ ಬಿ ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರಕ್ಕೆ ಇದೀಗ ಒಂದು ವರ್ಷದ ಸಂಭ್ರಮ. ಸಿಎಂಗೆ ಸಂಪುಟ ಸಹೋದ್ಯೋಗಿಗಳು ಸೇರಿ ರಾಜ್ಯದ ಗಣ್ಯರು ಇಂದು ಶುಭಾಷಯ ಕೋರುತ್ತಿದ್ದಾರೆ. ನಾಳೆಯಿಂದಲೇ ಸಂಪುಟ ಸರ್ಕಸ್ ಆರಂಭವಾಗುವ ಎಲ್ಲಾ ಲಕ್ಷಣಗಳು ಗೋಚರವಾಗುತ್ತಿವೆ.
ಸದ್ಯ ಬಿಎಸ್ ಯಡಿಯೂರಪ್ಪ ಸಂಪುಟದಲ್ಲಿ ಕೇವಲ 6 ಸಚಿವ ಸ್ಥಾನಗಳು ಖಾಲಿ ಇವೆ. ಆದರೇ ಆಕಾಂಕ್ಷಿಗಳು ಮಾತ್ರ ಅನೇಕ ಜನ ಇದ್ದಾರೆ. ವಲಸೆ, ಜಾತಿ, ಪ್ರಾದೇಶಿಕ, ಸಂಘ ಪರಿವಾರ ಹಿನ್ನೆಲೆ ಹೀಗೆ ಅನೇಕರು ಈಗಾಗಲೇ ಲಾಭಿ ಆರಂಭಿಸಿದ್ದಾರೆ. ಸಂಪುಟ ವಿಸ್ತರಣೆ ಮಾತ್ತೊಮ್ಮೆ ಗಜ ಪ್ರಸವ ಆಗೋ ಎಲ್ಲಾ ಸಾಧ್ಯತೆಗಳು ಇವೆ.
ಉತ್ತರ ಕರ್ನಾಟಕದ ಅನೇಕ ಶಾಸಕರು ಕಳೆದ ಕೆಲ ತಿಂಗಳ ಹಿಂದೆ ಬೆಂಗಳೂರಿನಲ್ಲಿ ರಹಸ್ಯ ಸಭೆಯ ಮೂಲಕ ಬಿ ಎಸ್ ವೈಗೆ ಪರೋಕ್ಷ ಎಚ್ಚರಿಕೆ ನೀಡಿದ್ದರು. ಆದರೇ ಗುಂಪಿನಲ್ಲಿ ಅಷ್ಟಾಗಿ ಒಗ್ಗಟ್ಟು ಕಾಣದ ಹಿನ್ನೆಲೆಯಲ್ಲಿ ಸಭೆಯ ಫಲಿತಾಂಶ ಸರ್ಕಾರದ ಮೇಲೆ ಬಿದ್ದಿಲ್ಲ.
ಆಪರೇಷನ್ ಕಮಲದ ಮೂಲಕ ಬಿಜೆಪಿಗೆ ಸೇರ್ಪಡೆಯಾಗಿ ಸದ್ಯ ವಿಧಾನಸಭೆ ಸದಸ್ಯರಾಗಿರೋ ಎಂ ಟಿ ಬಿ ನಾಗರಾಜ್, ಶಂಕರ, ಎಚ್ ವಿಶ್ವನಾಥ ಈ ಸಲ ಸಂಪುಟದಲ್ಲಿ ಸೇರ್ಪಡೆಯಾಗಲು ತುದಿಗಾಲಿಯಲ್ಲಿ ನಿಂತಿದ್ದಾರೆ. ಜತೆಗೆ ಬಿಜೆಪಿಯ ಹಿರಿಯ ಶಾಸಕ ಉಮೇಶ ಕತ್ತಿ, ಸಿಎಂ ಆಪ್ತ ಮುರುಗೇಶ ನಿರಾಣಿ ಸಹ ಉತ್ಸಾಹ ತೋರಿದ್ದಾರೆ. ಬಿಜೆಪಿ ಸರ್ಕಾರ ಸಂದರ್ಭದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಿ ಪಿ ಯೋಗೇಶ್ವರ ಸಹ ಈ ಭಾರಿ ಸಂಪುಟ ಸೇರಲು ಪ್ರಯತ್ನ ಆರಂಭಿಸಿದ್ದಾರೆ.
ಬಿಜೆಪಿ ಸರ್ಕಾರದಲ್ಲಿ ಕಲಬುರ್ಗಿ, ರಾಯಚೂರು, ಯಾದಗಿರಿ, ಕೊಪ್ಪಳ ಹಾಗೂ ವಿಜಯಪುರ ಜಿಲ್ಲೆಗಳಿಗೆ ಸಂಪುಟದಲ್ಲಿ ಪ್ರಾತ್ಯನಿಧ್ಯವೇ ಸಿಕಿಲ್ಲ. ಈ ಭಾಗದ ಮುಖಂಡರಿಂದ ಸಚಿವ ಸ್ಥಾನಕ್ಕಾಗಿ ಭರ್ಜರಿ ಲಾಭಿ ಇದೆ. ಬಿಜೆಪಿ ಭದ್ರಕೋಟೆಯಾಗಿರೋ ಕರವಾಳಿ, ಮೈಸೂರು ಜಿಲ್ಲೆಗೂ ಸಚಿವ ಸಂಪುಟದಲ್ಲಿ ಪ್ರಾತಿನಿದ್ಯ ಬೇಕು ಎನ್ನುವ ಕೂಗು ಕೇಳಿ ಬುರ್ತಿದೆ.
ಸಂಪುಟ ವಿಸ್ತರಣೆ ಸದ್ಯ ಸಿಎಂ ಬಿಎಸ್ ಯಡಿಯೂರಪ್ಪಗೆ ದೊಡ್ಡ ಸವಾಲ್ ಆಗಿದೆ. ಸಿಎಂ ಬಿಎಸ್ ವೈ ಸಂಪುಟ ವಿಸ್ತರಣೆ ಮಾಡಲಿದ್ದಾರೋ ಅಥವಾ ಸಂಪುಟ ಪುನರ್ ರಚನೆ ಮಾಡಲಿದ್ದಾರೆ ಎಂಬುದು ಕುತೂಹಲ ಮನೆ ಮಾಡಿದೆ. ಸಂಪುಟ ಪುನರ್ ರಚನೆ ಮಾಡಿ ಕೆಲ ಹಿರಿಯ ಶಾಸಕರಿಗೆ ಕೋಕ್ ಕೊಟ್ಟು ಹೊಸಬರಿಗೆ ಅವಕಾಶ ಕೊಡುವ ಸಾಧ್ಯತೆಗಳು ಸಹ ಇವೆ.