ಸಿನಿ ದುನಿಯಾ
ಸಂಸದೆ ಸುಮಲತಾ, ನಟ ಧ್ರುವ ಸರ್ಜಾ ಕೊರೊನಾ ಸೋಂಕಿನಿಂದ ಗುಣಮುಖ

ಬೆಂಗಳೂರು- ಮಂಡ್ಯ ಸಂಸದೆ ಸುಮಲತಾ, ಧ್ರುವ ಸರ್ಜಾ ಪತ್ನಿ ಪ್ರೇರಣಾ ಕೊರೊನಾ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಟ್ವಿಟರ್ ಮೂಲಕ ಈ ವಿಚಾರನ್ನು ಅವರೇ ಹೇಳಿಕೊಂಡಿದ್ದು, ಈ ಸಂದರ್ಭದಲ್ಲಿ ಧೈರ್ಯ ಹೇಳಿದ ಎಲ್ಲರಿಗೂ ಧನ್ಯವಾದ ಎಂದಿದ್ದಾರೆ.
ಮಂಡ್ಯ ಸಂಸದೆ ಆಗಿರೋ ಸುಮಲತಾ ಈಗ ಚೇತರಿಸಿಕೊಂಡಿದ್ದು, ನನ್ನ ಆರೋಗ್ಯದ ಬಗ್ಗೆ ಪ್ರಾರ್ಥನೆ ಮಾಡಿದ ಎಲ್ಲರಿಗೂ ಧನ್ಯವಾದ. ಇನ್ನೂ ಕೆಲ ವಾರಗಳ ಕಾಲ ವಿಶ್ರಾಂತಿಗೆ ವೈದ್ಯರು ಸೂಚನೆ ನೀಡಿದ್ದಾರೆ. ನಂತರ ಎಲ್ಲರನ್ನು ಭೇಟಿಯಾಗುತ್ತೇನೆ. ವಿಶೇಷವಾಗಿ ವೈದ್ಯರನ್ನು ಭೇಟಿ ಮಾಡಿ ಧನ್ಯವಾದ ಹೇಳುತ್ತೇನೆ ಎಂದು ಹೇಳಿದ್ದಾರೆ.