ಬಿಮ್ಸ್ ಆಸ್ಪತ್ರೆಯ ಮೇಲೆ ದಾಳಿ ಪ್ರಕರಣ- 14ಜನರ ಬಂಧಿಸಿದ ಎಪಿಎಂಸಿ ಪೊಲೀಸರು..!

ಬೆಳಗಾವಿ- ಬೆಳಗಾವಿ ಬಿಮ್ಸ್ ಆಸ್ಪತ್ರೆಯ ಮುಂಭಾಗದಲ್ಲಿ ನಿಂತಿದ್ದ ಆ್ಯಂಬುಲೆನ್ಸ್ ಬೆಂಕಿ ಹಚ್ಚಿ ಉದ್ರಿಕ್ತರ ಗುಂಪು ತಡರಾತ್ರಿ ಗಲಾಟೆ ಮಾಡಿತ್ತು. ಈ ಸಂಬಂಧ ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಬಿಮ್ಸ್ ಸಿಬ್ಬಂಧಿ, ರೋಗಿಗಳ ಆತಂಕ್ಕೆ ಕಾರಣವಾಗಿತ್ತು. ಸದ್ಯ ಬೆಳಗಾವಿ ಪೊಲೀಸರು ಪ್ರಕರಣ ಸಂಬಂಧ 14 ಜನರನ್ನು ಬಂಧಿಸಿದ್ದಾರೆ.
ಬೆಳಗಾವಿಯ ಘೀ ಗಲ್ಲಿಯ ವ್ಯಕ್ತಿಯೊಬ್ಬರು ತೀವ್ರ ಉಸಿರಾಟ ಸಮಸ್ಯೆ ಹಿನ್ನೆಲೆಯಲ್ಲಿ ಇದೇ ಜುಲೈ 19ರಂದು ಆಸ್ಪತ್ರೆಗೆ ದಾಖಲಾಗಿದ್ದನು. ಆದರೇ ನಿನ್ನೆ ಕೊರೊನಾ ಸೋಂಕು ಇರೋದು ಖಚಿತವಾಗಿದ್ದು, ವ್ಯಕ್ತಿಯನ್ನು ಐಸಿಯುಗೆ ದಾಖಲಿಸಿ ಚಿಕಿತ್ಸೆ ಕೊಡಲು ವ್ಯವಸ್ಥೆ ಮಾಡಲಾಗಿತ್ತು. ಆದರೇ ರೋಗಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದನು.
ಈ ವಿಚಾರ ತಿಳಿದ ಮೃತನ ಕಡೆಯುವರು ಬಿಮ್ಸ್ ಆಸ್ಪತ್ರೆಯ ಮೇಲೆ ಕಲ್ಲು ತೂರಾಟ ನಡೆಸಿದ ದಾಂಧಲೆ ಮಾಡಿದ್ದರು. ಅಷ್ಟೇ ಅಲ್ಲ ಬಿಮ್ಸ್ ಆಸ್ಪತ್ರೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ಆ್ಯಂಬುಲೆನ್ಸ್ ವಾಹನಕ್ಕೆ ಬೆಂಕಿ ಹಚ್ಚಿದ್ದರು. ಆಸ್ಪತ್ರೆಯ ಸಿಬ್ಬಂಧಿ ಮೇಲೆ ಹಲ್ಲೆ ನಡೆಸಲು ಸಹ ದುಷ್ಕರ್ಮಿಗಳು ಯತ್ನ ಮಾಡಿದ್ದರು.
ಪ್ರಕರಣ ತೀವ್ರ ಸ್ವರೂಪ ಪಡೆದ ತಕ್ಷಣ ಸ್ಥಳಕ್ಕೆ ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಸೇರಿ ಅನೇಕರು ಭೇಟಿ ನೀಡಿದ್ರು. ಈ ಬಗ್ಗೆ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ನಿನ್ನೆಯಿಂದಲೇ ಕಾರ್ಯಾಚರಣೆ ನಡೆಸಿದ ಪೊಲೀಸರು 14ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೂಳಿದ ಆರೋಪಿಗಳನ್ನು ಶೀಘ್ರದಲ್ಲಿಯೇ ಬಂಧಿಸಲು ಬಲೆ ಹಾಕಲಾಗಿದೆ.