ಕ್ರೈಂ

ಹುಟ್ಟು ಹಬ್ಬದ ದಿನವೇ ಭೀಮಾ ತೀರದ ಮಹಾದೇವ ಸಾಹುಕಾರ್ ಬೈರಗೊಂಡ ಅರೆಸ್ಟ್..!

ವಿಜಯಪುರ- ಹಣಕ್ಕಾಗಿ ಚಿನ್ನದ ವ್ಯಾಪಾರಿಗೆ ಜೀವ ಬೇದರಿಕೆ ಹಾಕಿದ್ದ ಭೀಮಾ ತೀರದ ಮಹಾದೇವ ಸಾಹುಕಾರ್ ಬೈರಗೊಂಡನನ್ನ ಪೊಲೀಸರು ಬಂಧಿಸಿದ್ದಾರೆ. ಚಡಚಣ ಪೊಲೀಸರು ಬೈರಗೊಂಡ ನನ್ನು ಬಂಧಿಸಿ ಕೊರೊನಾ ಸೋಂಕು ಪರೀಕ್ಷೆಗೆ ಒಳಪಡಿಸಿದ್ದಾರೆ. ಹುಟ್ಟು ಹಬ್ಬದ ದಿನವೇ ಬೈರಗೊಂಡ ಬಂಧನಕ್ಕೆ ಒಳಗಾಗಿದ್ದು, ಭೀಮಾ ತೀರದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಮಹಾದೇವ ಭೈರಗೊಂಡ ಜುಲೈ 19ರಂದು ತನ್ನ ತೋಟದ ಮನೆಯಲ್ಲಿ ಇಂಡಿಯ ಚಿನ್ನದ ವ್ಯಾಪಾರಿ ನಾಮದೇವ ಡಾಂಗೆಗೆ ಜೀವ ಬೇದರಿಕೆ ಹಾಕಿದ್ದನು. ಎರಡು ದಿನದಲ್ಲಿ 5 ಕೋಟಿ ರೂಪಾಯಿ, 3 ಕೆಜಿ ಚಿನ್ನ ಕೊಡಬೇಕು ಇಲ್ಲವಾದಲ್ಲಿ ಕೊಲೆ ಮಾಡುವುದಾಗಿ ಬೇದರಿಕೆ ಹಾಕಿದ್ದನು.

ಈ ಸಂಬಂಧ ಚಿನ್ನದ ವ್ಯಾಪರಿ ನಾಮದೇವ ಗಾಂಡೆ ಚಡಚಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಮಹಾದೇವ ಸಾಹುಕಾರ್ ಬೈರಗೊಂಡ ವಿರುದ್ಧ ಕಲಂ 384, 511, 504, 506 ಐಪಿಸಿ 34ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಧಿಸಿ ನ್ಯಾಯಾಲಯದ ಮುಂದೆ ಪೊಲೀಸರು ಹಾಜರು ಪಡಿಸಿದ್ದಾರೆ.

ಬೇದರಿಕೆ ಪ್ರಕರಣ ಸಂಬಂಧ ತಲೆ ಮರೆಸಿಕೊಂಡಿರೋ ಇನ್ನಿಬ್ಬರು ಆರೋಪಿಗಳಿಗಾಗಿ ಪೊಲೀಸರು ಬಲೆ ಬಿಸಿದ್ದಾರೆ. ಬಂಧಿತ ಮಹಾದೇವ ಬೈರಗೊಂಡ ನನ್ನು ಕೊರೊನಾ ಸೋಂಕಿನ ತಪಾಸಣೆಗೆ ಪೊಲೀಸರು ಒಳ ಪಡಿಸಿದ್ದಾರೆ.

Show More

Related Articles

Leave a Reply

Your email address will not be published. Required fields are marked *

Back to top button
error: Content is protected !!