ಕರ್ನಾಟಕ

ಮುಂಬೈ ಮಿತ್ರ ಮಂಡಳಿಯ ಸದಸ್ಯ ಎಚ್ ವಿಶ್ವನಾಥ್ ಸೇರಿ 5 ಜನರನ್ನು ವಿಧಾನ ಪರಿಷತ್ ಗೆ ನಾಮನಿರ್ದೇಶನ.!

ಬೆಂಗಳೂರು- ಒಂದು ವರ್ಷದ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್, ಜೆಡಿಎಸ್ ಸಮ್ಮೀಶ್ರ ಸರ್ಕಾರದ ಪತನಕ್ಕೆ ಕಾರಣವಾಗಿದ್ದು ರಮೇಶ ಜಾರಕಿಹೊಳಿ ಮತ್ತು ಟೀಂ ಎನ್ನುವುದು ರಾಜ್ಯ ಜನರಿಗೆ ಗೊತ್ತಿದೆ. ಸರ್ಕಾರ ವಿರುದ್ಧ ಬಂಡಾಯ ಎದ್ದಿದ್ದ ಬಹುತೇಕರು ಇದೀಗ ವಿಧಾನಸಭೆ, ವಿಧಾನ ಪರಿಷತ್ ಸೇರಿಕೊಂಡಿದ್ದಾರೆ. ಇದೀಗ ಮುಂಬೈ ಮಿತ್ರ ಮಂಡಳಿಯ ಮತ್ತೊಬ್ಬ ಸದಸ್ಯ ಸಹ ವಿಧಾನ ಪರಿಷತ್ ಗೆ ರಾಜ್ಯಪಾಲರ ಮೂಲಕ ನಾಮನಿರ್ದೇಶನಗೊಂಡಿದ್ದಾರೆ.

ಎಚ್. ವಿಶ್ವನಾಥ್, ಸಿ ಪಿ ಯೋಗೇಶ್ವರ್, ಭಾರತಿ ಶೆಟ್ಟಿ, ಸಾಯಿಬಣ್ಣ ತಳವಾರ್, ಶಾಂತಾರಾಂ ಸಿದ್ದಿ ಈ ಐವರ ಹೆಸರುಗಳನ್ನು ಈಗ ರಾಜ್ಯಪಾಲರು ವಿಧಾನ ಪರಿಷತ್ ಗೆ ನಾಮ ನಿರ್ದೇಶನ ಮಾಡಿದ್ದಾರೆ.

ಉಪ ಚುನಾವಣೆಯಲ್ಲಿ ಹುಣಸೂರು ಕ್ಷೇತ್ರದಿಂದ ಸ್ಪರ್ಧಿಸಿ ಸೋತ್ತಿದ್ದ ಎಚ್ ವಿಶ್ವನಾಥ್ ರಾಜಕೀಯ ಜೀವನ ಅಂತ್ಯವಾಯಿತು ಎಂದೇ ಅನೇಕರು ವಿಶ್ಲೇಷಣೆ ಮಾಡಿದ್ದರು. ಇನ್ನೂ ಆಪರೇಷನ್ ಕಮಲದಲ್ಲಿ ಮಹತ್ವದ ಪಾತ್ರ ವಹಿಸಿದ್ದ ಚನ್ನಪಟ್ಟಣ ಕ್ಷೇತ್ರ ಮಾಜಿ ಶಾಸಕ ಸಿ ಪಿ ಯೋಗೇಶ್ವರ ಅವರನ್ನು ಸಹ ವಿಧಾನ ಪರಿಷತ್ ಗೆ ನಾಮನಿರ್ದೇಶ ಮಾಡಲಾಗಿದೆ. ಈ ಮೂಲಕ ರಾಮನಗರ ಜಿಲ್ಲೆಯಲ್ಲಿ ಡಿಕೆಶಿ, ಎಚ್ ಡಿಕೆ ನಡುವೆ ಮತ್ತೊಂದು ಪರವ್ ಸೆಂಟರ್ ಹುಟ್ಟಿಕೊಂಡಿದೆ.

ವಿಶ್ವವಿದ್ಯಾಲಯದ ಕುಲಪತಿ, ಕುಲಸಚಿವ ಹುದ್ದೆ ಕೇಳಿದ್ದ ಶಾಂತರಾಮ್ ಸಿದ್ದಿ ಅವರನ್ನು ವಿಧಾನ ಪರಿಷತ್ ಗೆ ಕಳುಹಿಸುವ ಮೂಲಕ ಬಿಜೆಪಿ ಮತ್ತೊಮ್ಮೆ ಅಚ್ಚರಿಯ ಆಯ್ಕೆ ಮಾಡಿದೆ.

Show More

Related Articles

Leave a Reply

Your email address will not be published. Required fields are marked *

Back to top button
error: Content is protected !!