ಕರ್ನಾಟಕ
ಕನ್ನಡದಲ್ಲಿ ಈರಣ್ಣ ಕಡಾಡಿ ಪ್ರಮಾಣ ವಚನ ಸ್ವೀಕಾರ

ಬೆಳಗಾವಿ- ಇತ್ತೀಚಿಗೆ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾದ ನಾಲ್ವರು ನೂತನ ರಾಜ್ಯಸಭಾ ಸದಸ್ಯರು ಪೈಕಿ ಇಂದು ಕೆಲವರು ಪ್ರಮಾಣ ವಚನ ಸ್ವೀಕಾರ ಮಾಡಿದ್ರು. ಬೆಳಗಾವಿಯ ಈರಣ್ಣ ಕಡಾಡಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡುವ ಮೂಲಕ ಗಮನ ಸೆಳೆದ್ರು.
ರಾಜ್ಯಸಭೆ ಪ್ರವೇಶಕ್ಕೆ ಬೆಳಗಾವಿಯ ಘಟಾನುಘಟಿ ನಾಯಕರು ಕಸರತ್ತು ನಡೆಸಿದ್ದರು. ಆದರೇ ಎಲ್ಲರನ್ನೂ ಹಿಂದಿಕ್ಕಿ ಪಕ್ಷ ನಿಷ್ಠೆ ಹೊಂದಿದ್ದ ಈರಣ್ಣ ಕಡಾಡಿಯನ್ನು ಬಿಜೆಪಿ ರಾಷ್ಟ್ರೀಯ ನಾಯಕರು ಆಯ್ಕೆ ಮಾಡಿದ್ದರು. ಕನ್ನಡದಲ್ಲಿ ಪ್ರವಾಣ ವಚನ ಸ್ವೀಕರಿಸುವ ಮೂಲಕ ಈರಣ್ಣ ಕಡಾಡಿ ರಾಜ್ಯಸಭೆಯ ಇನಿಂಗ್ಸ್ ಆರಂಭಿಸಿದ್ದಾರೆ.