ಜಿಲ್ಲಾ

ಚಿರತೆ ರಕ್ಷಣೆಗೆ ಬಾವಿಯ ಒಳಗೆ ಇಳಿದ ಆರ್ ಎಫ್ ಓ- ಆಪರೇಷನ್ ಸಕ್ಸಸ್..!

ಮೈಸೂರು- 100 ಅಡಿಯ ಬಾವಿಯೊಳಗೆ ಬಿದ್ದಿದ್ದ ಚಿರತೆ ರಕ್ಷಣೆಗೆ ಸ್ವತಃ ಆರ್ ಎಫ್ ಓ ಬಾವಿಯ ಒಳಗೆ ಇಳಿದ ಘಟನೆ ನಡೆದಿದೆ. ಮೈಸೂರು ಜಿಲ್ಲೆಯ ಎಚ್ ಡಿ ಕೋಟೆ ತಾಲೂಕಿನ ಖಾರಾಪುರದಲ್ಲಿ ಬಾವಿಗೆ ಬಿದಿದ್ದ ಚಿರತೆ ಕೊನೆಗೆ ರಕ್ಷಿಸಲಾಗಿದೆ. ಚಿರತೆ ರಕ್ಷಣೆ 2 ದಿನಗಳ ಕಾರ್ಯಾಚರಣೆ ಸಕ್ಸಸ್ ಆಗಿದೆ.
ಮೂರು ವರ್ಷದ ಹೆಣ್ಣು ಚಿರತೆ ಬೇಟೆಯಾಡೋ ಸಂದರ್ಭದಲ್ಲಿ ಬಾವಿಗೆ ಬಿದ್ದಿತ್ತು. ಈ ವಿಚಾರ ತಿಳಿದ ಸ್ಥಳೀಯರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ರು. ಚಿರತೆ ಮೇಲತ್ತಲು ಅರವಳಿಗೆ ಮದ್ದು ನೀಡುವುದು ಅನಿರ್ವಾಯವಾಗಿತ್ತು. ಇದಕ್ಕಾಗಿ ಸ್ವತಃ ಆರ್ ಎಫ್ ಓ ಸಿದ್ದರಾಜು ಬಾವಿಗೆ ಇಳಿದು ಅರವಳಿಕೆ ಮದ್ದು ನೀಡಿದ್ದಾರೆ.
ನಂತರ ಚಿರತೆಯನ್ನು ಮೇಲೆತ್ತಿ ನಾಗರಹೊಳೆ ಅಭಯಾರಣ್ಯ ಪ್ರದೇಶಕ್ಕೆ ಬಿಡಲಾಗಿದೆ. ಚಿರತೆ ರಕ್ಷಣೆಗೆ ಅರಣ್ಯ ಇಲಾಖೆಯ ಮಾಡಿರೋ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

Show More

Related Articles

Leave a Reply

Your email address will not be published. Required fields are marked *

Back to top button
error: Content is protected !!